ರಾಜ್ಯ ಚುನಾವಣೆ ಸಮೀಪಿಸುತ್ತಿದೆ. ಮತ್ತೊಂದೆಡೆ ರಾಜಕಾರಣಿಗಳು ಜನರ ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಕೆಲವೊಮ್ಮೆ ಚುನಾವಣಾ ಭರದಲ್ಲಿ ಜನರ ಮನವೊಲಿಸುವ ಕೆಲಸಕ್ಕೆ ಕೈ ಹಾಕಿ ನಗೆಪಾಟಲಿಗೀಡಾದ ಪ್ರಸಂಗಗಳು ರಾಜಕಾರಣಿಗಳಿಗೆ ಎದುರಾಗುತ್ತವೆ. ಅದರಂತೆಯೇ, ಇದೀಗ ಮೊಹಮ್ಮದ್ ಹಾರಿಸ್ ನಲಪಾಡ್ ಕೂಡ ಜನರ ನಗುವಿಗೆ ಕಾರಣರಾಗಿದ್ದಾರೆ. ಅದಕ್ಕೆ ನಲಪಾಡ್ ವೇದಿಕೆಯಲ್ಲಿ ಮಾಡಿದ್ದ ಭಾಷಣವೇ ಕಾರಣವಾಗಿದೆ.
ವೇದಿಕೆ ಮುಂದೆ ಅಥವಾ ಪೋಡಿಯಂ ಮುಂದೆ ನಿಂತಾಗ ರಾಜಕಾರಣಿಗಳು ಮೈಮರೆತು ಭಾಷಣ ಬಿಗಿಯುತ್ತಾರೆ. ಆದರೆ ಕೆಲವೊಮ್ಮೆ ಏನೋ ಹೇಳಲು ಹೋಗಿ ಮತ್ತೇನೋ ಆದ ಪ್ರಸಂಗಗಳಿವೆ. ಅದರಂತೆಯೇ ನಲಪಾಡ್ ಕೂಡ ವೇದಿಕೆ ಮೇಲೆ ನಿಂತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಹೊಗಳುವ ಭರದಲ್ಲಿ ತಪ್ಪಾಗಿ ಮಾತನಾಡಿ ಟ್ರೋಲಿಗರಿಗೆ ವರದಾನವಾಗಿದ್ದಾರೆ.
ಕ್ಯಾ ಭಾಯ್ @nalapad ಸತ್ಯ ತುಂಬಾ ದಿನ ಮುಚ್ಚಿಡಲು ಸಾಧ್ಯವಿಲ್ಲ ಅಲ್ವಾ😂 pic.twitter.com/WScYYI7gvf
— Purvi Raju 🇮🇳ಪೂರ್ವಿ (@rajpurvii) March 22, 2023
ನಲಪಾಡ್ ಅವರು ಮಾತನಾಡುವ ಭರದಲ್ಲಿ ‘ರಾಹುಲ್ ಗಾಂಧಿಯವರು ಇವತ್ತು ನಮ್ಮನ್ನ ಎಲ್ಲರನ್ನು ಕೂಡ ಸಮಾಜಗಳ ಮೇಲೆ ಬೇರೆ ಬೇರೆ ಮಾಡ್ತಾ ಇದ್ದಾರೆ. ಇವ್ರು ಹಿಂದೂ, ಮುಸ್ಲಿಂ, ಕ್ರಿಸ್ಚಿಯನ್, ಇವ್ರು ಮರಾಠಿ, ಇವ್ರು ಕನ್ನಡ, ಇವ್ರು ಹಿಂದಿ ಅಂತ. ಆದ್ರೆ ನಾವೆಲ್ಲರು ಕೂಡ ಭಾರತೀಯರು ಎಂದು ಹೇಳುವ ಭಾಷಣ ವೈರಲ್ ಆಗಿದೆ. ಸದ್ಯ ಈ ವಿಡಿಯೋ ಸಾಮಾಜಿ ಜಾಲತಾಣದಲ್ಲಿ ಹರಿದಾಡುತ್ತಿದೆ‘ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post