ನವದೆಹಲಿ: ಬರೋಬ್ಬರಿ ಆರು ದಶಕಗಳ ಕಾಲ ಸಕ್ರಿಯ ರಾಜಕಾರಣದಲ್ಲಿದ್ದ ಕರ್ನಾಟಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರಿಗೆ ಇಂದು ರಾಷ್ಟ್ರಪತಿ ಭವನದಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಲಾಯ್ತು. ರಾಷ್ಟ್ರಪತಿ ದ್ರೌಪದಿ ಮುರ್ಮು ಎಸ್.ಎಂ ಕೃಷ್ಣ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಐದು ವರ್ಷಗಳ ಹಿಂದೆಯಷ್ಟೇ ಎಸ್.ಎಂ ಕೃಷ್ಣ ಅವರು ಕಾಂಗ್ರೆಸ್ ಜೊತೆಗಿನ 50 ವರ್ಷಗಳ ಒಡನಾಟವನ್ನು ಅಂತ್ಯಗೊಳಿಸಿದ್ರು. ಬಳಿಕ ಬಿಜೆಪಿ ಸೇರಿದ್ದ ಎಸ್.ಎಂ ಕೃಷ್ಣ ಅವರು, ಇತ್ತೀಚೆಗೆ ಸಕ್ರಿಯ ರಾಜಕೀಯದಿಂದಲೂ ನಿವೃತ್ತಿ ಘೋಷಿಸಿದರು.
ಕರ್ನಾಟಕ ಸಿಎಂ ಆಗಿ ಸೇವೆ ಸಲ್ಲಿಕೆ
ಎಸ್.ಎಂ ಕೃಷ್ಣ ಅವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಐದು ವರ್ಷಗಳ ಕಾಲ ಸಂಪೂರ್ಣವಾಗಿ 1999 ರಿಂದ 2004 ರವರೆಗೆ ಸೇವೆ ಸಲ್ಲಿಸಿದ್ರು. ಈ ವೇಳೆ ರಾಜ್ಯದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಸಹಾಯ ಮಾಡಿದ್ರು. ಅದರಲ್ಲೂ ರಾಜಧಾನಿ ಬೆಂಗಳೂರು ಜಾಗತಿಕ ಭೂಪಟದಲ್ಲಿ ಕಾಣಲು ಇವರೇ ಕಾರಣ ಎಂಬ ಹೆಗ್ಗಳಿಕೆಗೆ ಕೃಷ್ಣ ಪಾತ್ರರಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post