ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಆರ್ಸಿಬಿ ಹೋರಾಟ ಅಂತ್ಯಗೊಂಡಿದೆ. ಗುಜರಾತ್ ಜೈಂಟ್ಸ್ ವಿರುದ್ಧ ಯುಪಿ ವಾರಿಯರ್ಸ್ ಗೆಲ್ಲುತ್ತಿದ್ದಂತೆ ಸ್ಮೃತಿ ಮಂದಾನ ಪಡೆ ಟೂರ್ನಿಯಿಂದ ಹೊರಬಿತ್ತು. ಇದರೊಂದಿಗೆ ಚೊಚ್ಚಲ ಆವೃತ್ತಿಯಲ್ಲಿ ಪ್ರಶಸ್ತಿ ಗೆಲ್ಲುವ ಕನಸು ನುಚ್ಚುನೂರಾಗಿದೆ.
ಗೆಲ್ಲಲು 179 ರನ್ ಗುರಿ ಪಡೆದಿದ್ದ ಯುಪಿ ವಾರಿಯರ್ಸ್ ತಂಡ 3 ವಿಕೆಟ್ಗಳ ರೋಚಕ ಗೆಲುವು ಸಾಧಿಸ್ತು. ತಾಲಿಯಾ ಮೆಗ್ರಾಥ್ ಹಾಗೂ ಗ್ರೇಸ್ ಹ್ಯಾರಿಶ್ ಸೊಗಸಾದ ಅರ್ಧಶತಕ ಸಿಡಿಸಿ ಗೆಲುವು ತಂದಿಟ್ರು. ಈ ಗೆಲುವಿನೊಂದಿಗೆ ಅಲಿಸಾ ಹೀಲಿ ಬಳಗ ಪ್ಲೇಆಫ್ಗೆ ಎಂಟ್ರಿಕೊಟ್ಟಿದೆ.
ಇಂದು ಮಧ್ಯಾಹ್ನ 3.30ಕ್ಕೆ ನಡೆದ ಮೊದಲ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ಹಾಗೂ ಆರ್ಸಿಬಿ ತಂಡಗಳು ಮುಖಾಮುಖಿ ಆಗಿದ್ದವು. ಉಭಯ ತಂಡಗಳಿಗೂ ಇದು ಲೀಗ್ನ ಕೊನೆ ಮ್ಯಾಚ್ ಆಗಿತ್ತು. ಈಗ ಸೋಲಿನೊಂದಿಗೆ ಆರ್ಸಿಬಿ ವಿದಾಯ ಹೇಳಿದೆ.
ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿತ್ತು. ಆರ್ಸಿಬಿ ನೀಡಿದ 125 ರನ್ಗಳ ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ 16 ಓವರ್ಗಳಲ್ಲಿ 129 ರನ್ ಸಿಡಿಸಿ ಗೆದ್ದು ಬೀಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post