ಇಂದು ನರೇಂದ್ರ ಮೋದಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರೋ ಇಂಡಿಯನ್ ಪ್ರೀಮಿಯರ್ ಲೀಗ್ ಕ್ವಾಲಿಫೈಯರ್ 2 ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಬೃಹತ್ ಟಾರ್ಗೆಟ್ ಕೊಟ್ಟಿದೆ.
ಟಾಸ್ ಸೋತರೂ ಫಸ್ಟ್ ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡದ ಪರ ಶುಭ್ಮನ್ ಗಿಲ್ ಅಬ್ಬರಿಸಿದರು. ಇನ್ನಿಂಗ್ಸ್ ಉದ್ಧಕ್ಕೂ ಮುಂಬೈ ಬೌಲರ್ಗಳ ಬೆವರಿಳಿಸಿದ ಶುಭ್ಮನ್ ಬರೋಬ್ಬರಿ 215ಕ್ಕೂ ಹೆಚ್ಚು ಸ್ಟ್ರೈಕ್ ರೇಟ್ನೊಂದಿಗೆ ಬ್ಯಾಟ್ ಬೀಸಿದ್ರು. ಕೇವಲ 60 ಬಾಲ್ಗಳಲ್ಲಿ 10 ಸಿಕ್ಸರ್, 7 ಫೋರ್ಗಳ ಸಮೇತ 129 ರನ್ ಸಿಡಿಸಿದರು.
ಸಾಯಿ ಸುದರ್ಶನ್ ಕೇವಲ 31 ಎಸೆತಗಳಲ್ಲಿ 1 ಸಿಕ್ಸರ್, 5 ಫೋರ್ ಸಮೇತ 43 ರನ್ ಸಿಡಿಸಿ ರಿಟೈರ್ಡ್ ಆದರು. ಹಾಗೆಯೇ ಹಾರ್ದಿಕ್ ಪಾಂಡ್ಯ ಕೇವಲ 13 ಬಾಲ್ನಲ್ಲಿ 2 ಸಿಕ್ಸರ್, 2 ಫೋರ್ ಜತೆಗೆ 28 ರನ್ ಚಚ್ಚಿದ್ರು. ಇದರ ಪರಿಣಾಮ ಗುಜರಾತ್ ಟೈಟಾನ್ಸ್ 3 ವಿಕೆಟ್ ನಷ್ಟಕ್ಕೆ ನಿಗದಿತ 20 ಓವರ್ಗಳಲ್ಲಿ 233 ರನ್ ಕಲೆ ಹಾಕಿದೆ. ಈ ಮೂಲಕ 234 ರನ್ ಬಿಗ್ ಟಾರ್ಗೆಟ್ ನೀಡಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post