ನೀರಿಗಾಗಿ ಅದೆಷ್ಟೋ ಜನರು, ಪ್ರಾಣಿಗಳು ಪರಿ ತಪ್ಪುವುದನ್ನು ಕಂಡಿದ್ದೇವೆ. ಆದ್ರೆ ಇಲ್ಲೊಬ್ಬ ಅಧಿಕಾರಿ ಕೇವಲ ಒಂದೇ ಒಂದು ಫೋನ್ಗಾಗಿ ಇಡೀ ಡ್ಯಾಮ್ನಲ್ಲಿದ್ದ ನೀರನ್ನೇ ಖಾಲಿ ಮಾಡ್ಬಿಟ್ಟಿದ್ದಾನೆ.. ಸುಮಾರು 21 ಲಕ್ಷ ಲೀಟರ್ ನೀರನ್ನ ಅಣೆಕಟ್ಟಿನಿಂದ ಹೊರ ಬಿಟ್ಟ ಘಟನೆ ಛತ್ತೀಸ್ಗಢ್ನಲ್ಲಿ ಖೇರ್ಕಟ್ಟಾದಲ್ಲಿ ನಡೆದಿದೆ.
ಹೌದು. ಆಹಾರ ಅಧಿಕಾರಿ ರಾಜೇಶ್ ವಿಶ್ವಾಸ್ ಅವರು ಖೇರ್ಕಟ್ಟಾ ಅಣೆಕಟ್ಟಿನಲ್ಲಿ ವಿಹಾರವನ್ನು ಹೋಗಿದ್ರು. ಆದ್ರೆ, ಆಕಸ್ಮಿಕವಾಗಿ ತಮ್ಮ ಸ್ಮಾರ್ಟ್ಫೋನ್ ಕೈಯಿಂದ ನೀರಿಗೆ ಬಿದ್ದಿದೆ. ಫೋನ್ನಲ್ಲಿ ಸರ್ಕಾರದ ಸೂಕ್ಷ್ಮ ಡೇಟಾ ಇದೆ ಅಂತ 21 ಲಕ್ಷ ಲೀಟರ್ ನೀರು ಹರಿದು ಬಿಟ್ಟಿದ್ದಾರೆ.
ಜಿಲ್ಲಾಧಿಕಾರಿಯ ಅಮಾನತು
ಸ್ಥಳಕ್ಕೆ ನೀರಾವರಿ ಮತ್ತು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಧಾವಿಸಿ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಯಿಂದ ಅನುಮತಿ ಪಡೆಯದ ಆರೋಪದ ಮೇಲೆ ಜಿಲ್ಲಾಧಿಕಾರಿ ಪ್ರಿಯಾಂಕಾ ಶುಕ್ಲಾ ಅವರು ರಾಜೇಶ್ವರನ್ನು ಅಮಾನತುಗೊಳಿಸಿದ್ದಾರೆ ಅಂತ ತಿಳಿದು ಬಂದಿದೆ.
पखांजुर में फूड इंस्पेक्टर ने अपना मोबाइल निकालने के लिए जलाशय को खाली कर दिया! यह सामान्य बात नहीं है! भूपेश सरकार आने के बाद हर जिले में, हर स्तर पर प्रशासनिक आतंकवाद चरम पर है!
अधिकारी बेलगाम हैं, गली-गली में कांग्रेस सरकार बदनाम है!@bhupeshbaghel pic.twitter.com/0oraGIoRjd
— Rajesh munat (@RajeshMunat) May 26, 2023
ರಾಜೇಶ್ ವಿಶ್ವಾಸ್ ರಜಾ ನಿಮಿತ್ತ ಕುಟುಂಬ ಸಮೇತರಾಗಿ ಜಲಾಶಯಕ್ಕೆ ಹೋಗಿದ್ರು. ಈ ವೇಳೆ 15 ಅಡಿಯಷ್ಟು ನೀರು ತುಂಬಿದ ಜಲಾಶಯಕ್ಕೆ ತಮ್ಮ 1.5 ಲಕ್ಷದ ಮೊಬೈಲ್ ಜಾರಿ ಬಿದ್ದಿದೆ. ಹೀಗಾಗಿ ಜಲಾಶಯದ ನೀರನ್ನು ಖಾಲಿ ಮಾಡಿದ್ದಾರೆ. ಇನ್ನು 21 ಲಕ್ಷ ಲೀಟರ್ ನೀರನ್ನು ಸುಮಾರು 1500 ಎಕರೆ ಕೃಷಿ ಭೂಮಿಗೆ ಬಳಕೆ ಮಾಡಬಹುದಿತ್ತು. ಆದರೆ ಅಧಿಕಾರಿಯ ನಿರ್ಲಕ್ಷ್ಯಕ್ಕೆ 21 ಲಕ್ಷ ಲೀಟರ್ ಹೊರಚೆಲ್ಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post