ಮೋಹಕತಾರೆ, ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಕಂಬ್ಯಾಕ್ಗಾಗಿ ಕೋಟ್ಯಾಂತರ ಮನ ಕಾದು ಕುಂತಿದೆ. ಡಾಲಿ ಜೊತೆ ಉತ್ತರಾಕಾಂಡ ಅಂತ ಕಂಬ್ಯಾಕ್ ಸಿನಿಮಾನೂ ಅನೌನ್ಸ್ ಆಗಿದೆ. ಇದೀಗ, ಸರ್ಪ್ರೈಸ್ ಏನಪ್ಪಾ ಅಂದ್ರೆ ಶಿವಣ್ಣ ಮತ್ತು ರಮ್ಯಾ ಸ್ಕ್ರೀನ್ ಶೇರ್ ಮಾಡ್ತಾರಂತೆ. ಒಂದೇ ಚಿತ್ರದಲ್ಲಿ ಹ್ಯಾಟ್ರಿಕ್ ಮತ್ತು ಮೋಹಕತಾರೆ ತೆರೆಹಂಚಿಕೊಳ್ತಾರಂತೆ. ಈ ಹತ್ತು ವರ್ಷದಲ್ಲಿ ಸ್ಯಾಂಡಲ್ವುಡ್ ಇಂಡಸ್ಟ್ರಿಗೆ ಎಷ್ಟೊಂದು ಜನ ಹೀರೋಯಿನ್ಗಳು ಬಂದ್ರು ಹೋದರು ಕೂಡ ರಮ್ಯಾ ಅವರನ್ನ ಯಾರೂ ರೀಪ್ಲೇಸ್ ಮಾಡೋಕೆ ಆಗ್ಲಿಲ್ಲ. ರಿ-ಪ್ಲೇಸ್ ಇರಲಿ ಅವರ ಥರಾ ಕ್ರೇಜ್ ಕೂಡ ಕಾಣಿಸಿಲ್ಲ. ರಮ್ಯಾ ಸಿನಿಮಾ ಇಂಡಸ್ಟ್ರಿಯಿಂದ ದೂರಾಗಿ 10 ವರ್ಷ ಕಳೆದ್ರು ಅವರು ಕ್ರೇಜ್ ಮಾತ್ರ ಎಳ್ಳಷ್ಟು ಕಮ್ಮಿಯಾಗಿಲ್ಲ. ರಮ್ಯಾ ಅವರ ಮೇಲಿನ ಅಭಿಮಾನ ಒಂಚೂರು ಕಡಿಮೆಯಾಗಿಲ್ಲ. ಈಗಲೂ ರಮ್ಯಾ ಅಂದ್ರೆ ಅದೇ ಜೋಶ್, ಅದೇ ಸ್ಟಾರ್ಡಂ ಕಾಣ್ತಿದೆ.
ರಾಜಕಾರಣಕ್ಕೆ ಎಂಟ್ರಿ ಕೊಟ್ಟ ಬಳಿಕ ರಮ್ಯಾ ಆಲ್ಮೋಸ್ಟ್ ಬೆಳ್ಳಿತೆರೆಯಿಂದ ದೂರು ಉಳಿದು ಬಿಟ್ಟರು. ಸಿನಿಮಾದವರ ಜೊತೆ ಫ್ರೆಂಡ್ಶಿಪ್, ರಿಲೇಶನ್ಶಿಪ್ ಉಳಿಸಿಕೊಂಡರು ಸಿನಿಮಾಗಳಲ್ಲಿ ಮಾತ್ರ ನಟಿಸಲ್ಲ. ರಮ್ಯಾ ಅವರನ್ನು ಹೇಗಾದ್ರು ಮಾಡಿ ಮತ್ತೆ ಬಿಗ್ ಸ್ಕ್ರೀನ್ಗೆ ತರಲೇಬೇಕು ಅಂತ ಎಂತೆಂಥಾ ಘಟಾನುಘಟಿಗಳು ಪ್ರಯತ್ನಿಸಿದ್ರು ಸಾಧ್ಯವಾಗಿರಲಿಲ್ಲ. ಅಂತು ಇಂತು ಕೊನೆಗೂ ರಮ್ಯಾ ಅವ್ರೇ ‘ನಾನು ಮತ್ತೆ ನಟಿಸ್ತೀನಿ’ ಅಂತ ಮನಸ್ಸು ಮಾಡಿ ಕಂಬ್ಯಾಕ್ ಘೋಷಿಸಿದ್ರು. ಆ್ಯಪಲ್ ಬಾಕ್ಸ್ ಎನ್ನುವ ನಿರ್ಮಾಣ ಸಂಸ್ಥೆ ಸ್ಥಾಪಿಸಿದ ರಮ್ಯಾ, ಉತ್ತರಾಕಾಂಡ ಚಿತ್ರದಲ್ಲಿ ಹೀರೋಯಿನ್ ಆಗಿ ರೀ-ಎಂಟ್ರಿ ಕೊಡ್ತಿದ್ದಾರೆ.
