ಭೂಮಿ ಹಾಗೂ ತಾಯಿ ಈ ಇಬ್ಬರಿಗೆ ಸರಿಸಾಟಿ ಯಾರು? ಅಪ್ಪ ಆಕಾಶವಾದರೆ, ತಾಯಿ ಭೂಮಿಯಾಗಿ ಮಕ್ಕಳ ಆಗುಹೋಗುಗಳ ಕಷ್ಟದಲ್ಲಿ, ಸಂತಸದಲ್ಲಿ ತಂದೆಗಿಂತ ಹೆಚ್ಚು ಭಾಗಿಯಾಗುತ್ತಾಳೆ. ಕಾಕತಾಳಿಯ ಎಂಬಂತೆ ತಂದೆಗೆ ಮಗಳು ಇಷ್ಟವಾದರೆ, ತಾಯಿಗೆ ಮಗ ಇಷ್ಟವಾಗುತ್ತಾನೆ. ತನ್ನ ಪತಿಗೆ ಏನಾದರು ಆದ್ರೆ ತಾಯಿ ದೇವರ ಮೊರೆ ಹೋಗ್ತಾಳೆ. ಆದರೆ ತನ್ನ ಗರ್ಭದಲ್ಲಿ ಹುಟ್ಟಿದ ಸುತನಿಗೆ ಒಂದು ಸಣ್ಣ ಮುಳ್ಳು ಚುಚ್ಚಿದರು ಎಲ್ಲಿದ್ದರೂ ಓಡಿ ಬಂದು ಹಾರೈಕೆ ಮಾಡುತ್ತಾಳೆ. ಮಗನಿಗಾಗಿ ತಾಯಿ ಏನು ಬೇಕಾದರು ಮಾಡುತ್ತಾಳೆ ಎನ್ನುವುದಕ್ಕೆ ಇದೊಂದು ನೈಜ ಘಟನೆ ಎಲ್ಲರಿಗೂ ಮನಮುಟ್ಟುವಂತಿದೆ.
ತಾಯಿಯೊಬ್ಬಳು ತನ್ನ 15 ವರ್ಷದ ಮಗನ ಜೀವ ಉಳಿಸಲು ತನ್ನ ಕಿಡ್ನಿಯನ್ನು ದಾನ ಮಾಡಿ ಈಗ ಹಣದ ಸಮಸ್ಯೆಯಿಂದ ಬಳಲುತ್ತಿದ್ದಾಳೆ. ಹೀಗಾಗಿ ಆರ್ಥಿಕ ನೆರವು ನೀಡುವ ದಾನಿಗಳತ್ತ ಆ ಮಹಾತಾಯಿ ಮುಖ ಮಾಡಿದ್ದಾರೆ. ಮಾನವೀಯ ನೆಲೆಯಲ್ಲಿ ತಾಯಿಯ ಸಂಕಷ್ಟಕ್ಕೆ ನೆರವಿನ ಹಸ್ತದ ಅಗತ್ಯತೆ ಬಂದೊದಗಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಬಾವಿಯ ಗ್ರಾಮದ ಶೋಭಾ ದಂಪತಿಗೆ ಪ್ರಜ್ವಲ್ ಮಹಾದೇವ ನಿವಾಲಗಿ ಎನ್ನುವ ಮಗನಿದ್ದಾನೆ. ಈತ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ವಿದ್ಯಾಭ್ಯಾಸದಲ್ಲಿ ಪ್ರತಿಭಾವಂತ ಕೂಡ ಆಗಿದ್ದಾನೆ. ದುರದೃಷ್ಟವೆಂದರೆ ಶೋಭಾ ಅವರು 2 ತಿಂಗಳ ಗರ್ಭಿಣಿ ಆಗಿರುವಾಗಲೇ ಪತಿ ಮಹಾದೇವ ನಿವಳಗಿ ನಿಧನ ಹೊಂದಿದ್ದಾರೆ. ಹೀಗಾಗಿ ಮಗ ಪ್ರಜ್ವಲ್ನನ್ನು ತಾಯಿ ಒಬ್ಬರೇ ರೈತ ಕೂಲಿ ಕಾರ್ಮಿಕಳಾಗಿ ಹಾರೈಕೆ ಮಾಡಿ ಸಲುಹಿ ದೊಡ್ಡವನಾಗಿ ಮಾಡಿದ್ದಾರೆ.
‘ದೇವೋ ದುರ್ಬಲ ಘಾತುಕಃ’ ಎಂಬ ಉಕ್ತಿಗೆ ಉದಾಹರಣೆ ಎಂಬಂತೆ ಈ ತಾಯಿ- ಮಗ. ಪ್ರಜ್ವಲ್ಗೆ 2018ರ ಜುಲೈನಲ್ಲಿ ಮಿರಜ್ನಲ್ಲಿ ಆಸ್ಪತ್ರೆಗೆ ದಾಖಲಿಸಿದಾಗ 2 ಕಿಡ್ನಿಗಳು ವಿಫಲವಾಗಿರುವುದು ವೈದ್ಯರು ಪತ್ತೆ ಮಾಡಿದ್ದಾರೆ. ಈಚೆಗೆ ಪ್ರಜ್ವಲ್ನನ್ನು ಡಾ.ಪ್ರಭಾಕರ ಕೋರೆ ಚಾರಿಟೇಬಲ್ ಆಸ್ಪತ್ರೆಯ ಪೀಡಿಯಾಟ್ರಿಕ್ ನೆಫ್ರಾಲಜಿ ವಿಭಾಗದಲ್ಲಿ ದಾಖಲಿಸಿ ತಪಾಸಣೆ ನಡೆಸಲಾಯಿತು. ತಾಯಿಯ ರಕ್ತದ ಗುಂಪು ಮಗನೊಂದಿಗೆ ಹೊಂದಾಣಿಕೆ ಆಗುತ್ತಿದ್ದ ಹಿನ್ನೆಲೆಯಲ್ಲಿ ಪೀಡಿಯಾಟ್ರಿಕ್ ನೆಫ್ರಾಲಜಿಸ್ಟ್ ಡಾ.ಮಹಾಂತೇಶ್ ವಿ.ಪಾಟೀಲ್ ಅವರು ಮಾರ್ಚ್ 9 ರಂದು ತಾಯಿಯ ಕಿಡ್ನಿ ಪಡೆದು ಪ್ರಜ್ವಲ್ನಿಗೆ ಯಶಸ್ವಿಯಾಗಿ ಕಸಿ ಮಾಡಿದ್ದಾರೆ.
