ಕೃಷ್ಣನೂರಿನಲ್ಲಿ ಕೃಷ್ಣ ಜನ್ಮಾಷ್ಟಮಿ ಸಡಗರ ಆರಾಧನೆಗೆ ಸಕಲ ಸಿದ್ಧತೆ
ಮುಂಜಾನೆಯಿಂದ ಕೃಷ್ಣನಿಗೆ ಅಭಿಷೇಕ ವಿಶೇಷ ಅಲಂಕಾರ ಪೂಜೆ
ನಾಳೆ ಮಧ್ಯಾಹ್ನ 3ಕ್ಕೆ ಶ್ರೀ ಕೃಷ್ಣನ ಮೃಣ್ಮಯ ಮೂರ್ತಿಯ ರಥೋತ್ಸವ
ಇವತ್ತು ಕೃಷ್ಣ ಜನ್ಮಾಷ್ಟಮಿ. ರಾಜ್ಯದ ಕೃಷ್ಣನೂರಿನಲ್ಲಿ ಇನ್ನೆರಡು ದಿನ ಕೃಷ್ಣ ಜನ್ಮಾಷ್ಟಮಿಯದ್ದೇ ಸಂಭ್ರಮ. ಉಡುಪಿ ಕೃಷ್ಣಮಠದಲ್ಲಿ ಕಣ್ಮನ ಸೆಳೆಯುವ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು, ಮುದ್ದು ಕೃಷ್ಣ ಸ್ಪರ್ಧೆಗಳು, ವಿಶೇಷ ಪೂಜೆ ನೆರವೇರಲಿವೆ. ಮತ್ತೊಂದೆಡೆ ಮಂಗಳೂರಿನ ಶಾಲೆಯೊಂದರಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಸ್ವತಂತ್ರ ದಿನಾಚರಣೆಯಂತೆ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ.
ಇದನ್ನೂ ಓದಿ: Krishna janmashtami: ಈ ಬಾರಿ ಶ್ರೀಕೃಷ್ಣ ಜನ್ಮಾಷ್ಟಮಿ ಬಹಳ ವಿಶೇಷ.. ಈ ರಾಶಿಗೆ ಅತ್ಯಂತ ಮಂಗಳಕರ!
ಉಡುಪಿಯ ಕೃಷ್ಣ ರಥಭೀದಿ ಅಲಂಕಾರದಿಂದ ಕಂಗೊಳಿಸುತ್ತದೆ. ಗೊಲ್ಲ ಸಮುದಾಯ ಮೊಸರು ಕುಡಿಕೆಗೆ ರಥಬೀದಿಯುದ್ದಕ್ಕೂ ಗೋಪುರಗಳು ಸಿದ್ದಗೊಂಡಿದೆ. ಮುಂಜಾನೆಯಿಂದ ಕೃಷ್ಣನಿಗೆ ಅಭಿಷೇಕ ವಿಶೇಷ ಅಲಂಕಾರ ಪೂಜೆ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದೆ.
ಇಂದು ತಡರಾತ್ರಿ ರಾತ್ರಿ 12ಗಂಟೆ 8 ನಿಮಿಷಕ್ಕೆ ಸರಿಯಾಗಿ ಪರ್ಯಾಯ ಸುಗುಣೇಂದ್ರ ತೀರ್ಥ ಸ್ವಾಮೀಜಿ ಶ್ರೀ ಕೃಷ್ಣನಿಗೆ ಅರ್ಘ್ಯ ಸಮರ್ಪಿಸುತ್ತಾರೆ. ನಾಳೆ ಮಧ್ಯಾಹ್ನ 3ಕ್ಕೆ ಶ್ರೀ ಕೃಷ್ಣನ ಮೃಣ್ಮಯ ಮೂರ್ತಿಯ ರಥೋತ್ಸವ ನಡೆಯುತ್ತೆ. ಮುಂದೆ ಗೊಲ್ಲರು ಮಡಿಕೆ ಒಡೆಯುತ್ತಾ ಸಾಗಿದರೆ ಹಿಂದೆ ರಥಗಳು ಸಾಗಿ ಬರುತ್ತವೆ. ಮೂರು ಸುತ್ತು ರಥೋತ್ಸವ ಬಳಿಕ ಮಧ್ವ ಸರೋವರದಲ್ಲಿ ಜಲಸ್ತಂಭನ ನಡೆಯಲಿದೆ.