ಧನಂಜಯ್ ಚಿತ್ರದಲ್ಲಿ ರಮ್ಯಾ ಹೀರೋಯಿನ್!
ಉತ್ತರ ಕರ್ನಾಟಕದ ಹುಡುಗಿಯಾಗಿ ರಮ್ಯಾ ಎಂಟ್ರಿ!
ಕನ್ನಡದ ಪ್ರತಿಭಾನ್ವಿತ ನಿರ್ದೇಶಕ ರೋಹಿತ್ ಪದಕಿ ಸಾರಥ್ಯದಲ್ಲಿ ಉತ್ತರಾಕಾಂಡ ಸಿನಿಮಾ ಸೆಟ್ಟೇರಿದೆ. ಕೆಆರ್ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಶುರುವಾಗಿರೋ ಚಿತ್ರದಲ್ಲಿ ಡಾಲಿ ನಾಯಕನಾಗಿದ್ದು, ಉತ್ತರ ಕರ್ನಾಟಕದ ಹುಡುಗಿಯಾಗಿ ರಮ್ಯಾ ಕಂಬ್ಯಾಕ್ ಮಾಡ್ತಿದ್ದಾರೆ. ಸದ್ಯ ಸಿನಿಮಾದ ಮುಹೂರ್ತ ನೆರವೇರಿದ್ದು, ಸದ್ಯದಲ್ಲೇ ಶೂಟಿಂಗ್ ಶುರುವಾಗಲಿದೆ. ಇದೀಗ, ಉತ್ತರಾಕಾಂಡ ಸೆಟ್ಗೆ ರಮ್ಯಾ ಹೋಗೋಕೆ ಮುಂಚೆನೇ ಬಿಗ್ ಸರ್ಪ್ರೈಸ್ ಸುದ್ದಿಯೊಂದು ಹೊರಬಿದ್ದಿದ್ದು, ಸ್ಯಾಂಡಲ್ವುಡ್ ಮಂದಿ ವಾಹ್ ಅಂತಿದ್ದಾರೆ.
ಒಂದೇ ಚಿತ್ರದಲ್ಲಿ ಶಿವಣ್ಣ-ರಮ್ಯಾ ಆ್ಯಕ್ಟಿಂಗ್!
ಸ್ಕ್ರೀನ್ ಶೇರ್ ಮಾಡ್ತಾರೆ ‘ಆರ್ಯನ್’ ಜೋಡಿ!
