ಬೆಂಗಳೂರು: ಮಾಜಿ ಸಚಿವ ಅಂಜನಮೂರ್ತಿ (72) ಅವರು ಹೃದಯಾಘಾತದಿಂದ ಇಂದು ಮುಂಜಾನೆ ಮಲ್ಲೇಶ್ವರಂನ ಅಪೋಲೊ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅಂಜನಮೂರ್ತಿ ಅವರು ಕಳೆದ 2 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಇವತ್ತು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಇಂದಿರಾನಗರ ನಿವಾಸಿಯಾಗಿರುವ ಅಂಜನಮೂರ್ತಿಯವರು, 10ನೇ ಏಪ್ರಿಲ್ 1941ರಲ್ಲಿ ಜನಿಸಿದ್ದರು. ಪದವೀಧರರಾಗಿದ್ದರು. 1989, 1999, 2004 ರಲ್ಲಿ ಒಟ್ಟು ಮೂರು ಬಾರಿ ಶಾಸಕರಾಗಿದ್ದರು. ಅಲ್ಲದೇ ವಸತಿ ಸಚಿವರಾಗಿ, ವಿಧಾನಸಬಾ ಉಪಸಭಾಪತಿಯಾಗಿ ಕೆಲಸ ಮಾಡಿದ್ದರು. ಫೆಬ್ರವರಿ 1993 ರಿಂದ ಡಿಸೆಂಬರ್ 1994ರವರೆಗೆ ಉಪಸಭಾಪತಿ ಆಗಿ ಸೇವೆ ಸಲ್ಲಿಸಿದ್ದರು.
ರಾಜಕೀಯ ಚಟುವಟಿಕೆಗಳು
- 2003 ರಿಂದ 2004 ರವರೆಗೆ ಕರ್ನಾಟಕದ SC/ST ಆಯೋಗದ ಅಧ್ಯಕ್ಷರಾಗಿದ್ದರು
- 2005 ರಿಂದ 2006 ರವರೆಗೆ ತಾಲೂಕು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
- 1972-76 ರವರೆಗೆ ನೆಲಮಂಗಲ [ಟಿಡಿಬಿ) ತಾಲೂಕು ಅಭಿವೃದ್ಧಿ ಮಂಡಳಿಯ ಸದಸ್ಯರಾಗಿದ್ದರು
- 1978-83 ಲ್ಯಾಂಡ್ ಟ್ರಿಬ್ಯೂನಲ್ ಸದಸ್ಯ
- 1980-82 ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆಗಿದ್ದರು
- 1983-88 ಅಧ್ಯಕ್ಷರು, ವಕೀಲರ ವಕೀಲರ ಸಂಘ, ನೆಲಮಂಗಲ
- 1985-88 ನೆಲಮಂಗಲದ ಅರುಂಧತಿ ವಿದುವಾ ಸಂಸ್ಥೆ ಅಧ್ಯಕ್ಷರಾಗಿ ಕಾರ್ಯ
ನವದೆಹಲಿಯಲ್ಲಿ ನಡೆದ 89ನೇ ಅಂತರ ಸಂಸದೀಯ ಸಮ್ಮೇಳನದಲ್ಲಿ ಅಂಜನಮೂರ್ತಿ ಭಾಗವಹಿಸಿದ್ದರು. 1994ರಲ್ಲಿ ಭುವನೇಶ್ವರದಲ್ಲಿ ನಡೆದ ಅಖಿಲ ಭಾರತ ಪೀಠಾಧಿಪತಿಗಳ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಶಿಯೋಮಣಿ ಸಂಸ್ಥೆ, ನವದೆಹಲಿಯಿಂದ ಶಿರೋಮಣಿ ವಿಕಾಸ್ ಪ್ರಶಸ್ತಿ ನೀಡಿ ಅಂಜನ ಮೂರ್ತಿಯವರನ್ನು ಗೌರವಿಸಿತ್ತು. ಮಾನವ ಸೇವಾ ಪುರಸ್ಕಾರ, 1993ರಲ್ಲಿ ವಿಶೇಷ ಸ್ಕ್ರಾಲ್ ಆಫ್ ಆನರ್ ಸೇರಿದಂತೆ ಕೆಲವು ಗೌರವಗಳು ದಕ್ಕಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post