ಇದನ್ನು ಓದಿ: VIDEO: ‘ಪಠಾಣ್’ ಸಾಂಗ್ಗೆ ಇರ್ಫಾನ್ ಪಠಾಣ್ ಮಗ ಕ್ಯೂಟ್ ಡ್ಯಾನ್ಸ್; ಶಾರುಖ್ ಖಾನ್ ಕ್ಲೀನ್ ಬೋಲ್ಡ್!
JNMC ವೈದ್ಯಕೀಯ ಕಾಲೇಜಿನ ಡಾ.N.S ಮಹಾಂತ್ ಶೆಟ್ಟಿ ಅವರ ನೆರವಿನೊಂದಿಗ ಪ್ರಭಾಕರ ಕೋರೆ ಚಾರಿಟೇಬಲ್ ಆಸ್ಪತ್ರೆಯಲ್ಲಿ ಉಚಿತ ಹಿಮೋಡಯಾಲಿಸಿಸ್, ದುಬಾರಿ ಔಷಧಿಗಳನ್ನು ನೀಡಲಾಗಿದೆ. ಪೀಡಿಯಾಟ್ರಿಕ್ ನೆಫ್ರಾಲಜಿಸ್ಟ್ ಡಾ. ಮಹಾಂತೇಶ ವಿ. ಪಾಟೀಲ್, ಮೂತ್ರಶಾಸ್ತ್ರಜ್ಞ ಡಾ.ಆರ್.ಬಿ.ನೇರ್ಲಿ ಮತ್ತು ಡಾ.ವಿಕ್ರಮ ಪ್ರಭ, ಅರಿವಳಿಕೆ ತಜ್ಞ ಡಾ.ರಾಜೇಶ್ ಮಾನೆ, ನಾಳೀಯ ಶಸ್ತ್ರಚಿಕಿತ್ಸಕ ಡಾ.ರಿಚರ್ಡ್ ಅವರ ತಂಡ ಯಶಸ್ವಿಯಾಗಿ ಕಸಿ ಮಾಡಿದ್ದಾರೆ. ಸದ್ಯ ಬಾಲಕನ ಆರೋಗ್ಯ ಸ್ಥಿರವಾಗಿದೆ. ಆದರೆ ಚಿಕಿತ್ಸೆ, ಔಷಧ ಇತ್ಯಾದಿಗಳಿಗೆ ತಗುಲಿದ ಹೆಚ್ಚಿನ ಸುಮಾರು 5 ರಿಂದ 7 ಲಕ್ಷ ರೂ.ಗಳನ್ನ ಪಾವತಿಸಬೇಕಾಗಿದೆ. ಹೀಗಾಗಿ ತಾಯಿ ಶೋಭಾ ಅವರು ಆರ್ಥಿಕವಾಗಿ ಅಷ್ಟೇನು ಸಬಲರಲ್ಲ. ಇದರಿಂದ ಯಾರಾದರು ದಾನಿಗಳು ಈ ಕರುಣಾಮಯಿ ತಾಯಿಯ ಸಹಾಯಕ್ಕೆ ಬರುವರೇನು ಎಂದು ಕಾದು ಕುಳಿತ್ತಿದ್ದಾರೆ. ಸಹಾಯದ ಹಸ್ತನೂ ಚಾಚಿದ್ದಾರೆ.
ಶೋಭಾ ನಿವಾಲಗಿ ಬ್ಯಾಂಕ್ ಅಕೌಂಟ್ ಡಿಟೇಲ್ಸ್
- ಶೋಭಾ ನಿವಾಲಗಿ ಮೊಬೈಲ್ ನಂಬರ್- 9611467167
- ಶೋಭಾ ಮಹಾದೇವ ನಿವಾಲಗಿ
- ಬ್ಯಾಂಕ್ : KVG BANK,
- ಅಕೌಂಟ್ ನಂಬರ್: 17217089504,
- IFSC ಕೋಡ್: KVGB0002007
ನನ್ನ ಕಿಡ್ನಿ ಕೊಟ್ಟು ಮಗನನ್ನು ಉಳಿಸಿಕೊಂಡಿದ್ದೇನೆ. ಆಸ್ಪತ್ರೆಯಲ್ಲಿ ಬಿಲ್ ಕಟ್ಟದೇ ಮಗನನ್ನು ಡಿಸ್ಚಾರ್ಜ್ ಮಾಡಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ಹೇಳುತ್ತಿದ್ದಾರೆ. ಯಾರಾದರೂ ಹಣಕೊಟ್ಟು ಸಹಾಯ ಮಾಡಿ.
ಶೋಭಾ ನಿವಾಲಗಿ, ಬಾಲಕನ ತಾಯಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post