ನ್ಯೂಸ್ಫಸ್ಟ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಅಭಿಷೇಕ್ ಅಂಬರೀಶ್ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು. ಇದೇ ವೇಳೆ ತಮ್ಮ ಭಾವಿ ಪತ್ನಿ ಬಗ್ಗೆಯೂ ಕೆಲವು ಗುಟ್ಟುಗಳನ್ನು ಹೇಳಿದರು.
ಅಂದ್ಹಾಗೆ ಅಭಿ ತಾವು ಮನಸಾರೆ ಇಷ್ಟಪಟ್ಟ ಹುಡುಗಿಯನ್ನು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಡಿಸೆಂಬರ್ 11ರಂದು ಅಭಿಷೇಕ್ ಅಂಬರೀಶ್ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನಲ್ಲಿ ಅವಿವಾ ಬಿದ್ದಪ್ಪ ಜೊತೆ ಬಹಳ ಅದ್ಧೂರಿಯಾಗಿ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ.
ಇದನ್ನು ಓದಿ: ಸತತ 3 ಬಾರಿ ಗೋಲ್ಡನ್ ಡಕ್; ಸೂರ್ಯನಿಗೆ ವಿಶ್ವಕಪ್ ಡೋರ್ ಕ್ಲೋಸ್..!?
ಮಡದಿ ಅವಿವಾಗೆ ನೀವು ಯಾವ್ ಥರ ಪಾತ್ರ ಮಾಡಿದ್ರೆ ಇಷ್ಟ ಎಂದು ಪ್ರಶ್ನೆ ಮಾಡಲಾಗಿತ್ತು. ಈ ಕುರಿತು ನ್ಯೂಸ್ಫಸ್ಟ್ನೊಂದಿಗೆ ಮಾಹಿತಿ ಹಂಚಿಕೊಂಡ ನಟ ಅಭಿಷೇಕ್, ನಮ್ಮನ್ನು ಇಷ್ಟ ಪಡೋರು ನಾವ್ ಹೇಗೆ ಇದ್ದರೂ ಇಷ್ಟ ಪಡುತ್ತಾರೆ. ಇಲ್ಲಿಯವರೆಗೂ ಕೇಳಿಲ್ಲ, ಇನ್ಮುಂದೆ ಕೇಳುತ್ತೇನೆ. ಅವರು ಅದನ್ನೇ ಮಾಡಿ, ಇದನ್ನೇ ಮಾಡಿ ಅಂತ ಹೇಳಿಲ್ಲ. ಈ ಸಂದರ್ಶನ ಮುಗಿದ ಮೇಲೆ ಹೋಗಿ ಕೇಳುತ್ತೇನೆ ಅಂತಾ ತಮಾಷೆ ಮಾಡಿದರು.
ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಚಿತ್ರಪ್ರೇಮಿಗಳೇ’ ಪ್ರತಿದಿನ ಸಂಜೆ 5.27ಕ್ಕೆ ನಿಮ್ಮ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post