ಇರ್ಫಾನ್ ಪಠಾಣ್.. ಒನ್ ಟೈಮ್ನಲ್ಲಿ ಟೀಮ್ ಇಂಡಿಯಾದ ಮೋಸ್ಟ್ ಸಕ್ಸಸ್ ಫುಲ್ ಆಲ್ ರೌಂಡರ್. ಎಡಗೈಯಿಂದ ಬೌಲಿಂಗ್ ಮಾಡುತ್ತಿದ್ದ ಪಠಾಣ್ ಲೆಫ್ಟ್ಹ್ಯಾಂಡ್ ಬ್ಯಾಟಿಂಗ್ ಮಾಡುತ್ತಿದ್ದರು. ಸದ್ಯ ಟೀಮ್ ಇಂಡಿಯಾದ ಕಾಮೆಂಟರ್ ಆಗಿದ್ದಾರೆ. ಇವರಿಗೆ ಮುದ್ದಾದ ಮಗನಿದ್ದಾನೆ. ಶಾರುಖ್ ಖಾನ್ ಅಭಿನಯಿಸಿರುವ ‘ಪಠಾಣ್’ ಮೂವಿ ಹಾಡೊಂದಕ್ಕೆ ಮಗು ಸಖತ್ ಸ್ಟೆಪ್ಸ್ ಹಾಕಿದೆ. ಇದಕ್ಕೆ ಬಾಲಿವುಡ್ ಕಿಂಗ್ ಖಾನ್ ಬೋಲ್ಡ್ ಆಗಿದ್ದಾರೆ.
ಭಾರತದ ಮಾಜಿ ಆಟಗಾರ ಇರ್ಫಾನ್ ಪಠಾಣ್ ತಮ್ಮ ನಿವಾಸದಲ್ಲಿ ಕುಳಿತು ಶಾರುಖ್ ಖಾನ್, ದೀಪಿಕಾ ಪಡುಕೋಣೆ ಅಭಿನಯಿಸಿರುವ ಪಠಾಣ್ ಸಿನಿಮಾದ ಸಾಂಗ್ ಪ್ಲೇ ಮಾಡಿರುತ್ತಾರೆ. ಜೂಮೆ ಜೋ ಪಠಾಣ್ ಎಂದು ಮ್ಯೂಸಿಕ್ ಪ್ಲೇ ಆಗುತ್ತಿದ್ದಂತೆ ಇರ್ಫಾನ್ ಪಠಾಣ್ ಅವರ ಮಗ ಡ್ಯಾನ್ಸ್ ಮಾಡಲು ಶುರು ಮಾಡಿದೆ. ಇದನ್ನು ನೋಡಿ ಇರ್ಫಾನ್ ಫುಲ್ ನಕ್ಕು ಸಂತಸ ವ್ಯಕ್ತಪಡಿಸಿದ್ದಾರೆ.
Khansaab @iamsrk please add one more cutest fan in your list… pic.twitter.com/peCMLOorbJ
— Irfan Pathan (@IrfanPathan) March 22, 2023
ಇದನ್ನು ಓದಿ: ಈ ಬಾರಿಯ IPLನಲ್ಲಿ ವಿರಾಟ್ ಕೊಹ್ಲಿ vs ಸ್ಟಾರ್ ರಣ್ವೀರ್ ಸಿಂಗ್ ಮಧ್ಯೆ ಬಿಗ್ ವಾರ್..! ಯಾಕೆ?
ನಂತರ ಈ ವಿಡಿಯೋವನ್ನ ಇರ್ಫಾನ್ ಪಠಾಣ್ ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿ, ಖಾನ್ ಸಾಬ್ (ಶಾರುಖ್ ಖಾನ್) ನಿಮ್ಮ ಫ್ಯಾನ್ಸ್ಗಳ ಪಟ್ಟಿಯಲ್ಲಿ ಈ ಕ್ಯೂಟ್ ಆಗಿರೋ ಅಭಿಮಾನಿಯನ್ನ ಸೇರಿಸಿಕೊಳ್ಳಿ ಎಂದು ಬರೆದು ಶಾರುಕ್ ಖಾನ್ಗೆ ಟ್ಯಾಗ್ ಮಾಡಿದ್ದಾರೆ.
Yeh tumse zyaada talented nikla….chota Pathaan https://t.co/gK0rumQC5a
— Shah Rukh Khan (@iamsrk) March 22, 2023
ಸದ್ಯ ಈ ಟ್ವೀಟ್ಗೆ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ರಿಪ್ಲೇ ಕೂಡ ಮಾಡಿದ್ದಾರೆ. ಛೋಟಾ ಪಠಾಣ್ ನಿಮಗಿಂತ ಜಾಸ್ತಿನೆೇ ಟ್ಯಾಲೆಂಟೆಡ್ ಆಗಿದ್ದಾನೆ ಎಂದು ರೀಟ್ವೀಟ್ ಮಾಡಿದ್ದಾರೆ. ಸದ್ಯ ಇವರ ಈ ಟ್ವೀಟ್ಗಳಿಗೆ ಪಠಾಣ್ ಫ್ಯಾನ್ಸ್ ಹಾಗೂ ಶಾರುಖ್ ಖಾನ್ ಫ್ಯಾನ್ಸ್ ಬ್ಯುಟಿಫುಲ್, ಕ್ಯೂಟೆಸ್ಟ್ ಎಂದು ವಿಧ ವಿಧವಾದ ಕಾಮೆಂಟ್ಗಳನ್ನ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post