ಮತ್ತೊಂದು ವಿಭಿನ್ನ ಕಥೆಗೆ ಕೈಹಾಕಿದ ಧಾರಾವಾಹಿಯ ಸ್ಟಾರ್ ನಿರ್ದೇಶಕ
ಕಿರುತೆರೆಯಲ್ಲಿ ಬಹುದಿನಗಳಿಂದ ಕೇಳಿ ಬರುತ್ತಿದೆ ಈ ಸೀರಿಯಲ್ ಹೆಸರು
ರಾಮ್ ಜೀ 7 ಗಂಟೆಯ ಸ್ಲಾಟ್ಗೆ ಮತ್ತೆ ಫಿಕ್ಸಾ, ಬೃಂದಾವನ ಸ್ಲಾಟ್ ಏನು?
ಕಿರುತೆರೆಯ ಲೋಕದಲ್ಲಿ ಈಗ ಹೊಸ ಪ್ರಯೋಗಗಳಿಗೆ ಸಿಕ್ಕಾಪಟ್ಟೆ ಅವಕಾಶಗಳು ದೊರಕುತ್ತಿವೆ. ಈ ಅವಕಾಶಗಳನ್ನ ಸರಿಯಾಗಿ ಉಪಯೋಗ ಮಾಡಿಕೊಳ್ಳುತ್ತಿರೋ ನೆಚ್ಚಿನ ಕಲರ್ಸ್ ಕನ್ನಡ ವಾಹಿನಿ. ಸದ್ಯ ಹೊಸ ಹೊಸ ಸ್ವಂತ ಕಥೆಗಳನ್ನ ಆಯ್ದು ಪ್ರೇಕ್ಷಕರ ಮುಂದೆ ಪ್ರಸ್ತುತ ಪಡಿಸುತ್ತಿದೆ.
ಈಗಾಗ್ಲೇ ಬಹುತೇಕ ಸೀರಿಯಲ್ಗಳು ತನ್ನ ಸ್ವಂತ ಕಥೆಗಳಿಂದಾಗಿ ಕರುನಾಡಿನ ಜನರ ಮನಸ್ಸನ್ನು ಗೆಲ್ಲುತ್ತಿವೆ. ಸ್ವಂತ ಕತೆಗಳನ್ನ ತರುವಲ್ಲಿ ಯಶಸ್ವಿಯಾಗಿ ಮುನ್ನುಗುತ್ತಿರೋದು ಗಗನ ಎಂಟರ್ಪ್ರೈಸಸ್ ಪ್ರೊಡಕ್ಷನ್ ತಂಡ. ಹೌದು ರಾಮ್ಜೀ ಅವ್ರ ನಿರ್ದೇಶನದಲ್ಲಿ ಕಲರ್ಸ್ಗೆ ಭಿನ್ನ ವಿಭಿನ್ನವಾದ ಕತೆಗಳು ಸಿಕ್ಕಿವೆ. ಈಗ ಇದೇ ನಿರ್ದೆಶಕರು ವಾಹಿನಿಯಲ್ಲಿ ಮತ್ತೊಂದು ಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಅದೇನು ಅಂದ್ರಾ?.
ಕಿರುತೆರೆಯ ಅಂಗಳದಲ್ಲಿ ಬಹು ತಿಂಗಳಿಂದ ಬೃಂದಾವನ ಎಂಬ ಸೀರಿಯಲ್ ಬರಲಿದೆ ಅನ್ನೋ ಸಾಕಷ್ಟು ಮಾಹಿತಿಗಳು ಬರ್ತಿದ್ದವು. ಈಗ ಅದು ನಿಜವಾಗಿವೆ. ಮತ್ತೊಮ್ಮೆ ರಾಮ್ಜಿ ಅವರ ನಿರ್ದೇಶನದಲ್ಲಿ ಬೃಂದಾವನ ಸೀರಿಯಲ್ ಸದ್ಯದಲ್ಲೇ ತೆರೆ ಕಾಣಲಿದೆ.
ರಾಮ್ಜೀ ಅವರ ಎವರ್ ಗ್ರೀನ್ ಹಿಟ್ ಸೀರಿಯಲ್ ಅಂದ್ರೆ, ಅದು ಪುಟ್ಟಗೌರಿ ಮದುವೆ ಹಾಗೂ ಮಂಗಳ ಗೌರಿ ಮದುವೆ. ಸತತ 10 ವರ್ಷ ಕಾಲ ರಾಮ್ಜೀ ಅವ್ರು 7 ಗಂಟೆಯ ಸ್ಲಾಟ್ನ ಯಾರಿಗೂ ಬಿಟ್ಟು ಕೊಡದೇ ತಮ್ಮ ಹಿಟ್ ಮೇಲೆ ಹಿಟ್ ಕೊಟ್ಟಿದ್ದಾರೆ. ಇದಾದ ನಂತರದಲ್ಲಿ ಕಲರ್ಸ್ ಹಾಗೂ ರಾಮ್ಜೀ ಅವರ ಅನುಬಂಧ ಬೆಳೆದು ದೊಡ್ಡದಾಯಿತು. ಈ ಮಧ್ಯೆ ಗೀತಾ, ರಾಮಾಚಾರಿ ಹಾಗೂ ಗಂಡ ಹೆಂಡ್ತಿ ಹೀಗೆ ಸೀರಿಯಲ್ಗಳನ್ನ ಕೊಡ್ತಾ ಬಂದಿದ್ದಾರೆ. ಈಗ ಇದೇ ಸಾಲಿಗೆ ಬೃಂದಾವನ ಎಂಬ ಧಾರಾವಾಹಿ ಕೂಡ ಸದ್ಯದಲ್ಲೇ ಸೇರ್ಪಡೆ ಆಗಲಿದೆ. ಎಲ್ಲ ಅಂದುಕೊಂಡಂತೆ ಆದ್ರೆ ಬಿಗ್ಬಾಸ್ ಸೀಸನ್-10 ಮುಗಿದ ಬಳಿಕ ಜನವರಿಯಲ್ಲಿ ಈ ಧಾರಾವಾಹಿ ತೆರೆ ಕಾಣಲಿದೆ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