newsfirstkannada.com

ಪ್ರತಾಪ್​ ಸಿಂಹ ಸೋಲಿಸಲು ಅಖಾಡಕ್ಕಿಳಿಯುತ್ತಾರಾ ಯತೀಂದ್ರ ಸಿದ್ದರಾಮಯ್ಯ?; ಮೈಸೂರಲ್ಲಿ ಸಿಎಂ ಪುತ್ರನಿಂದ ಬಿಗ್‌ ಪ್ಲಾನ್

Share :

03-08-2023

  ಕೊಡಗು-ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಯತೀಂದ್ರ ಸಿದ್ದರಾಮಯ್ಯ?

  ಹೆಚ್ಚು ಮಾತನಾಡದೇ ಕೆಲಸದಿಂದ ಗುರುತಿಸಿಕೊಂಡಿರುವ ಯತೀಂದ್ರ

  ತಂದೆ ಸಿದ್ದರಾಮಯ್ಯರಿಗೆ ಕ್ಷೇತ್ರ ತ್ಯಾಗ ಮಾಡಿ, ಗೆಲುವಿಗಾಗಿ ಹೋರಾಟ

ಮೈಸೂರು: ಬಿಜೆಪಿ ಸಂಸದ ಪ್ರತಾಪ್​ ಸಿಂಹ ಅವರನ್ನ ಮಣಿಸಲು ಕಾಂಗ್ರೆಸ್ ಭಾರೀ ರಣತಂತ್ರ ರೂಪಿಸುತ್ತಿದೆ. ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದಿಂದ ಡಾ.ಯತೀಂದ್ರ ಸಿದ್ದರಾಮಯ್ಯರನ್ನು ಕಣಕ್ಕಿಳಿಸಲು ಭರ್ಜರಿ ತಯಾರಿ ನಡೆಸಲಾಗುತ್ತಿದೆ ಎನ್ನಲಾಗಿದೆ.

ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಸೌಮ್ಯ ಸ್ವಭಾವದ ರಾಜಕಾರಣಿಯಾಗಿದ್ದಾರೆ. ಈ ಹಿಂದೆ 5 ವರ್ಷ ಶಾಸಕರಾಗಿದ್ದಾಗ ಯಾವುದೇ ಕಪ್ಪು ಚುಕ್ಕೆ ಇಲ್ಲದೆ, ಹೆಚ್ಚು ಮಾತನಾಡದೇ ಕ್ಷೇತ್ರದಲ್ಲಿ ಉತ್ತಮ‌ವಾದ ಕೆಲಸದಿಂದ ಗುರುತಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡು ಕಾಂಗ್ರೆಸ್​ ಕಟ್ಟುವಲ್ಲಿ ನಿರತರಾಗಿದ್ದಾರೆ. ಹೀಗಾಗಿ ಅವರನ್ನು ಲೋಕಸಭಾ ಎಲೆಕ್ಷನ್​ಗೆ ಕರೆತರಲು ಕಾಂಗ್ರೆಸ್​ ಪ್ಲಾನ್ ಮಾಡುತ್ತಿದೆ.

ಇದನ್ನು ಓದಿ: ‘ಭ್ರಷ್ಟಾಚಾರ ಮಾಡಂಗಿಲ್ಲ’ ಸಚಿವರಿಗೆ ರಾಹುಲ್ ಗಾಂಧಿ ಎಚ್ಚರಿಕೆ; ‘ಕೈ’ ಹೈಕಮಾಂಡ್ ಸಭೆಯ ಇನ್​ಸೈಡ್​ ಸ್ಟೋರಿ..!

2ನೇ ಬಾರಿ ಸಿಎಂ ಆಗಿರುವ ಸಿದ್ದರಾಮಯ್ಯ ಅವರ ಗೆಲುವಿಗೆ ಕ್ಷೇತ್ರದಲ್ಲಿ ಯತೀಂದ್ರರವರೇ ಮುಖ್ಯ ಪಾತ್ರವಹಿಸಿದ್ದರು. ಪಕ್ಷ ಹಾಗೂ ತಂದೆಗಾಗಿ ಕ್ಷೇತ್ರ ತ್ಯಾಗ ಮಾಡಿದ್ದರು. ಸಿಎಂ ಸಿದ್ದರಾಮಯ್ಯರವರ ಅಸ್ತ್ರ ಪ್ರಯೋಗಿಸಿ ಎಲೆಕ್ಷನ್​ಗೆ ಸ್ಪರ್ಧೆ ಮಾಡಿದ್ರೆ ಈ ಬಾರಿ ಗೆಲುವು ಖಚಿತ ಎನ್ನಲಾಗುತ್ತಿದೆ. ಯತೀಂದ್ರ ಹೆಸರನ್ನು ಘೋಷಣೆ ಮಾಡಿದರೆ ಕೊಡಗು-ಮೈಸೂರು ಕ್ಷೇತ್ರದಲ್ಲಿ ಯಾವುದೇ ಭಿನ್ನಮತ ಹೇಳುವುದಿಲ್ಲ. ಇದರಿಂದ ಎಲ್ಲ ನಾಯಕರು ಒಕ್ಕೂರಲಿನಿಂದ ಕೆಲಸ ಮಾಡಲು ಸಹಕಾರಿಯಾಗುತ್ತದೆ ಎಂದು ಹೇಳಲಾಗುತ್ತಿದೆ.

ಈ ಹಿಂದೆಯೇ ನ್ಯೂಸ್ ಫಸ್ಟ್ ಜೊತೆ ಡಾ.ಯತೀಂದ್ರ ಸಿದ್ದರಾಮಯ್ಯರವರು ತಮ್ಮ ಆಸೆ ಬಿಚ್ಚಿಟ್ಟಿದ್ದರು. ಜನರ ಸೇವೆ ಮಾಡಲು ಅಧಿಕಾರ ಮುಖ್ಯವಾಗಿರುತ್ತದೆ. ಪಕ್ಷ ತೀರ್ಮಾನ ಮಾಡಿದ್ರೆ ಲೋಕಸಭಾ ಎಲೆಕ್ಷನ್​ಗೆ ಸ್ಪರ್ಧೆ ಮಾಡುವುದು ಖಚಿತ ಎಂಬ ಸುಳಿವು ನೀಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರತಾಪ್​ ಸಿಂಹ ಸೋಲಿಸಲು ಅಖಾಡಕ್ಕಿಳಿಯುತ್ತಾರಾ ಯತೀಂದ್ರ ಸಿದ್ದರಾಮಯ್ಯ?; ಮೈಸೂರಲ್ಲಿ ಸಿಎಂ ಪುತ್ರನಿಂದ ಬಿಗ್‌ ಪ್ಲಾನ್

https://newsfirstlive.com/wp-content/uploads/2023/08/MP_PRATAP_SIMHA_1.jpg

Load More