ಉಡುಪಿ ರಥಬೀದಿಯಲ್ಲಿ ನಾಳೆ ವಿಟ್ಲಪಿಂಡಿ ಉತ್ಸವ ನಡೆಯಲಿದೆ. ಈ ವೇಳೆ ಕೃಷ್ಣನಿಗಾಗಿ 108 ಬಗೆಯ ಲಡ್ಡುಗಳನ್ನು ತಯಾರಿಸಲಾಗುತ್ತಿದೆ. ಎಲ್ಲಾ ಬಗೆಯ ಹಣ್ಣು, ತರಕಾರಿ, ಡ್ರೈ ಫ್ರುಟ್ ಮತ್ತು ಧಾನ್ಯಗಳಿಂದ ಬಗೆಬಗೆಯ ಲಡ್ಡು ಕೃಷ್ಣನಿಗಾಗಿ ತಯಾರಾಗುತ್ತಿದೆ. ಇದನ್ನು ಕೃಷ್ಣನಿಗೆ ಅರ್ಪಿಸಿದ ಬಳಿಕ ಭಕ್ತರಿಗೆ ಹಂಚಲಾಗುತ್ತದೆ. ಇನ್ನು ಅಷ್ಠಮಿಯಂದು ಉಡುಪಿಯಲ್ಲಿ ಹುಲಿ ವೇಷಧಾರಿಗಳು ಊರಿನಲ್ಲೆಡೆ ಸಂಚರಿಸಿ ಹುಲಿ ಕುಣಿತ ನಡೆಸುತ್ತಾರೆ. ಕೃಷ್ಣನೂರ ಕೃಷ್ಣಲೀಲೋತ್ಸವದ ಸಂಭ್ರಮವಾದ್ರೆ, ಮಂಗಳೂರಿನ ಕೆನರಾ ಕಿರಿಯ ಪ್ರಾರ್ಥಮಿಕ ಶಾಲಾ ಆವರಣದಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನ ಸ್ವತಂತ್ರ ದಿನಾಚರಣೆಯಂತೆ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಈ ಶಾಲೆಯಲ್ಲಿ ನಡೆಯುವ ಕೃಷ್ಣ ಜನ್ಮಾಷ್ಟಮಿ ಆಚರಣೆಗೂ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಗೂ ಅವಿನಾಭಾವ ಸಂಬಂಧವಿದೆ.
ಇದನ್ನೂ ಓದಿ: ಚೆನ್ನಾಗಿದ್ದೀರಾ ಬಾಸ್.. ಹೂ ಚಿನ್ನ; ದರ್ಶನ್ ಬಿಂದಾಸ್ ಲೈಫ್‌ಗೆ ಹೊಸ ಟ್ವಿಸ್ಟ್; ವಿಡಿಯೋ ಕಾಲ್ ಮಾಡಿದ್ಯಾರು?
ಸ್ವತಂತ್ರ ಸಂಗ್ರಾಮದ ಸಂದರ್ಭದಲ್ಲಿ ಮಹಾತ್ಮ ಗಾಂಧಿಯವರು ಮಂಗಳೂರಿಗೆ ಮೂರು ಬಾರಿ ಭೇಟಿ ನೀಡಿದ್ದರು. 1934 ಫೆಬ್ರವರಿ 24 ರಂದು ಮಂಗಳೂರಿಗೆ ಭೇಟಿ ನೀಡಿದ್ದ ವೇಳೆ ಮಂಗಳೂರಿನ ಖ್ಯಾತ ವಕೀಲರಾಗಿದ್ದ ಅಮ್ಮೆಂಬಳ ಸುಬ್ಬರಾವ್ ಪೈ ಅವರ ಢೊಂಗರಕೇರಿಯಲ್ಲಿರುವ ಕೆನರಾ ಕಿರಿಯ ಪ್ರಾರ್ಥಮಿಕ ಶಾಲೆಗೆ ಗಾಂಧೀಜಿಯನ್ನ ಕರೆಸಿದ್ರು. ಶಾಲೆಯ ಆವರಣದಲ್ಲಿರೋ ಶ್ರೀ ಕೃಷ್ಣ ಮಂದಿರಕ್ಕೆ ಬಾಪುಯಿಂದ ಶಂಕುಸ್ಥಾಪನೆ ಮಾಡಿಸಿದ್ದರು. ಹೀಗಾಗಿ ಶಾಲೆಯ ಆವರಣದಲ್ಲಿ 90 ವರ್ಷಗಳಿಂದ ಶ್ರೀಕೃಷ್ಣನಿಗೆ ಪ್ರತಿನಿತ್ಯ ಪೂಜೆ ಸಲ್ಲಿಸಲಾಗುತ್ತದೆ.
ಪ್ರಖ್ಯಾತ ಶಿಲ್ಪಿ ರೇಂಜಾಲ ಗೋಪಾಲಕೃಷ್ಣ ಶಣೈ ಅವರು ಕೆತ್ತಿದ ಏಕಶಿಲಾ ಶ್ರೀ ಕೃಷ್ಣನ ಮೂರ್ತಿ ಇಲ್ಲಿ ಪ್ರತಿಷ್ಠಾಸಲಾಗಿದ್ದು, ಪ್ರತಿನಿತ್ಯ ಇಲ್ಲಿ ಪುಟಾಣಿಗಳಿಂದ ವಿಶೇಷ ಪೂಜೆ ಭಜನೆ ನಡೆಯುತ್ತದೆ. ಇನ್ನೂ ದಕ್ಷಿಣಾಭಿಮುಖವಾಗಿ ನಿಂತಿರುವ ಏಕೈಕ ಶ್ರೀ ಕೃಷ್ಣನ ಮೂರ್ತಿ ಇದೊಂದೇ ಅಂತ ಹೇಳಲಾಗುತ್ತದೆ. ಇಲ್ಲಿ ಶ್ರೀ ಕೃಷ್ಣನಲ್ಲಿ ಬೇಡಿಕೊಂಡದ್ದನ್ನು ಶ್ರೀ ಕೃಷ್ಣ ನೆರವೇರಿಸುತ್ತಾನೆ ಎನ್ನುವ ನಂಬಿಕೆ ಗಾಢವಾಗಿದೆ. ಈ ಶಾಲೆಯ ಉಜ್ವಲ ಪರಂಪರೆಗೆ ಈ ಶಾಲೆಯಲ್ಲಿನ ಶ್ರೀಕೃಷ್ಣನೇ ಸ್ಪೂರ್ತಿ ಅನ್ನೋದು ಇಲ್ಲಿಯ ಶಿಕ್ಷಕರು, ವಿದ್ಯಾರ್ಥಿಗಳ ನಂಬಿಕೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