newsfirstkannada.com

ಸೂಸೈಡ್​​ ಕೇಸ್​ಗೆ ಬಿಗ್ ಟ್ವಿಸ್ಟ್​​: ದಿಕ್ಕು ತಪ್ಪಿಸಿ ಎಸ್ಕೇಪ್​​ ಆಗಿದ್ದ ಕಿಲಾಡಿ ಜೋಡಿ ಅಸಲಿ ಸತ್ಯ ಬಯಲು

Share :

15-08-2023

    ಇಬ್ಬರ ಆತ್ಮಹತ್ಯೆ ಪ್ರಕರಣಕ್ಕೆ ಸಿಕ್ತು ಬಿಗ್​ ಟ್ವಿಸ್ಟ್​​

    ಮಕ್ಕಳಾಗಿಲ್ಲ ಎಂದು ದೇವರ ಮೊರೆ ಹೋಗಿದ್ರು

    ಪೊಲೀಸರ ಮುಂದೆ ಬಯಲಾಯ್ತು ಅಸಲಿ ಸತ್ಯ!

ಚಿಕ್ಕಬಳ್ಳಾಪುರ: ಮಕ್ಕಳಾಗಿಲ್ಲ ಎಂದು ದೇವರ ಮೊರೆ ಹೋಗಿದ್ದ ಮಹಿಳೆ ಪೂಜಾರಿ ಜೊತೆ ಎಸ್ಕೇಪ್ ಆಗಲು ಯತ್ನಿಸಿದ ಘಟನೆ ಕಡಶೀಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆ ನಾಟಕವಾಡಿ ಎಸ್ಕೇಪ್​​ ಆಗಲು ಯತ್ನಿಸಿದ್ದ ಕಡಶೀಗೇನಹಳ್ಳಿ ಗ್ರಾಮದ ವಿವಾಹಿತ ಮಹಿಳೆ ಲಲಿತಾ ಗಂಗಮ್ಮ(24), ಪೂಜಾರಿ ಮುನಿರಾಜು (54) ಎಂಬುವರು ಸಿಕ್ಕಿಬಿದ್ದಿದ್ದಾರೆ.

ಪೂಜಾರಿ ಮುನಿರಾಜು

ಏನಿದು ಪ್ರಕರಣ..?

ಲಲಿತಾ ಗಂಗಮ್ಮ ದೇವಸ್ಥಾನದ ಪೂಜಾರಿ ಮುನಿರಾಜು ಓಡಿ ಹೋಗಲು ಭರ್ಜರಿ ಪ್ಲಾನ್​ ಮಾಡಿಕೊಂಡಿದ್ದರು. ಪ್ಲಾನ್​ ಪ್ರಕಾರ ಇಬ್ಬರು ಬನ್ನಿಕುಪ್ಪೆ ಗ್ರಾಮದ ಬಳಿಯಿರೋ ಅಮಾನಿ ಗೋಪಾಲಕೃಷ್ಣ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ರೀತಿ ನಾಟಕ ಆಡಿದ್ದಾರೆ. ಈ ಮುನ್ನ ಯಾರಿಗೂ ಅನುಮಾನ ಬರಬಾರದು ಎಂದು ತಮ್ಮ ಬಟ್ಟೆ, ಚಪ್ಪಲಿ, ಮೊಬೈಲ್ ಕರೆ ದಡದಲ್ಲೇ ಬಿಟ್ಟು ಎಸ್ಕೇಪ್​​ ಆಗಿದ್ದಾರೆ.

ಇನ್ನು, ಘಟನೆಯಾಗಿ ಒಂದು ತಿಂಗಳಾದ ಬಳಿಕ ಕೇಸ್​ಗೆ ಬಿಗ್​​ ಟ್ವಿಸ್ಟ್​​ ಸಿಕ್ಕಿದೆ. ಲಲಿತಾ, ಮುನಿರಾಜು ಮೃತದೇಹಗಳನ್ನು ಕೆರೆಯಲ್ಲಿ ಎಷ್ಟು ಹುಡುಕಿದರೂ ಸಿಗಲಿಲ್ಲ. ಹೀಗಾಗಿ ಇವರ ನಾಟಕ ಪೊಲೀಸರ ಮುಂದೆ ಬಯಲಾಗಿದೆ. ಇಬ್ಬರನ್ನು ಬಂಧಿಸಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೂಸೈಡ್​​ ಕೇಸ್​ಗೆ ಬಿಗ್ ಟ್ವಿಸ್ಟ್​​: ದಿಕ್ಕು ತಪ್ಪಿಸಿ ಎಸ್ಕೇಪ್​​ ಆಗಿದ್ದ ಕಿಲಾಡಿ ಜೋಡಿ ಅಸಲಿ ಸತ್ಯ ಬಯಲು

https://newsfirstlive.com/wp-content/uploads/2023/08/chikkabalapura.jpg

Load More