ಮೈಸೂರು: ಮದ್ಯಪಾನದ ಅಮಲಿನಲ್ಲಿ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ರೌಡಿಯನ್ನ ಕೊಲೆ ಮಾಡಿರುವ ಘಟನೆ ನಗರದ ಚಾಮರಾಜ ಜೋಡಿ ರಸ್ತೆಯಲ್ಲಿ ನಡೆದಿದೆ.
ಮೈಸೂರಿನ ಕಾಕರವಾಡಿಯ ನಿವಾಸಿ ಶ್ರೀಗಂಧ ಕೊಲೆಯಾದ ರೌಡಿಶೀಟರ್. ಶ್ರೀಗಂಧನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಆರೋಪಿ ರವಿ. ಇಬ್ಬರು ಮದ್ಯಪಾನ ಮಾಡಿದ್ದಾರೆ. ಈ ವೇಳೆ ಯಾವುದೋ ವಿಷಯಕ್ಕೆ ಜಗಳವಾಗಿದೆ. ಜಗಳವು ತಾರಕಕ್ಕೇರಿದಾಗ ರವಿಯು ಚಾಕುವಿನಿಂದ ರೌಡಿ ಶ್ರೀಗಂಧನಿಗೆ ಇರಿದಿದ್ದಾನೆ. ಇದರಿಂದ ಆತ ಸಾವನ್ನಪ್ಪಿದ್ದಾನೆ. ಇನ್ನು ಆರೋಪಿ ಮೈಸೂರಿನ ನಾಲಾ ಬೀದಿ ನಿವಾಸಿಯಾಗಿದ್ದಾನೆ. ಈ ಬಗ್ಗೆ ಕೆ.ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post