ಬೆಂಗಳೂರು: ನಿಮ್ಮ ಅಪ್ಪನ ಕೈಯಲ್ಲೇ RSS ಬ್ಯಾನ್ ಮಾಡೋಕೆ ಆಗಲ್ಲ. ನಿಮ್ಮ ಅಜ್ಜಿ ಕೈಯಲ್ಲಿ ಆಗಿಲ್ಲ, ನೀವೇನ್ರೀ ಮಾಡ್ತೀರಾ..? ಎಂದು ಮಾಜಿ ಸಚಿವ ಆರ್.ಅಶೋಕ್ ಪ್ರಿಯಾಂಕ್ ಖರ್ಗೆಗೆ ಪ್ರಶ್ನೆ ಮಾಡಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಎದುರು ಮಾತನಾಡಿರುವ ಅಶೋಕ್, ಕಾಂಗ್ರೆಸ್ಗೆ ನನ್ನ ಒಂದು ಪ್ರಶ್ನೆ. ಮೆಜಾರಿಟಿ ಇದ್ದಾಗ್ಲೇ ಏನೋ ಬೇಳೆ ಬೇಯಿಸೋಕೆ ಆಗಿಲ್ಲ. ನಿಮ್ಮತ್ರ ದಮ್ಮು, ತಾಕತ್ತು ಇದ್ದರೆ ಬ್ಯಾನ್ ಮಾಡಿ ನೋಡೋಣ. ಲಕ್ಷಾಂತರ ಶಾಖೆ ಇದೆ, ಒಂದೇ ಒಂದು ಶಾಖೆ ಬ್ಯಾನ್ ಮಾಡಿ. ಹಾಗೇನಾದರೂ ಮಾಡಿದ್ರೆ ಮೂರು ತಿಂಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರಲ್ಲ. ಬಜರಂಗದಳ ಮತ್ತು ಆರ್ಎಸ್ಎಸ್ ಹಿಂದೂಗಳ ಎರಡು ಕಣ್ಣುಗಳು ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಿಯಾಂಕ್ ಖರ್ಗೆ ಏನ್ ಹೇಳಿದ್ರು..?
ನ್ಯೂಸ್ಫಸ್ಟ್ ಜೊತೆ ಮಾತನಾಡಿದ್ದ ಪ್ರಿಯಾಂಕ್ ಖರ್ಗೆ.. ಯಾವುದೇ ವ್ಯಕ್ತಿ, ಸಂಘಟನೆ, ನಮ್ಮ ಶಾಂತಿಯನ್ನು ಭಂಗ ಮಾಡಲು ಚಟುವಟಿಕೆ ನಡೆಸಿದರೆ, ಯಾರು ಕಾನೂನು ಸುವ್ಯವಸ್ಥೆಯನ್ನು ಕೆಡಿಸಲು ಪ್ರಯತ್ನ ಮಾಡುತ್ತಾರೆ. ಯಾರೆಲ್ಲ ಅಸಂವಿಧಾನಿಕವಾಗಿ ನಡೆದುಕೊಳ್ತಾರೆ. ಅವರೆಲ್ಲರ ವಿರುದ್ಧವೂ ಆ್ಯಕ್ಸನ್ ತೆಗೆದುಕೊಳ್ಳುತ್ತೇವೆ ಎಂದಿದ್ದರು. ಅದು ವ್ಯಕ್ತಿ ಇರಬಹುದು, ಸಂಘಟನೆ ಇರಬಹುದು. ಧಾರ್ಮಿಕ ಸಂಘಟನೆಯೇ ಇರಬಹುದು. ನಾನು ಕೂಡ ಏನಾದರೂ ಮಾಡಿದರೆ ನನ್ನ ಮೇಲೆ ಕ್ರಮತೆಗೆದುಕೊಳ್ಳುವ ಶಕ್ತಿ ಈ ಸರ್ಕಾರಕ್ಕೆ ಇದೆ ಎಂದಿದ್ದರು.
ಅದಕ್ಕೆ ಆರ್ಎಸ್ಎಸ್ ಕೂಡ ಸೇರುತ್ತಾ ಎಂದು ನ್ಯೂಸ್ಫಸ್ಟ್ ಕೇಳಿತ್ತು. ಅದಕ್ಕೆ ಉತ್ತರಿಸಿದ ಅವರು, ಯಾರೇ ಆದರೂ ಕೂಡ. ನನಗೆ ಕಾನೂನು ಬೇರೆ ಅಲ್ಲ, ನಿಮಗೆ ಬೇರೆ ಅಲ್ಲ. ಕಾನೂನು ಚೌಕಟ್ಟಿನಲ್ಲಿ, ಸಂವಿಧಾನದ ವ್ಯವಸ್ಥೆಯಲ್ಲಿ ನಾವು ಮಾಡ್ತೇವೆ. ಇವತ್ತು ಸಂವಿಧಾನವನ್ನು ಮುಂದಿಟ್ಟು ನಾವು ಆಳ್ವಿಕೆ ಮಾಡ್ತಿದ್ದೇವೆ. ಅದರಿಂದ ಬಿಜೆಪಿಗೆ ತೊಂದರೆ ಆಗುತ್ತದೆ ಎಂದು ವಾಗ್ದಾಳಿ ನಡೆಸಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post