ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠಮಾಸ, ಶುಕ್ಲಪಕ್ಷ, ಅಷ್ಟಮಿ ತಿಥಿ, ಮಖಾ ನಕ್ಷತ್ರ
ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10:30 ರವರೆಗೆ ಇರಲಿದೆ.
ಮೇಷ :
- ಈ ದಿನ ಶುಭವಾದ ದಿನ ಸದ್ವಿನಿಯೋಗ ಮಾಡಿಕೊಳ್ಳಿ
- ಆಹಾರದ ಬೆಲೆ ಮತ್ತು ಅದರ ಅಗತ್ಯವನ್ನು ತಿಳಿಯುವ ದಿನ
- ಖಾಸಗಿ ಉದ್ಯೋಗಸ್ಥರಿಗೆ ಆದಾಯ ಹೆಚ್ಚಳ ಆಗುವ ದಿನ
- ಕಾಲೋಚಿತ ಅನಾರೋಗ್ಯದಿಂದ ಸ್ವಲ್ಪ ಹಿಂಸೆ ಆಗಬಹುದು
- ನಿಮ್ಮ ಮಾತು ನಿಯಂತ್ರಣದಲ್ಲಿರಬೇಕು
- ವಿನಾಕಾರಣ ಜಗಳವನ್ನು ಮಾಡಬೇಡಿ ತಾಳ್ಮೆ ಇರಲಿ
- ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ
ವೃಷಭ :
- ವ್ಯವಹಾರದಲ್ಲಿ ಅಭಿವೃದ್ಧಿಯ ಸೂಚನೆ ಇದೆ
- ವಿವಾದಗಳನ್ನು ಇತ್ಯರ್ಥ ಮಾಡಿಕೊಳ್ಳಲು ಶುಭದಿನ
- ಕುಟುಂಬದ ಅಗತ್ಯತೆ ಬಗ್ಗೆ ಗಮನಹರಿಸಿ
- ಸಂತೋಷಕ್ಕಾಗಿ ಹಣ ಖರ್ಚಾಗಬಹುದು
- ದೂರದ ಪ್ರಯಾಣದಿಂದ ಆಯಾಸ ಆಗಬಹುದು
- ಮನೆಯವರ ಸಲಹೆಯನ್ನು ಅವಮಾನಿಸಬೇಡಿ ಮಾನ್ಯ ಮಾಡಿ
- ವಿಷ್ಣುವಿಗೆ ಅರ್ಚನೆ ಮಾಡಿಸಲು ತುಳಸಿಯನ್ನು ಕೊಡಿ
ಮಿಥುನ :
- ಆತ್ಮೀಯರಿಂದ ಮಾನಸಿಕ ವೇದನೆಯಾಗಬಹುದು
- ನಿಮ್ಮ ದೌರ್ಬಲ್ಯಗಳನ್ನು ಆದಷ್ಟು ಗೌಪ್ಯವಾಗಿರಲಿ
- ಸಣ್ಣ ಪುಟ್ಟ ವಿಚಾರಗಳು ದೊಡ್ಡದಾಗಿ ಮನಸ್ಸಿಗೆ ಬೇಸರ ಆಗಲಿದೆ
- ಆರ್ಥಿಕ ಪರಿಸ್ಥಿತಿಯಿಂದ ನಿಮಗೆ ಆತಂಕವಾಗಬಹುದು
- ತಪ್ಪು ಮಾರ್ಗ ಅಥವಾ ತಪ್ಪು ನಿರ್ಧಾರಗಳು ಬೇಡ
- ಹಿರಿಯರ ಮಾರ್ಗದರ್ಶನವನ್ನು ಪಡೆಯಿರಿ
- ದುರ್ಗಾರಾಧನೆಯನ್ನು ಮಾಡಿ
ಕಟಕ :
- ನಿಮ್ಮ ವರ್ತನೆ ನಿಮ್ಮ ನಿರ್ಧಾರಗಳಿಂದ ಹಲವರಿಗೆ ಸಂತೋಷ ಆಗಲಿದೆ
- ವ್ಯಾವಹಾರಿಕವಾಗಿ ಉತ್ತಮವಾದ ಸ್ಥಿತಿಗತಿ
- ರಾಜಕಾರಣಿಗಳಿಗೆ ಅನುಕೂಲವಿದೆ ಜೊತೆಗೆ ಸವಾಲುಗಳಿರುತ್ತದೆ
- ದೈಹಿಕ ಸಮಸ್ಯೆಗಳು ಹೆಚ್ಚಾಗಬಹುದು
- ಹಳೆಯ ಹಣ ಅಥವಾ ದ್ರವ್ಯಕ್ಕೆ ಕುತ್ತು ಬರಬಹುದು
