ಌಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ‘ಕೆಡಿ’ ಸಿನಿಮಾದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಎದುರಾಳಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಬಾಲಿವುಡ್ ಬ್ಯೂಟಿ ಶಿಲ್ಪಾ ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ. ನಟಿ ಶಿಲ್ಪಾ ಶೆಟ್ಟಿ 17 ವರ್ಷಗಳ ಬಳಿಕ ಸ್ಯಾಂಡಲ್ವುಡ್ನತ್ತ ಕಂಬ್ಯಾಕ್ ಮಾಡಿದ್ದಾರೆ.
ನಟಿ ತಮ್ಮ ಮೊದಲ ಹಂತದ ಚಿತ್ರೀಕರಣದಲ್ಲಿ ಭಾಗಿಯಾಗಿದ್ರು ಅನ್ನೋ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಕೆಡಿ ಸಿನಿಮಾದಲ್ಲಿ ಸತ್ಯವತಿ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅದರ ಮೊದಲ ಲುಕ್ ಇಂದು ರಿಲೀಸ್ ಆಗಿದೆ.
ಇದನ್ನು ಓದಿ: 17 ವರ್ಷದ ಬಳಿಕ ಚಂದನವನದತ್ತ ಶಿಲ್ಪಾ ಶೆಟ್ಟಿ! ಧ್ರುವ ಸರ್ಜಾ ‘ಕೆಡಿ’ ಸಿನಿಮಾದಲ್ಲಿ ಸದ್ದಿಲ್ಲದೆ ನಟಿಸಿ ಹೋದ್ರಾ?
ಬಾಲಿವುಡ್ ಬ್ಯುಟಿ ನಟಿ ಶಿಲ್ಪಾ ಶೆಟ್ಟಿ ಅವರನ್ನು ಸ್ಯಾಂಡಲ್ವುಡ್ಗೆ ಪರಿಚಯಿಸಿದ್ದು ಕ್ರೇಜಿ ಸ್ಟಾರ್ ರವಿಚಂದ್ರನ್. 1998ರಲ್ಲಿ ತೆರೆಗೆ ಬಂದ ‘ಪ್ರೀತ್ಸೋದ್ ತಪ್ಪಾ‘ ಸಿನಿಮಾದಲ್ಲಿ ಮೊದಲು ಕಾಣಿಸಿಕೊಂಡರು. ಬಳಿಕ ಅವರದ್ದೇ 2003ರಲ್ಲಿ ಬಂದ ‘ಒಂದಾಗೋಣ ಬಾ‘ ಸಿನಿಮಾದಲ್ಲಿ ನಟಿಸಿದರು. ಇದಾದ ಬಳಿಕ 2005ರಲ್ಲಿ ಉಪೇಂದ್ರ ಜೊತೆಗೆ ‘ಆಟೋ ಶಂಕರ್‘ ಸಿನಿಮಾದಲ್ಲಿ ಶಿಲ್ಪಾ ಶೆಟ್ಟಿ ನಟಿಸಿದ್ದಾರೆ. ಇದೀಗ ಌಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜೊತೆ ‘ಕೆಡಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಈ ಕೆಡಿ ಚಿತ್ರದ ನಿರ್ದೇಶಕ ಪ್ರೇಮ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಬಾಲಿವುಡ್ ಬ್ಯೂಟಿ ಶಿಲ್ಪಾ ಶೆಟ್ಟಿ ಹೊಸ ಲುಕ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಸದ್ಯ ನಟಿ ಶಿಲ್ಪ ಶೆಟ್ಟಿಯನ್ನು ನೋಡಿದ ಅಭಿಮಾನಿಗಳು ಶುಭಾಶಗಳನ್ನು ಕೋರುತ್ತಿದ್ದಾರೆ.
Wishing you all a Happy Ugadi! On this auspicious day, a powerhouse enters the war! Welcoming the powerful @TheShilpaShetty to #KD's battlefield!
Introducing #ShilpaShetty as #Satyavati.@DhruvaSarja @directorprems #VRavichandran @KvnProductions @ArjunJanyaMusic #KDTheDevil pic.twitter.com/J60TSzMdfd
— PREM❣️S (@directorprems) March 22, 2023
ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಚಿತ್ರಪ್ರೇಮಿಗಳೇ’ ಪ್ರತಿದಿನ ಸಂಜೆ 5.27ಕ್ಕೆ ನಿಮ್ಮ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post