ಇದನ್ನು ಓದಿ: ಬಿಸಿಸಿಐ ಗುತ್ತಿಗೆ ಒಪ್ಪಂದ; ಸ್ಟಾರ್ ಆಲ್ರೌಂಡರ್ ಜಡೇಜಾಗೆ ಗುಡ್ನ್ಯೂಸ್ ಕೊಟ್ಟ BCCI
ಉತ್ತರಾಕಾಂಡ ಚಿತ್ರದ ಮೂಲಕ ಮತ್ತೆ ಕಂಬ್ಯಾಕ್ ಮಾಡ್ತಿರೋ ಮೋಹಕ ತಾರೆ ರಮ್ಯಾ ಈಗ ಶಿವಣ್ಣ ಜೊತೆ ಸ್ಕ್ರೀನ್ ಶೇರ್ ಮಾಡ್ತಾರೆ ಅನ್ನೋ ಹೊಸ ಸುದ್ದಿ ಹೊರಬಿದ್ದಿದೆ. 2014ರಲ್ಲಿ ರಮ್ಯಾ ಮತ್ತು ಶಿವಣ್ಣ ‘ಆರ್ಯನ್’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಇದು ರಮ್ಯಾ ಅವರ ಕೊನೆಯ ಸಿನಿಮಾನೂ ಆಗಿತ್ತು. ಇದೀಗ, ತುಂಬಾ ವರ್ಷದ ನಂತರ ಬಣ್ಣದ ಲೋಕಕ್ಕೆ ಮತ್ತೆ ಬಲಗಾಲಿಟ್ಟು ಬರ್ತಿರೋ ರಮ್ಯಾ, ಸೆಂಚುರಿ ಸ್ಟಾರ್ ಜೊತೆ ತೆರೆಹಂಚಿಕೊಳ್ಳಲಿದ್ದಾರೆ ಎಂಬ ಸುದ್ದಿ ಘಮಘಮಿಸುತ್ತಿದೆ. ರಮ್ಯಾ ಮತ್ತು ಧನಂಜಯ್ ನಟಿಸ್ತಿರೋ ಉತ್ತರಾಕಾಂಡ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸ್ಪೆಷಲ್ ರೋಲ್ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಸದ್ಯಕ್ಕೆ ಇದು ಅತಿಥಿ ಪಾತ್ರ ಎಂದು ಹೇಳಲಾಗಿದ್ದು, ಶಿವಣ್ಣ ಕ್ಯಾರೆಕ್ಟರ್ ಹೆಂಗಿರುತ್ತೆ? ಗೆಟಪ್ ಹೆಂಗಿರುತ್ತೆ ಅನ್ನೋದು ಸಸ್ಪೆನ್ಸ್. ಈಗಾಗಲೇ ರಮ್ಯಾ ಮತ್ತು ಡಾಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸ್ತಿದ್ದು, ರಮ್ಯಾ ಅವರು ಧನಂಜಯ್ಗೆ ಜೋಡಿಯಾಗ್ತಾರಾ ಅಥವಾ ಶಿವಣ್ಣನಿಗೆ ಪೇರ್ ಆಗಬಹುದಾ ಎಂಬ ಕುತೂಹಲ ಹೆಚ್ಚಾಗ್ತಿದೆ.
ಒಂದು ಕಡೆ ರಮ್ಯಾ-ಶಿವಣ್ಣ ಕ್ರೇಜಿ ಒಂದು ಕಡೆಯಾದರೇ ಮತ್ತೊಂದೆಡೆ ಡಾಲಿ ಮತ್ತು ಶಿವಣ್ಣನ ಜುಗಲ್ಬಂದಿ ಕುತೂಹಲ ಕೆರಳಿಸ್ತಿದೆ. ಈ ಹಿಂದೆ ‘ಟಗರು’ ಮತ್ತು ‘ಬೈರಾಗಿ’ ಚಿತ್ರಗಳಲ್ಲಿ ಶಿವಣ್ಣ-ಡಾಲಿ ಜೋಡಿ ಕಮಾಲ್ ಮಾಡಿತ್ತು. ಇದೀಗ, ಉತ್ತರಾಕಾಂಡಗೆ ಶಿವಣ್ಣ ಎಂಟ್ರಿಯಾಗ್ತಿರೋದ್ರಿಂದ ಇದು ಹ್ಯಾಟ್ರಿಕ್ ಧಮಾಕಾ ಆಗುತ್ತಾ ಎಂಬ ನಿರೀಕ್ಷೆ ಹುಟ್ಟಿಕೊಂಡಿದೆ. ರಮ್ಯಾ ಅವರ ಕಂಬ್ಯಾಕ್ಗಾಗಿ ಅಭಿಮಾನಿಗಳು ಕಾಯ್ತಿರೋವಾಗ ಶಿವಣ್ಣನ ಎಂಟ್ರಿ ಇನ್ನಷ್ಟು ರೋಚಕತೆ ಹೆಚ್ಚಿಸಿರೋದಂತು ಸುಳ್ಳಲ್ಲ.
ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಚಿತ್ರಪ್ರೇಮಿಗಳೇ’ ಪ್ರತಿದಿನ ಸಂಜೆ 5.27ಕ್ಕೆ ನಿಮ್ಮ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post