ಹೆಣ್ಣಿಗೆ ಸೀರೆ ಯಾಕೆ ಅಂದ, ಆ ಚಂದ ಅವಳ ಒಳಗೆ ಅಡಗಿರೋದ್ರಿಂದ ಎಂಬ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಹಾಡಿನಂತೆ ಹೆಣ್ಣು ಮಕ್ಕಳು ಸೀರೆಯಲ್ಲಿ ಅದೇಷ್ಟೂ ಅಂದ ಚಂದವಾಗಿ ಕಾಣಿಸುತ್ತಾರೆ ಅಲ್ಲವೇ. ಹಬ್ಬ ಹರಿದಿನಗಳು ಬಂತು ಅಂದರೆ ಸಾಕು ಮನೆಯಲ್ಲಿರುವ ಹೆಣ್ಣು ಮಕ್ಕಳು ಅಂದವಾಗಿ ಸೀರೆಯುಟ್ಟು ಲಕ್ಷ್ಮೀಯಂತೆ ಮನೆ ತುಂಬಾ ಲಕ ಲಕ ಅಂತ ಓಡಾಡುತ್ತಾ ಇರುತ್ತಾರೆ.
ಇದನ್ನು ಓದಿ; VIDEO: ಗಂಡನ ಬರ್ತ್ಡೇಗೆ ಮಕ್ಕಳಿಂದ ಸ್ಪೆಷಲ್ ವಿಶ್ ಮಾಡಿಸಿದ ನಟಿ ಅಮೂಲ್ಯ
ಅದೇ ರೀತಿ ನಮ್ಮ ಸ್ಯಾಂಡಲ್ವುಡ್ ತಾರೆಯರು ಯುಗಾದಿ ಹಬ್ಬವನ್ನು ಬಹಳ ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ. ಸ್ಯಾಂಡಲ್ವುಡ್ನ ಮುದ್ದು ಹುಡುಗಿ, ಗೋಲ್ಡನ್ ಕ್ವೀನ್ ನಟಿ ಅಮೂಲ್ಯ ಯುಗಾದಿ ಹಬ್ಬದ ಪ್ರಯುಕ್ತ ಬಣ್ಣದ ಸೀರೆಯುಟ್ಟು ಫೋಟೋಗೆ ಪೋಸ್ ಕೊಟ್ಟಿದ್ದು, ವಿಶೇಷವಾಗಿತ್ತು. ಮದುಮಗಳಂತೆ ಅಲಂಕಾರ ಮಾಡಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಜೊತೆಗೆ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡು, ಹೊಸ ವರ್ಷ ಹಾಗು ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಅಭಿಮಾನಿಗಳಿಗೆ ಶುಭ ಹಾರೈಸಿದ್ದಾರೆ.
ಸದ್ಯ ನಟಿ ಅಮೂಲ್ಯ ಇಬ್ಬರ ಮುದ್ದು ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ನಟಿ ಅಮೂಲ್ಯ ಸಿನಿಮಾ ರಂಗದಿಂದ ಕೊಂಚ ದೂರವಿದ್ರೂ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ.
View this post on Instagram
View this post on Instagram
ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಚಿತ್ರಪ್ರೇಮಿಗಳೇ’ ಪ್ರತಿದಿನ ಸಂಜೆ 5.27ಕ್ಕೆ ನಿಮ್ಮ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post