- ಮಕ್ಕಳಿಂದ ಹಲವಾರು ಹೊಸ ಯೋಜನೆಗಳನ್ನು ಹಾಕುವುದಕ್ಕೆ ಅವಕಾಶವಿದೆ
- ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ
ಸಿಂಹ :
- ನಿಮ್ಮ ಜಾಣ್ಮೆಯ ಮಾತುಗಳಿಂದ ಹಲವಾರು ಜನರಿಗೆ ಸಮಸ್ಯೆ ಬಗೆಹರಿಯಲಿದೆ
- ಹಳೆಯ ಸ್ನೇಹಿತರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತೀರಿ
- ಅತ್ಯುತ್ತಮವಾದ ಕಾರ್ಯವೈಖರಿಯನ್ನು ಈ ದಿನ ಪ್ರದರ್ಶನ ಮಾಡುತ್ತೀರಿ
- ವ್ಯಾಪಾರ, ವ್ಯವಹಾರಕ್ಕೆ ಅನುಕೂಲಕರವಾದ ದಿನ
- ತಂದೆಯವರ ವ್ಯವಹಾರದಲ್ಲಿ ಕೈಜೋಡಿಸುವುದರಿಂದ ಲಾಭ ಆಗಲಿದೆ
- ಮನೆಯಲ್ಲಿ ಆನಂದದ ವಾತಾವರಣ ಇರುವುದು ಶುಭ ಸೂಚನೆಯನ್ನು ಹೇಳುತ್ತದೆ
- ಕುಲದೇವತಾ ಆರಾಧನೆ ಮಾಡಿ
ಕನ್ಯಾ :
- ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ದಿನ
- ನಿಮ್ಮನ್ನ ಬೇರೆಯವರ ಜೊತೆಯಲ್ಲಿ ಹೋಲಿಕೆ ಮಾಡಿಕೊಳ್ಳಬೇಡಿ
- ವಿದ್ಯಾರ್ಥಿಗಳು ಅಧ್ಯಯನದ ಬಗ್ಗೆ ಜಾಗರೂಕರಾಗಿರಬೇಕು
- ಈಡೇರದ ಆಸೆಗಳು ಇಂದು ಸಾಕಾರವಾಗಬಹುದು
- ಆರೋಗ್ಯದಲ್ಲಿ ಸಣ್ಣ ಪುಟ್ಟ ಏರುಪೇರುಗಳು ಆಗಬಹುದು
- ಹೊಸ ಅವಕಾಶಗಳಿಗೆ ದಾರಿ ಇರಲಿದೆ
- ಶ್ರೀರಾಮ ಪರಿವಾರ ದೇವತಾರಾಧನೆ ಮಾಡಿ
ತುಲಾ :
- ಪ್ರೇಮಿಗಳಿಗೆ ಕುಟುಂಬದವರಿಂದ ಸಮಸ್ಯೆಯಾಗಬಹುದು
- ಹಲವಾರು ಹೊಸ ವಿಚಾರಗಳಿಗೆ ಚಾಲನೆ ಸಿಗಬಹುದು
- ಆಹಾರ ಹಾಗೆ ಆರೋಗ್ಯ ಎರಡು ಕಡೆ ಗಮನ ಕೊಡಿ
- ಅತಿಯಾದ ಆಲೋಚನೆಗಳನ್ನು ಮಾಡಬೇಡಿ ಆತಂಕ ಹೆಚ್ಚಾಗಬಹುದು
- ಮಾನಸಿಕ ಸಮಾಧಾನದಿಂದ ಕೆಲಸ ಮಾಡಿ ಶುಭವಿದೆ
- ಮನೆಯವರ ಸಂಪೂರ್ಣ ಸಹಕಾರ ಸಿಗಬಹುದು
- ನರಸಿಂಹ ಸ್ವಾಮಿಯ ಆರಾಧನೆ ಮಾಡಿ
ವೃಶ್ಚಿಕ :
- ಅವಿವಾಹಿತರಿಗೆ ಶುಭಸುದ್ದಿ ಆದರೆ ಮನೆಯವರಿಂದಲೇ ವಿವಾಹ ವಿಚಾರಕ್ಕೆ ಗೊಂದಲ
- ವ್ಯವಹಾರದಲ್ಲಿ ಮುನ್ನಡೆಯಾಗಲಿದೆ
- ಹಳೆಯ ಬಾಕಿ ಬರುತ್ತದೆ ಆದರೆ ಹೊಸ ಸಾಲ ಮಾಡಬೇಡಿ
- ಮನಸ್ಸು ಚಂಚಲವಾಗಿ ಹಲವಾರು ತೊಂದರೆಗಳನ್ನು ಅನುಭವಿಸುತ್ತೀರಿ
- ವಿದ್ಯಾರ್ಥಿಗಳಿಗೆ ಸ್ವಲ್ಪ ಬೇಸರ ದಿನ
