newsfirstkannada.com

ಮಲಗಿದ್ದಲ್ಲೇ ಕತ್ತು ಕೊಯ್ದು ಯುವತಿಯ ಬರ್ಬರ ಕೊಲೆ; ಹಲವು ಅನುಮಾನ

Share :

10-06-2023

    ತುಮಕೂರಿನಲ್ಲಿ ನಡೀತು ಯುವತಿಯ ಭೀಕರ ಹತ್ಯೆ

    ರಾತ್ರಿ ಮನೆಯಲ್ಲಿ ಮಲಗಿದ್ದಾಗ ನುಗ್ಗಿದ ದುಷ್ಕರ್ಮಿಗಳು

    ಪೊಲೀಸರಿಗೆ ಎದುರಾಯ್ತು ಬಿಗ್ ಸವಾಲ್

ತುಮಕೂರು: ದುಷ್ಕರ್ಮಿಗಳು ಯುವತಿಯ ಮನೆಗೆ ನುಗ್ಗಿ ಆಕೆಯ ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಿರೋ ಘಟನೆ ವಿದ್ಯಾನಗರದ 10ನೇ ಕ್ರಾಸ್​ನಲ್ಲಿ ನಡೆದಿದೆ. ವೀಣಾ (24) ಕೊಲೆಯಾದ ಯುವತಿ.

ಮೃತ ಯುವತಿ ತುರುವೇಕೆರೆ ತಾಲೂಕಿನ ದಾಸಿಹಳ್ಳಿ ಗ್ರಾಮದ ನಿವಾಸಿ. ಕಳೆದ ಎರಡು ವರ್ಷದಿಂದ ತುಮಕೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಮೃತ ವೀಣಾ ತುಮಕೂರಿನ ವಿದ್ಯಾನಗರದ 10ನೇ ಕ್ರಾಸ್ ಬಳಿ ತನ್ನ ಇಬ್ಬರು ಸ್ನೇಹಿತೆಯರ ಜೊತೆ ವಾಸವಿದ್ದಳು. ನಿನ್ನೆ ಎಂದಿನಂತೆ ಬೆಳಗ್ಗೆ ಕೆಲಸಕ್ಕೆ ಹೋಗಿ ಮರಳಿ ಮನೆಗೆ ಬಂದಿದ್ದಾಳೆ. ರಾತ್ರಿ ಮನೆಯಲ್ಲಿದ್ದಾಗ ಕೆಲ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕುತ್ತಿಗೆ ಕುಯ್ದು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಇದೇ ವೇಳೆ ಮೃತ ವೀಣಾ ಸ್ನೇಹಿತೆಯು ಮನೆಗೆ ಬಂದಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ. ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ತುಮಕೂರಿನ ಎನ್​ಇಪಿಎಸ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಎನ್ಇಪಿಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ‌ ನಡೆಸ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಲಗಿದ್ದಲ್ಲೇ ಕತ್ತು ಕೊಯ್ದು ಯುವತಿಯ ಬರ್ಬರ ಕೊಲೆ; ಹಲವು ಅನುಮಾನ

https://newsfirstlive.com/wp-content/uploads/2023/06/TUM_MURDER.jpg

Load More