ಗೋಲ್ ಗಪ್ಪಕ್ಕೆ ಮನಸೋಲದವರು ಯಾರಿಲ್ಲ ಹೇಳಿ?. ಯುವತಿಯರಂತೂ ಇಂತಹ ತಿನಿಸಿಗೆ ಬಾಯಿ ಚಪ್ಪರಿಸದೇ ಬಿಡರು. ಆದರೀಗ ಅಚ್ಚರಿಯ ಸಂಗತಿ ಎಂದರೆ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿದಾ ಕೂಡ ಗೋಲ್ ಗಪ್ಪ ಟೇಸ್ಟ್ಗೆ ಮನಸೋತಿದ್ದಾರೆ. ಒನ್ ಮೋರ್ ಎಂದು ಮತ್ತೊಮ್ಮೆ ಬಡಿಸಿಕೊಂಡು ತಿಂದಿದ್ದಾರೆ. ಬೇಕಾದ್ರೆ ನೀವೇ ನೋಡಿ..
ಫ್ಯೂಮಿಯೊ ಕಿಶಿದಾ ಎರಡು ದಿನಗಳ ಕಾಲ ಭಾರತ ಪ್ರವಾಸ ಮಾಡಿದ್ದಾರೆ. ಈ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್ ಪ್ರಧಾನಿಯನ್ನು ಸ್ವಾಗತಿಸಿದ್ದಾರೆ. ಬಳಿಕ ಅವರನ್ನು ದೆಹಲಿಯ ಬುದ್ಧ ಜಯಂತಿ ಪಾರ್ಕ್ಗೆ ಕರೆದುಕೊಂಡು ಹೋಗಿ ಬೋಧಿ ವೃಕ್ಷಕ್ಕೆ ಪುಷ್ಪಾರ್ಷನೆ ಮಾಡಿದ್ದಾರೆ. ಇದೇ ವೇಳೆ ಗೋಲ್ ಗಪ್ಪ ಮತ್ತು ಲಸ್ಸಿ ಸವಿಯುವ ಮೂಲಕ ಭಾರತದ ವಿಶೇಷ ಖಾದ್ಯಕ್ಕೆ ಮನಸೋತಿದ್ದಾರೆ.
जब खाने की चीज़ हो..
और मैं Comment ना करू ?भैय्या एक सुखा please ! 😁
Looks like even The PM of Japan couldn't resist himself from trying India's Iconic "Golgappe".
Guruji का अंदाज ही अलग हैं 😉 pic.twitter.com/cImjWZqnwf
— Temjen Imna Along (@AlongImna) March 21, 2023
ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿದಾ ಗೋಲ್ ಗಪ್ಪ ಸವಿಯುವ ವಿಡಿಯೋ ಇದೀಗ ಟ್ವಿಟ್ಟರ್ನಲ್ಲಿ ಹರಿದಾಡುತ್ತಿದೆ. ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅಲೋಂಗ್ ಅವರು ಈ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಗೋಲ್ ಗಪ್ಪ ಟೇಸ್ಟ್ ನೋಡಿದ ಬಳಿಕ ಫ್ಯೂಮಿಯೊ ಕಿಶಿದಾ ಅವರು ಮತ್ತೊಂದು ಪೀಸ್ ಕೊಡಿ ಎಂದು ಕೇಳಿ ಬಡಿಸಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post