ಗಾಯಕ ಸೋನು ನಿಗಮ್ ತಂದೆ ಆಗಮ್ಕುಮಾರ್ ನಿಗಮ್ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರ ಕಾರು ಚಾಲಕನನ್ನ ಪೊಲೀಸರು ಬಂಧಿಸಿದ್ದಾರೆ.
ಇದೇ ಮಾರ್ಚ್ 19ರಂದು ಆಗಮ್ ಅವರ ಮನೆಯಲ್ಲಿ 72 ಲಕ್ಷ ರೂಪಾಯಿ ಕಳ್ಳತನವಾಗಿತ್ತು. ಈ ಬಗ್ಗೆ ಸೋನು ನಿಗಮ್ ಅವರ ತಂಗಿ ನಿಕಿತಾ ನಿಗಮ್ ಓಶಿವಾರಾ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ರು. ವಿಚಾರಣೆ ವೇಳೆ ಕಾರು ಚಾಲಕನ ಕೃತ್ಯ ಬಯಲಾಗಿದ್ದು, ಸದ್ಯ ಆತನನ್ನ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ರಜನಿಕಾಂತ್ ಮಗಳ ಮನೆಯಲ್ಲೂ ಕಳ್ಳತನ!
ಇತ್ತೀಚೆಗೆ ಖ್ಯಾತ ನಟ ರಜಿನಿಕಾಂತ್ ಅವರ ಮಗಳು ಐಶ್ವರ್ಯಾ ಕೂಡ ಠಾಣೆ ಮೆಟ್ಟಿಲೇರಿದ್ದರು. ತನ್ನ ಮನೆಯಲ್ಲಿದ್ದ 3 ಲಕ್ಷ ರೂಪಾಯಿ ಬೆಲೆ ಬಾಳುವ ಆಭರಣಗಳು ಕಾಣೆಯಾಗಿದೆ ಎಂದು ದೂರು ನೀಡಿದ್ದರು. ಆದರೆ ತಮಿಳುನಾಡು ಪೊಲೀಸರು ಐಶ್ವರ್ಯಾ ಅವರ ಕಾರು ಚಾಲಕ ಮತ್ತು ಮನೆಕೆಲಸದಾಕೆಯನ್ನು ಬಂದಿಸಿದ್ದಾರೆ.
ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಚಿತ್ರಪ್ರೇಮಿಗಳೇ’ ಪ್ರತಿದಿನ ಸಂಜೆ 5.27ಕ್ಕೆ ನಿಮ್ಮ ನ್ಯೂಸ್ ಫಸ್ಟ್ ಚಾನೆಲ್‌ನಲ್ಲಿ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post