ಕಳೆದ 15 ವರ್ಷಗಳಿಂದ ಆರ್ಸಿಬಿಗಾಗಿ ಸೇವೆ ಮಾಡಿದ ವಿರಾಟ್, ಈಗ ಆಟಗಾರನಾಗಿ 16ನೇ ವರ್ಷ ಆರ್ಸಿಬಿಗೆ ಐಪಿಎಲ್ ಎಂಬ ಕಿರೀಟ ಮುಡಿಗೇರಿಸಲು ಪಣ ತೊಟ್ಟಿದ್ದಾರೆ. ಇದು ನಿಜವಾಗುತ್ತೋ ಇಲ್ವೋ.. ಆದ್ರೆ, ಐಪಿಎಲ್ಗೆ ಸಜ್ಜಾಗ್ತಿರುವ ಈ ಹೊತ್ತಲ್ಲೇ ವಿರಾಟ್ ಸ್ಪೋಟಕ ಮಾಹಿತಿ ಒಂದನ್ನ ಬಿಚ್ಚಿಟ್ಟಿದ್ದಾರೆ. ಅದು ಬೇರೇನು ಅಲ್ಲ.! ಆರ್‌ಸಿಬಿ ನಾಯಕತ್ವದ ಬಗ್ಗೆ..!
2 ವರ್ಷದ ಬಳಿಕ ನಾಯಕತ್ವದ ರಹಸ್ಯ ಬಿಚ್ಚಿಟ್ಟ ಕೊಹ್ಲಿ!
2008ರಿಂದ 2012ರ ತನಕ ಆರ್‌ಸಿಬಿ ತಂಡದ ರನ್ ಮಷಿನ್ ಆಗಿ ಕೆಲಸ ಮಾಡಿದ್ದ ವಿರಾಟ್, 2013ರಲ್ಲಿ ನಾಯಕತ್ವದ ಚುಕ್ಕಾಣಿ ಹಿಡಿದರು. ಆರ್‌ಸಿಬಿ ಪಾಲಿನ ನಾಯಕನಾಗಿ ಮಾತ್ರವಲ್ಲದೆ. ಆಪತ್ಭಾಂದವನಾಗಿ ಹೋರಾಟ ನಡೆಸಿದ್ದ ಕೊಹ್ಲಿ, ತಂಡ ಬಲಿಷ್ಠವಾಗಿರಲಿ, ಆಡದಿರಲಿ ಏಕಾಂಗಿಯಾಗಿ ಕೆಚ್ಚೆದೆಯ ಹೋರಾಟ ನಡೆಸಿದ ಒನ್ ಆ್ಯಂಡ್ ಒನ್ಲಿ ಆಟಗಾರ. ಆದ್ರೆ. 2021ರಲ್ಲಿ ವಿರಾಟ್ ಕೊಹ್ಲಿಯು ಒಂದು ನಿರ್ಣಯ ಅಚ್ಚರಿಗೆ ದೂಡಿತ್ತು. ಅದೇ ಆರ್‌ಸಿಬಿ ನಾಯಕತ್ವ ತ್ಯಜಿಸಿದ್ದು..!
ಅಂದು ಬರಿದಾಗಿತ್ತು ವಿರಾಟ್ ಕೊಹ್ಲಿ ಮೆದುಳು..!
ಯೆಸ್.! 9 ಸೀಸನ್ಗಳಲ್ಲಿ ಆರ್‌ಸಿಬಿ ತಂಡವನ್ನ ಮುನ್ನಡೆಸಿದ್ದ ವಿರಾಟ್, 2021ರ ಐಪಿಎಲ್ ಆರಂಭಕ್ಕೂ ಮುನ್ನ ನಾಯಕತ್ವದಿಂದ ಕೆಳಗಿಳಿಯುತ್ತಾರೆ. ಇದಕ್ಕೆ ಮೇನ್ ರೀಸನ್.. ಪ್ರತಿ ವಿಚಾರದಲ್ಲಿ ಆತ್ಮ ವಿಶ್ವಾಸದಲ್ಲಿ ಇರುತ್ತಿದ್ದ ವಿರಾಟ್, ಆತ್ಮ ವಿಶ್ವಾಸ ಕಳೆದುಕೊಂಡಿದ್ದು. ಅಷ್ಟೇ ಅಲ್ಲ.! ಎಲ್ಲವನ್ನೂ ನಿಭಾಯಿಸುವ ಶಕ್ತಿಯನ್ನೇ ಕಳೆದುಕೊಂಡಿದ್ದ ಕೊಹ್ಲಿ, ಮೆದುಳೂ ಕೂಡ ಖಾಲಿ ಖಾಲಿಯಾಗಿತ್ತು. ಇದನ್ನ ಸ್ವತಃ ವಿರಾಟ್ ಕೊಹ್ಲಿಯೇ ಆರ್‌ಸಿಬಿ ಮಹಿಳಾ ತಂಡದೊಂದಿಗಿನ ನಡೆದಿದ್ದ ಸಂವಾದದಲ್ಲಿ ಹೇಳಿಕೊಂಡಿದ್ದಾರೆ.
ನನ್ನ ಮೆದುಳು ಬರಿದಾಗಿತ್ತು!
ನನ್ನ ನಾಯಕತ್ವದ ಅವಧಿ ಮುಗಿಯುವ ಸಮಯದಲ್ಲಿ, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನನಗೆ ನನ್ನ ಮೇಲೆ ಹೆಚ್ಚು ವಿಶ್ವಾಸವಿರಲಿಲ್ಲ. ಆ ಸಂದರ್ಭ ನನ್ನ ಮೇಲೆ ನನಗೇ ನಂಬಿಕೆ ಉಳಿದಿರಲಿಲ್ಲ. ನನ್ನ ಬತ್ತಳಿಕೆಯೂ ಬರಿದಾಗಿತ್ತು. ನಾಯಕತ್ವದ ಹೊಣೆ ಮುಂದೆ ನಿರ್ವಹಿಸಲು ಆಗಲ್ಲ ಎಂದು ನನಗೇ ಅನಿಸುತ್ತಿತ್ತು. ಆದ್ದರಿಂದ ನಾಯಕತ್ವ ಬಿಟ್ಟುಬಿಡುವ ನಿರ್ಧಾರ ಕೈಗೊಂಡೆ.
– ವಿರಾಟ್ ಕೊಹ್ಲಿ, ಆರ್‌ಸಿಬಿ ಮಾಜಿ ನಾಯಕ
ಯೆಸ್.! ಇದೇ ನಾಯಕತ್ವ.. ಇದೇ ಆತ್ಮ ವಿಶ್ವಾಸ, ಭರವಸೆಯ ಕೊರತೆ.. ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಮೇಲೆ ಪರಿಣಾಮ ಬೀರಿತ್ತು. ಇದಕ್ಕೆ ಬೆಸ್ಟ್ ಎಕ್ಸಾಂಪಲ್. ಟೀಮ್ ಇಂಡಿಯಾ ಪರ ಹಾಗೂ ಆರ್‌ಸಿಬಿ ಪರ ನೀಡಿದ್ದ ಪರ್ಫಾಮೆನ್ಸ್ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post