ಚುನಾವಣೆ ಸಮೀಪಿಸುತ್ತಿದ್ದಂತೆಯೇ ನಾಯಕರು ವಿರೋಧ ಪಕ್ಷದ ನಾಯಕರ ಕಾಲೆಳೆಯುವುದು ಸಾಮಾನ್ಯ. ಅದರಂತೆಯೇ ಇದೀಗ ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಕಾಂಗ್ರೆಸ್ ಶಾಸಕ ಅಜಯ್ ಸಿಂಗ್ ಭಾಷಣ ಮಾಡುವ ವಿಡಿಯೋವೊಂದನ್ನ ಹಂಚಿಕೊಳ್ಳುವ ಮೂಲಕ ಅವರ ಕಾಲೆಳೆದಿದ್ದಾರೆ.
ಮಾಜಿ ಸಿಎಂ ಧರ್ಮ ಸಿಂಗ್ ಅವರ ಮಗ, ಜೇವರ್ಗಿ ಶಾಸಕ ಅಜಯ್ ಸಿಂಗ್ ಅವರ ವಿಡಿಯೋವನ್ನು ನಳಿನ್ ಕುಮಾರ್ ಕಟೀಲ್ ತಮ್ಮ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋಗೆ, ‘ರೈತರು ಎಚ್ಚೆತ್ತಿದ್ದಾರೆ!.ತಲೆ ತಲಾಂತರದಿಂದ ಕಾಂಗ್ರೆಸ್ ಪಕ್ಷವು ರೈತಾಪಿ ವರ್ಗಕ್ಕೆ ಮಾಡುತ್ತಿರುವ ಮೋಸದ ಅರಿವು ರೈತರಿಗೆ ಆಗಿದೆ. ಕಾಂಗ್ರೆಸ್ ಪಕ್ಷ ಸುಳ್ಳಿನ ಕೋಟೆಯಲ್ಲಿ ಎಷ್ಟು ದಿನ ಮೆರೆಯಲು ಸಾಧ್ಯ? ಪ್ರಶ್ನಿಸುವ ಧ್ವನಿಯನ್ನು ಹತ್ತಿಕ್ಕುವ ತನ್ನ ಹಳೇ ಚಾಳಿಯನ್ನು ಮುಂದುವರೆಸುತ್ತಿರುವ ಕಾಂಗ್ರೆಸ್ಅನ್ನು ಅನ್ನದಾತರು ಧಿಕ್ಕರಿಸಲಿದ್ದಾರೆ’ ಎಂದು ಅಡಿಬರಹ ಬರೆದಿದ್ದಾರೆ.
ವಿಡಿಯೋದಲ್ಲಿ ಏನಿದೆ?
ರೈತರು ಎಚ್ಚೆತ್ತಿದ್ದಾರೆ!
ತಲೆ ತಲಾಂತರದಿಂದ ಕಾಂಗ್ರೆಸ್ ಪಕ್ಷವು ರೈತಾಪಿ ವರ್ಗಕ್ಕೆ ಮಾಡುತ್ತಿರುವ ಮೋಸದ ಅರಿವು ರೈತರಿಗೆ ಆಗಿದೆ. ಕಾಂಗ್ರೆಸ್ ಪಕ್ಷ ಸುಳ್ಳಿನ ಕೋಟೆಯಲ್ಲಿ ಎಷ್ಟು ದಿನ ಮೆರೆಯಲು ಸಾಧ್ಯ? ಪ್ರಶ್ನಿಸುವ ಧ್ವನಿಯನ್ನು ಹತ್ತಿಕ್ಕುವ ತನ್ನ ಹಳೇ ಚಾಳಿಯನ್ನು ಮುಂದುವರೆಸುತ್ತಿರುವ ಕಾಂಗ್ರೆಸ್ಅನ್ನು ಅನ್ನದಾತರು ಧಿಕ್ಕರಿಸಲಿದ್ದಾರೆ. pic.twitter.com/ZZU3CsFCuW— Nalinkumar Kateel (@nalinkateel) March 21, 2023
ಅಜಯ್ ಸಿಂಗ್ ಅವರು ವೇದಿಕೆ ಮುಂದೆ ನಿಂತು ಭಾಷಣ ಮಾಡುವ ವೇಳೆ ನೇರವಾಗಿ ವೇದಿಕೆಯತ್ತ ರೈತನೊಬ್ಬ ಬರುತ್ತಾನೆ. ವೇದಿಕೆ ಏರಿ ‘ಧರ್ಮಸಿಂಗ್ ಫೌಂಡೇಶನ್ ಎಂದು ಹೇಳುತ್ತೀರಿ. ನಿಮ್ಮ ತಂದೆಯವರು ನೀವು ಏನು ಮಾಡಿದ್ದೀರಿ ಎಂದು ಹೇಳಿ ಎಂದು ಶಾಸಕರಿಗೆ ಪ್ರಶ್ನೆ ಹಗಾಕುತ್ತಾನೆ. ಈ ವೇಳೆ ಅಲ್ಲೇ ಇದ್ದ ಕಾರ್ಯಕರ್ತನೊಬ್ಬ ರೈತನನ್ನು ಕೈ ಹಿಡಿದು ಎಳೆದು ವೇದಿಕೆಯಿಂದ ಕೆಳಗಿಳಿಸಲು ಪ್ರಯತ್ನಿಸುತ್ತಾನೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯವನ್ನು ನಳೀನ್ ಕುಮಾರ್ ಕಟೀಲ್ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದು, ಅಜಯ್ ಸಿಂಗ್ ಅವರಿಗೆ ಟಾಂಗ್ ನೀಡುವ ಮೂಲಕ ಮತ ಪ್ರಚಾರಕ್ಕಾಗಿ ಬಳಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post