newsfirstkannada.com

ಕುಕ್ಕರ್​ನಿಂದ ಪ್ರಿಯತಮೆ ತಲೆಗೆ ಹೊಡೆದು ಹತ್ಯೆ ಮಾಡಿದ​ ಪ್ರೇಮಿ; ಅಸಲಿಗೆ ಇಬ್ಬರ ಮಧ್ಯೆ ನಡೆದಿದ್ದೇನು?

Share :

27-08-2023

    ಕೇರಳ ಮೂಲದ ಇಬ್ಬರು ಲಿವಿಂಗ್ ಟುಗೆದರ್​ನಲ್ಲಿದ್ದರು

    ಕಾಲೇಜು ದಿನಗಳಿಂದ ಒಟ್ಟಿಗೆ ವಿದ್ಯಾಭ್ಯಾಸ ‌ಮಾಡಿದ್ದರು

    ಬೇಗೂರಿನ ನ್ಯೂ ಮೈಕೋ ಲೇಔಟ್ ನಲ್ಲಿ ನಡೆದ ಘಟನೆ

ಬೆಂಗಳೂರು: ಪ್ರಿಯಕರನೋರ್ವ ಕುಕ್ಕರ್​ನಿಂದ ಪ್ರಿಯತಮೆ ತಲೆಗೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರೋ ಘಟನೆ ಬೇಗೂರಿನ ನ್ಯೂ ಮೈಕೋ ಲೇಔಟ್​ನಲ್ಲಿ ನಡೆದಿದೆ. ದೇವಾ (24 ) ಹತ್ಯೆಯಾದ ಯುವತಿ. ವೈಷ್ಣವ್ (24) ಹತ್ಯೆ ಮಾಡಿದ ಆರೋಪಿ.

ಕೇರಳ ಮೂಲದ ವೈಷ್ಣವ್-ದೇವಾ ಇಬ್ಬರೂ ಕೆಲ ವರ್ಷಗಳಿಂದ ಲಿವಿಂಗ್ ಟುಗೇದರ್​ನಲ್ಲಿದ್ದರು. ಕಾಲೇಜು ದಿನಗಳಿಂದ ಒಟ್ಟಿಗೆ ವಿದ್ಯಾಭ್ಯಾಸ ‌ಮಾಡಿದ್ದ ಈ ಜೋಡಿ ಕೆಲಸ ಸಿಕ್ಕ ಹಿನ್ನೆಲೆ ಕಳೆದ ಮೂರು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಬೇಗೂರಿನ ನ್