newsfirstkannada.com

ಮಕ್ಕಳಂತೆ ಸಾಕಿದ್ದ 22 ಕುರಿಗಳು ರಾತ್ರೋರಾತ್ರಿ ಕಳ್ಳತನ.. ಎಳೆ ಮರಿಗಳು ಅನಾಥ.. ಕಣ್ಣೀರಲ್ಲಿ ಮುಳುಗಿದ ರೈತ..!

Share :

12-09-2023

    4 ಲಕ್ಷ ರೂಪಾಯಿ ಮೌಲ್ಯದ ಕುರಿಗಳ ಕದ್ದ ಕಿರಾತಕರು

    ರಾಜಾರೋಷವಾಗಿ ಕುರಿ ಕದ್ದು ಎಸ್ಕೇಪ್ ಆದ ಕಳ್ಳರು

    ಧಾರವಾಡ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ

ಧಾರವಾಡ: ರಾತ್ರೋರಾತ್ರಿ 22 ಕುರಿಗಳು ಕಳ್ಳತನವಾಗಿರುವ ಘಟನೆ ತಾಲೂಕಿನ ಬೆನಕನಕಟ್ಟಿ ಗ್ರಾಮದಲ್ಲಿ ನಡೆದಿದೆ. ಮಲ್ಲನಗೌಡ ಪಾಟೀಲ ಎಂಬುವವರಿಗೆ ಕುರಿಗಳು ಸೇರಿದ್ದವು.

ಕುರಿಗಳನ್ನು ಕಳೆದುಕೊಂಡಿರುವ ಮಾಲೀಕರು ಕಣ್ಣೀರಿನಲ್ಲಿ ಮುಳುಗಿದ್ದಾರೆ. ತಡರಾತ್ರಿ ಬುಲೆರೋ ವಾಹನದಲ್ಲಿ ಖದೀಮರು ಕರಿಗಳನ್ನು ಕದ್ದು ಪರಾರಿಯಾಗಿದ್ದಾರೆ. ಕಳ್ಳತನಕ್ಕೆ ತಂದಿದ್ದ ವಾಹನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕುರಿ‌ ಮರಿಗಳನ್ನು ಅಲ್ಲೇ ಬಿಟ್ಟು, ದೊಡ್ಡ ಕುರಿಗಳನ್ನು ಮಾತ್ರ ಖದೀಮರು ಕಳ್ಳತನ ಮಾಡಿದ್ದಾರೆ. ರೈತ ತಮ್ಮ ಹೊಲದಲ್ಲಿ ಹಲವು ವರ್ಷಗಳಿಂದ ಕುರಿ ಸಾಕಾಣಿಕೆ ಮಾಡುತ್ತ ಬಂದಿದ್ದರು. ಇದನ್ನೆಲ್ಲ ಗಮನಿಸಿಯೇ ಕಳ್ಳರು ಕಳ್ಳತನ ಮಾಡಿದ್ದಾರೆ. ಕುರಿ ಫಾರ್ಮಿನ ಕೀಲಿ ಮುರಿದು ಕಳ್ಳತನ ಮಾಡಿದ್ದಾರೆ.

ಸುಮಾರು 4 ಲಕ್ಷ ಮೌಲ್ಯದ ಕುರಿಗಳು ಕಳ್ಳತನವಾಗಿದೆ ಎಂದು ಅಂದಾಜಿಸಲಾಗಿದೆ. ಕಳ್ಳತನ ಹಿನ್ನೆಲೆಯಲ್ಲಿ ಅನಾಥವಾಗಿ ಉಳಿದಿರುವ ಮರಿಗಳಿಗೆ ಬಾಟಲಿಯಿಂದ ಹಾಲನ್ನು ನೀಡಲಾಗುತ್ತಿದೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಮಕ್ಕಳಂತೆ ಸಾಕಿದ್ದ 22 ಕುರಿಗಳು ರಾತ್ರೋರಾತ್ರಿ ಕಳ್ಳತನ.. ಎಳೆ ಮರಿಗಳು ಅನಾಥ.. ಕಣ್ಣೀರಲ್ಲಿ ಮುಳುಗಿದ ರೈತ..!

https://newsfirstlive.com/wp-content/uploads/2023/09/DWD_MEKE.jpg

Load More