newsfirstkannada.com

ಫೋಟೋ ಶೂಟ್ ವೇಳೆ ಅಪರಿಚಿತರಿಂದ ಕಿರಿಕ್​.. ಚಾಕು ಇರಿತಕ್ಕೆ ಬಲಿಯಾದ 22 ವರ್ಷದ ಯುವಕ

Share :

13-11-2023

  ಯುವಕನೋರ್ವನಿಗೆ ಚಾಕು ಇರಿದ ಕಿಡಿಗೇಡಿಗಳು

  ತನ್ನಷ್ಟಕ್ಕೆ ಫೋಟೋ ಶೂಟ್​​ ಮಾಡ್ತಿದ್ದ ಯುವಕ ಸಾವು

  ಚೂರಿ ಇರಿತಕ್ಕೆ ತೀವ್ರ ರಕ್ತಸ್ರಾವದಿಂದ ಮೃತಪಟ್ಟ ಐಟಿಐ ವಿದ್ಯಾರ್ಥಿ

ಫೋಟೋ ಶೂಟ್ ವೇಳೆ ಕಿರಿಕ್ ತಗೆದ ಕಿಡಿಗೇಡಿಗಳು ಯುವಕನೋರ್ವನಿಗೆ ಚಾಕುವಿನಿಂದ ಚುಚ್ಚಿ ಕೊಂದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ರಾಮೇಶ್ವರ ಸಮೀಪದ ಡಾರ್ಕ್ ಫ್ಯಾಮಿಲಿ ರೆಸ್ಟೋರೆಂಟ್ ಬಳಿ ನಡೆದಿದೆ.

ಮೃತ ಯುವಕನನ್ನು ದೊಡ್ಡಬಳ್ಳಾಪುರ ನಗರದ ಕಚೇರಿಪಾಳ್ಯದ ನಿವಾಸಿ 22 ವರ್ಷದ ಸೂರ್ಯ ಎಂದು ತಿಳಿದು ಬಂದಿದೆ. ಖಾಸಗಿ ಡಾಬದ ಮುಂಭಾಗ ಅಲಂಕರಿಸಲಾಗಿದ್ದ ಸೀನರಿ ಬಳಿ ಸೂರ್ಯ ಜೊತೆ ತೆರಳಿದ್ದ ನಾಲ್ವರು ಯುವಕರು ನಡೆಸುತ್ತಿದ್ದ ಫೋಟೋ ಶೂಟ್ ವೇಳೆ, ಫೋಟೋ ತೆಗೆಯುವಂತೆ ಅಪರಿಚಿತರು ಕಿರಿಕ್ ತೆಗೆದಿದ್ದಾರೆ. ಈ ವೇಳೆ ಯುವಕರು ಫೋಟೋ ತಗೆದಿದ್ದು, ನಂತರ ಆತನ ಬಳಿ ಕ್ಯಾಮೆರಾ ಕಿತ್ತುಕೊಂಡು ನಾಲ್ವರು ಯುವಕರ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಚಾಕುವಿನಿಂದ ಚುಚ್ಚಿದ್ದಾರೆ ಎಂದು ತಿಳಿದು ಬಂದಿದೆ.

ಮೃತ ಸೂರ್ಯ
ಮೃತ ಸೂರ್ಯ

ಇದನ್ನು ಓದಿ: ಅಪಘಾತದಲ್ಲಿ ಮಹಿಳೆ ಸಾವು ಕೇಸ್​ಗೆ ಟ್ವಿಸ್ಟ್​​​​.. ನಟ ನಾಗಭೂಷಣ್​ಗೆ ಶುರುವಾಯ್ತು ಸಂಕಷ್ಟ!

ಕೂಡಲೇ ಸೂರ್ಯನನ್ನು ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ. ಮೃತ ಸೂರ್ಯ ಐಟಿಐ ವಿದ್ಯಾರ್ಥಿಯಾಗಿದ್ದ , ಭಾನುವಾರ ವೀಕೆಂಡ್ ಕಾರಣ ಗೆಳೆಯರೊಂದಿಗೆ ಫೋಟೋ ಶೂಟ್‌ಗೆ ತೆರಳಿದ್ದ ವೇಳೆ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ದೊಡ್ಡಬೆಳವಂಗಲ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಎಂ.ಆರ್.ಹರೀಶ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತ ಕೊಲೆಯಾದ ಸೂರ್ಯ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫೋಟೋ ಶೂಟ್ ವೇಳೆ ಅಪರಿಚಿತರಿಂದ ಕಿರಿಕ್​.. ಚಾಕು ಇರಿತಕ್ಕೆ ಬಲಿಯಾದ 22 ವರ್ಷದ ಯುವಕ

https://newsfirstlive.com/wp-content/uploads/2023/11/Surya.jpg

Load More