ಮೈಸೂರು-ಬೆಂಗಳೂರು ದಶಪಥ ವಿಚಾರದಲ್ಲಿ ನಿಮಗೆ ನಾಚಿಕೆ ಆಗಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಚುನಾವಣಾ ಪ್ರಚಾರದ ಱಲಿಯಲ್ಲಿ ಮಾತನಾಡಿರುವ ನಿಖಿಲ್.. ನರೇಂದ್ರ ಮೋದಿ ದೇಶದ ಪ್ರಧಾನಿ. ಅವರ ಮೇಲೆ ನನಗೆ ಗೌರವ ಇದೆ. ಆದರೆ ಅವರನ್ನು ತರಾತುರಿಯಲ್ಲಿ ಕರೆಸಿ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯನ್ನು ಉದ್ಘಾಟನೆ ಮಾಡಿಸಿದ್ದಾರೆ. ಆ ರಸ್ತೆಯಲ್ಲಿನ ಅವ್ಯಸ್ಥೆ ವಿರುದ್ಧ ನಾನು ಪ್ರತಿಭಟನೆ ಮಾಡಿದ್ದೆ. ಮಾರನೇಯ ದಿನ ಮಳೆ ಬಂದಿದೆ. ರಸ್ತೆ ಸಮುದ್ರವಾಗಿಬಿಟ್ಟಿದೆ ಎಂದರು.
‘ರಸ್ತೆನೋ? ಸಮುದ್ರನೋ? ಕೆರೆನೋ?..’
ಇದೇನು ರಸ್ತೆನೋ? ಸಮುದ್ರನೋ? ಕೆರೆನೋ? ಒಂದೂ ಅರ್ಥ ಆಗೋದಿಲ್ಲ. ಮೈಸೂರು ಸಂಸದರು, ಬಹಳ ಪ್ರಬುದ್ಧರು. ಬಹಳ ಬುದ್ಧಿವಂತರು, ಪ್ರಜ್ಞಾವಂತರು.. ಒಂದು ಮಾತನ್ನು ಹೇಳ್ತಾರೆ. ಮನೆ ಕಟ್ಟಿದಾಗಲೇ ಗೋಡೆಗಳಲ್ಲಿ ಲೀಕೇಜ್ ಬರ್ತದೆ. ಎಲೆಕ್ಟ್ರಿಸಿಟಿ ಪ್ರಾಬ್ಲಂ ಆಗ್ತದೆ ಎಂದು. ಇವತ್ತು ನೀವು ಚರ್ಚೆ ಮಾಡ್ತೀರಲ್ರಿ ಸಂಸದರೇ, ನಿಮಗೆ ನಾಚಿಕೆ ಆಗಬೇಕು. ನಿಮ್ಮ ಮನೆ ಕಟ್ಟೋದು ನಿಮ್ಮ ಜೇಬಿನ ದುಡ್ಡಲ್ಲಿ. ನಮ್ಮ ಮನೆ ಕಟ್ಟೋದು ನಮ್ಮ ಜೇಬಿನ ದುಡ್ಡಿನಲ್ಲಿ. ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ ಮಾಡಿರೋ ದುಡ್ಡು ಅದು ಸರ್ಕಾರದ್ದು.
ಅದು ನಮ್ಮಪ್ಪನ ದುಡ್ಡೂ ಅಲ್ಲ, ನಿಮ್ಮಪ್ಪನ ದುಡ್ಡೂ ಅಲ್ಲ. ಅದು ಜನರು ನೀಡಿರುವ ತೆರಿಗೆ ಹಣದಲ್ಲಿ ನೀವು ರಸ್ತೆ ಮಾಡಿದ್ದೀರಿ. ನೀವು ಮಾಡಿರೋ ರಸ್ತೆಯಲ್ಲಿ ಒಬ್ಬ 270 ರೂಪಾಯಿ ಕಟ್ಟಬೇಕು. ರಾಮದುರ್ಗಕ್ಕೆ ಹೋಗೋನೂ 270 ರೂಪಾಯಿ ಕಟ್ಟಬೇಕು. ಚನ್ನಪಟ್ಟಣಕ್ಕೆ ಹೋಗೋನೂ 270 ರೂಪಾಯಿ ಹಣವನ್ನು ಕಟ್ಟಬೇಕು. ಇದು ಯಾವ ನ್ಯಾಯ ಸ್ವಾಮಿ ಎಂದು ವಾಗ್ದಾಳಿ ನಡೆಸಿದರು.
ನಮ್ಮಪ್ಪನ ದುಡ್ಡೂ ಅಲ್ಲ, ನಿಮ್ಮಪ್ಪನ ದುಡ್ಡೂ ಅಲ್ಲ, ಪ್ರತಾಪ್ ಸಿಂಹಗೆ ನಾಚಿಕೆ ಆಗ್ಬೇಕು -ನಿಖಿಲ್ ಆಕ್ರೋಶ https://t.co/qqeVcoo7kJ #NikhilGowda #Nikhilkumaraswamy #PratapSimha #HDK @Nikhil_Kumar_k @mepratap pic.twitter.com/dCX8WkkbVL
— NewsFirst Kannada (@NewsFirstKan) March 21, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post