ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಯಾವ ಕ್ಷೇತ್ರದಿಂದ ಎಲೆಕ್ಷನ್ಗೆ ಸ್ಪರ್ಧೆ ಮಾಡುವುದು ಎಂದು ಗೊಂದಲ ಏರ್ಪಟ್ಟಿದೆ. ಈ ಹಿಂದೆ ಕೋಲಾರದಿಂದ ಸ್ಪರ್ಧಿಸುತ್ತಾರೆಂದು ಹೇಳಲಾಗಿತ್ತು. ಆದ್ರೆ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯರಿಗೆ ಬಿಗ್ ಶಾಕ್ ಕೊಟ್ಟಿತ್ತು. ಹೀಗಾಗಿ ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡಬಹುದು ಎನ್ನಲಾಗ್ತಿದೆ.
ಶಾಸಕ ಯತೀಂದ್ರ ಅವರು ತಂದೆ ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ತ್ಯಾಗ ಮಾಡುವುದಾಗಿ ಹೇಳಿದ್ದಾರೆ. ತಾವು ವರುಣಾ ಕ್ಷೇತ್ರ ಚಾಮುಂಡೇಶ್ವರಿ ಕ್ಷೇತ್ರದಿಂದಲೆ ಸ್ಪರ್ಧೆ ಮಾಡುವುದಕ್ಕೆ ಡಾ.ಯತೀಂದ್ರ ಸಿದ್ಧತೆ ನಡೆಸಿದ್ದಾರೆ ಎನ್ನಲಾಗ್ತಿದೆ. ಒಂದ್ವೇಳೆ, ಯತೀಂದ್ರ ಸ್ಪರ್ಧೆಗೆ ಹೈಕಮಾಂಡ್ ಸೂಚಿಸಿದರೆ ಒಂದೇ ಕಲ್ಲಲ್ಲಿ 3 ಹಕ್ಕಿ ಹೊಡೆಯೋದು ಸಿದ್ದರಾಮಯ್ಯ ಪ್ಲಾನ್ ಆಗಿದೆ.
ತಂದೆ-ಮಗ ಇಬ್ಬರು ಸ್ಪರ್ಧೆಗೆ ಸಿದ್ದು ತೆರೆಮರೆಯಲ್ಲೇ ತಂತ್ರ ಹೆಣೆಯುತ್ತಿದ್ದಾರೆ. ಎರಡನೇಯದ್ದು, ಚಾಮುಂಡೇಶ್ವರಿ ಟಿಕೆಟ್ಗಾಗಿ ಆಕಾಂಕ್ಷಿಗಳ ಪೈಪೋಟಿ ಹೆಚ್ಚಾಗಿದೆ. ಯಾರಿಗೆ ಟಿಕೆಟ್ ನೀಡಿದರು ಪಕ್ಷದಲ್ಲಿ ಅಸಮಾಧಾನ ಭುಗಿಲೇಳುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಎಲ್ಲರನ್ನು ಒಗ್ಗೂಡಿಸಲು ಯತೀಂದ್ರ ಸ್ಪರ್ಧೆ ಅನಿವಾರ್ಯವಾಗಿದೆ.
3ನೇಯದ್ದು, ಕಳೆದ ಚುನಾವಣೆಯ ಸೋಲಿಗೆ ಸಿದ್ದರಾಮಯ್ಯ ಉತ್ತರ ನೀಡಲು ಪಣ ತೊಟ್ಟಿದ್ದಾರೆ. ಸಿದ್ದು ಸೋಲಿಸಿದ್ದ ಜಿ.ಟಿ ದೇವೇಗೌಡ ಕಾಂಗ್ರೆಸ್ ಸೇರುವುದಾಗಿ ಹೇಳಿ ಕೈಕೊಟ್ಟಿದ್ದಾರೆ. ಜಿಟಿ ದೇವೇಗೌಡರನ್ನು ಮಣಿಸಲು ಈಗ ಪುತ್ರನನ್ನ ಮುಂದೆ ಬಿಟ್ಟಿದ್ದಾರೆ ಅನ್ನೋ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post