ಸಿಲಿಕಾನ್ ಸಿಟಿಯಲ್ಲಿ ಕ್ರೈಂ ನಡೆಯುತ್ತಲೇ ಇರುತ್ತೆ. ಆದ್ರೆ ಇವತ್ತು ನಡೆದಿರುವಂತಹ ಘಟನೆ ಭಯಾನಕ..! ನೆಮ್ಮದಿಯ ಜೀವನ. ಮನೆಯಲ್ಲಿ ಗಂಡ ಹೆಂಡತಿ ಇಬ್ಬರೂ ವಾಸವಿದ್ದರು. ಐದಾರು ಮನೆಯಿದ್ದ ಹಿನ್ನೆಲೆಯಲ್ಲಿ ಬಾಡಿಗೆ ಸಹ ಬರ್ತಿತ್ತು. ಆದರೆ ಕೊರೊನಾ ಮಹಾಮಾರಿಗೆ ಪತಿಯ ತೀರಿಕೊಂಡಿದ್ದರು. ಆಮೇಲೆ ಹೆಂಡತಿಯದ್ದು ಒಂಟಿ ಜೀವನ. ಈ ಒಂಟಿ ಮಹಿಳೆಯನ್ನೇ ಟಾರ್ಗೆಟ್ ಮಾಡಿದ್ದ ದರೋಡೆಕೋರರು ಇಂದು ಇಡೀ ಬೆಂಗಳೂರನ್ನೇ ನಡುಗಿಸುವಂತೆ ಮಾಡಿದ್ದಾರೆ.
ಶಾಂತಮ್ಮ, ದರೋಡೆಕೋರರಿಂದ ಹಲ್ಲೆಗೊಳಗಾದ ಒಂಟಿ ಮಹಿಳೆ. ಹೌದು, ಶಾಂತಮ್ಮ ಪಾರ್ವತಿನಗರದಲ್ಲಿ ಸುಮಾರು 30 ವರ್ಷಗಳಿಂದ ವಾಸವಿದ್ದಾರೆ. ನಾಲ್ಕು ಮನೆಗಳನ್ನ ಹೊಂದ್ದಿದ್ದು, ಎರಡು ಮನೆಗಳನ್ನು ಬಾಡಿಗೆಗೆ ನೀಡಿದ್ದರು. ಮನೆಯಲ್ಲಿ ಒಂಟಿಯಾಗಿ ವಾಸಮಾಡ್ತಿದ್ದ ಶಾಂತಮ್ಮರನ್ನು ಅನಾಮಿಕ ಮಹಿಳೆ ವಾಚ್ ಮಾಡ್ತಿರ್ತಾಳೆ. ಹಾಗೇ ಮನೆ ಕೆಳೋ ನೆಪದಲ್ಲಿ ಬಂದು ಶಾಂತಮ್ಮಳ ಸ್ನೇಹ ಬೆಳೆಸಿದ್ದಳು.
ಲಟ್ಟಣಿಗೆಯಿಂದ ಹಲ್ಲೆ..!
ಶಾಂತಮ್ಮಳ ಪರಿಚಯ ಮಾಡ್ಕೊಂಡಿದ್ದ ಖತರ್ನಾಕ್ ಲೇಡಿ, ಇವತ್ತು ಮನಗೆ ಶಿಫ್ಟ್ ಆಗಿ ಹಾಲು ಉಕ್ಕಿಸೋದಾಗಿ ಹೇಳಿದ್ದಳು. ಮನೆಯೊಳಗೆ ಹೋದ ಲೇಡಿ, ಶಾಂತಮ್ಮಳ ಜೊತೆ ಮಾತು ಆರಂಭಿಸ್ತಾಳೆ. ಬಳಿಕ ತಾನೇ ತಂದಿದ್ದ ಹಿಟ್ಟಿನ ಕೋಲು ತಗೊಂಡು ಭೀಕರವಾಗಿ ಹಲ್ಲೆ ಮಾಡಿದ್ದಾಳೆ. ನಂತರ ಶಾಂತಮ್ಮ ಕೊರಳಲ್ಲಿದ್ದ ಚಿನ್ನದ ಸರವನ್ನು ದೋಚಿ ಎಸ್ಕೇಪ್ ಆಗಿದ್ದಾಳೆ.
ರಕ್ತದ ಮಡುವಿನಲ್ಲಿ ಬಿದಿದ್ದ ಶಾಂತಮ್ಮ ಕಷ್ಟಪಟ್ಟು ಮೇಲೆದ್ದು, ಮನೆಯಿಂದ ಆಚೆ ಬಂದು ಚೀರಾಡಿದ್ದಾರೆ. ಆಕೆಯ ಪರಿಸ್ಥಿತಿ ಕಂಡ ಸ್ಥಳೀಯ ನಿವಾಸಿಗಳು ಆಕೆಯನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮನೆ ಖಾಲಿ ಇದೆ ಎಂದು ಕೇಳಲು ಬಂದವರ ಮೇಲೆ ಯಾವುದಕ್ಕೂ ಒಂದು ಕಣ್ಣು ಇಟ್ಟಿರೋದು ಒಳ್ಳೆಯದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post