- ತಂದೆಯವರ ಜೊತೆಯಲ್ಲಿ ಉತ್ತಮವಾದ ಹೊಂದಾಣಿಕೆಯನ್ನು ಇಟ್ಟುಕೊಂಡಿರುತ್ತೀರಿ
- ಸ್ವಯಂವರ ಪಾರ್ವತಿಯ ಉಪಾಸನೆ ಮಾಡಿ
ಧನುಸ್ಸು :
- ಅನಾರೋಗ್ಯ ಸಮಸ್ಯೆಗೆ ವೈದ್ಯರ ಸಲಹೆಯನ್ನು ಅಗತ್ಯವಾಗಿ ಪಡೆದುಕೊಳ್ಳಬೇಕು
- ಮಕ್ಕಳ ಚಿಂತೆ ನಿಮಗೆ ಕಾಡಲಿದೆ
- ವ್ಯಾಪಾರದಲ್ಲಿ ಶಾಶ್ವತವಾದ ಆದಾಯಕ್ಕೆ ಯೋಜನೆಯನ್ನು ಹಾಕುತ್ತೀರಿ
- ಸಮಾಜದಲ್ಲಿ ಗೌರವ ಸಿಗುವ ದಿನವಾಗಿದೆ
- ಉತ್ತಮವಾದ ವಿಚಾರಗಳಲ್ಲಿ ಚರ್ಚೆಯನ್ನು ಮಾಡಿ
- ಮನೆಯಲ್ಲಿ ಉತ್ತಮ ವಾತಾವರಣ ಇರುತ್ತದೆ
- ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ
ಮಕರ :
- ಆಸ್ತಿ ಖರೀದಿಯಲ್ಲಿ ಸಮಸ್ಯೆ ಆಗಬಹುದು
- ಇಂದು ಪ್ರೇಮಿಗಳಿಗೆ ಕಹಿಯ ಅನುಭವ ಆಗಲಿದೆ
- ಸಣ್ಣ ವಿಚಾರಗಳಿಗೆ ಕೋಪ ಬರುವುದರಿಂದ ತೊಂದರೆ ಆಗಬಹುದು
- ಪ್ರತಿಭೆಯನ್ನು ಹೆಚ್ಚಿಸಲು ಪ್ರಯತ್ನ ಮಾಡಿ
- ಮನೆಯಲ್ಲಿ ಸ್ವಲ್ಪ ಹೊಂದಾಣಿಕೆ ಇರಲಿ
- ಸೋತು ಗೆಲ್ಲುವ ಸೂತ್ರವನ್ನು ಅಳವಡಿಸಿಕೊಳ್ಳಿ ಶುಭವಿದೆ
- ಮಹಾಗಣಪತಿಯನ್ನು ಪ್ರಾರ್ಥನೆ ಮಾಡಿ
ಕುಂಭ :
- ನಿರುದ್ಯೋಗಿಗಳಿಗೆ ಕೆಲಸದ ಚಿಂತೆ ಕಾಡಲಿದೆ
- ಪ್ರಯಾಣದಲ್ಲಿ ಅನಾನುಕೂಲ ಇರಲಿದೆ
- ಸಾಮಾಜಿಕ ಕೆಲಸಗಳಲ್ಲಿ ಸಕ್ರಿಯರಾಗಿರುತ್ತೀರಿ
- ರಾಜಕೀಯ ಸಂಬಂಧಿಸಿದ ವಿವಾದಗಳು ಬೇಡ
- ಕುಟುಂಬದ ಜವಾಬ್ದಾರಿಯ ಬಗ್ಗೆ ಗಮನ ಕೊಡಿ
- ಹಣದ ವಿಚಾರಕ್ಕೆ ಬಂಧುಗಳಿಂದ ವಿರೋಧ ಆಗಲಿದೆ
- ನವಗ್ರಹರ ಪ್ರಾರ್ಥನೆ ಮಾಡಿ
ಮೀನ :
- ನಿಮ್ಮ ಕಾರ್ಯಕ್ಷೇತ್ರದಲ್ಲಿ ತುಂಬಾ ಗಂಭೀರವಾದ ಸಮಸ್ಯೆಗಳು ಉಂಟಾಗಲಿದೆ
- ಬುದ್ಧಿವಂತಿಕೆಯಿಂದ ಕೆಲಸವನ್ನು ನಿರ್ವಹಿಸಿ
- ಅನಿರೀಕ್ಷಿತವಾದ ಧನಾಗಮನದಿಂದ ಸಂತೋಷ ಪಡುತ್ತೀರಿ
- ನೌಕರರಿಗೆ ಹೆಚ್ಚಿನ ಒತ್ತಡದ ಜೊತೆ ಭಯವೂ ಇರುತ್ತದೆ
- ದೂರದ ಪ್ರಯಾಣದ ಸಾಧ್ಯತೆ ಇರುತ್ತದೆ
- ಆಪ್ತರ ಸಂಪೂರ್ಣ ಬೆಂಬಲ ಸಿಗಬಹುದು
- ಸದ್ಗುರುಗಳನ್ನು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post