‘ಡೋಂಟ್ ವರಿ ಡೋಂಟ್ ವರಿ ಚಿನ್ನ ನಿನ್ನ ಟೈಮ್ ಕೂಡ ಬಂದೇ ಬರ್ತದೆ… ಆ ಟೈಮ್ ಯಾವಗ ಬರತ್ತೊ ಗೊತ್ತಿಲ್ಲ‘. ಈ ಲೈನ್ ಮಾತ್ರ ಸ್ಟ್ರಗಲ್ ಮಾಡ್ತಿರೋ ಪ್ರತಿಯೊಬ್ಬರಿಗೂ ಸ್ಫೂರ್ತಿ ತುಂಬುತ್ತಿದೆ. ಯೂಟ್ಯೂಬ್ ವೀಕ್ಷಕರಿಗೆ ಕಿಕ್ ಕೊಡ್ತಿದೆ. ಅಂದಹಾಗೆಯೇ ಇದು ಆಲ್ ಒಕೆ ಬತ್ತಳಿಕೆಯ ಮೊಟಿವೇಷನಲ್, ಪವರ್ಫುಲ್ ಹಾಡಿದು.
ಹೌದು, ರ್ಯಾಪ್ ಗೀತೆಗಳ ಲಿಸ್ಟ್ನಲ್ಲಿ ಆಲ್ ಓಕೆ ಆಲ್ಬಂ ಸಾಂಗ್ಸ್ಗೆ ಸ್ಪೆಷಲ್ ಸ್ಥಾನವಿದೆ. ಲೈಫ್ನಲ್ಲಿ ನಡಿಯೋ ಘಟನೆಗಳಿಗೆ ಪದಗಳನ್ನ ಪೋನಿಸಿ ಕಿವಿಗೆ ಇಂಪು ನೀಡುವ ಮ್ಯೂಜಿಕ್ನ್ನ ಸೇರಿಸಿ, ಮನಸ್ಸಿಗೆ ಹಾಯ್ ಎನಿಸುವ ರೀತಿಯಲ್ಲಿ ಪ್ರೆಸೆಂಟ್ ಮಾಡೋ ಹಾಡಿನ ಜಾದುಗಾರ ಆಲ್ ಓಕೆ ಅಲಿಯಾಸ್ ಅಲೋಕ್. ಸದ್ಯ ತಮ್ಮ ಜೀವನದ ಕತೆಗೆ ಹಾಡಿನ ರೂಪ ನೀಡಿದ್ದಾರೆ ಆಲ್ ಓಕೆ. ಈ ಗೀತೆಯ ಒಂದೊಂದು ಸಾಲು ಅವರ ಬದುಕಿನ ಒಂದೊಂದು ಮಜಲನ್ನ ಪರಿಚಯ ಮಾಡಿಕೊಡುತ್ತೆ. ಅಷ್ಟೆಯಲ್ಲ, ನಾವು ಮೊದಲೇ ಹೇಳಿದ ಹಾಗೆ ಎಲ್ಲಾ ವರ್ಗದವರಿಗೂ ಇಷ್ಟವಾಗೋ ಹಾಡಿದು.
ಇನ್ನೂ ನಿರ್ಮಾಣದ ಜವಾಬ್ದಾರಿ Nesz & All ok ಅವರು ನಿಭಾಯಿಸಿದ್ದು, ಬೆಂಗಳೂರು ಸೇರಿದಂತೆ ವಿದೇಶದಲ್ಲಿ ಶೂಟ್ ಮಾಡಲಾಗಿದೆ.
All Ok ಮಾತು..
ಇನ್ನೂ ಸಾಂಗ್ ಬಗ್ಗೆ ಮಾತ್ನಾಡಿರುವ ಅಲೋಕ್, ನಮಸ್ಕಾರ..ಈ ಹಾಡು ಜೀವನದಲ್ಲಿ ನಿಂದನೆ, ಅವಮಾನ, ಸೋಲನ್ನು ಅನುಭವಿಸುತ್ತಿರೋ ಪ್ರತೋಯೊಬ್ಬರಿಗೂ ಸಮರ್ಪಸುತ್ತಿದ್ದೇನೆ. ನಿಮ್ಮ ಕೆಲಸದಲ್ಲಿ ನಂಬಿಕೆ ಇಡಿ, ಕನಸಿನಲ್ಲಿ ವಿಶ್ವಾಸವಿಡಿ, ಆಗೋದೆಲ್ಲಾ ಒಳ್ಳೇದಕ್ಕೆ ಅನ್ಕೋಳಿ, ಇಂದಲ್ಲ ನಾಳೆ ಗೆಲುವು ಪಕ್ಕ ನಿಮ್ಮದೇ. ನಾವು ಸದಾ ನಿಮ್ಮೊಂದಿಗೆ..ಡೋಂಟ್ ವರಿ..ನಿಮ್ಮ-ಆಲ್ ಓಕೆ ಎಂದರು.
ಒಟ್ನಲ್ಲಿ ಜನರಿಗೆ ಸಾಂಗ್ ಕನೆಕ್ಟ್ ಆಗ್ತಿದ್ದು, ವಾವ್..ಅದ್ಭುತ ಅನ್ನೋ ಉದ್ಘಾರಗಳು ಕೇಳಿ ಬರ್ತಿವೆ. ನೀವೂ ಇನ್ನು ಹಾಡನ್ನ ಕೇಳಿಲ್ಲ ಅಂದ್ರೆ All ok ಯೂಟ್ಯೂಬ್ಗೆ ಹೋಗಿ ಗೀತೆ ಕೇಳಿ ಎಂಜಾಯ್ ಮಾಡಿ ಎಂದಿದ್ದಾರೆ.
ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಚಿತ್ರಪ್ರೇಮಿಗಳೇ’ ಪ್ರತಿದಿನ ಸಂಜೆ 5.27ಕ್ಕೆ ನಿಮ್ಮ ನ್ಯೂಸ್ ಫಸ್ಟ್ ಚಾನೆಲ್‌ನಲ್ಲಿ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post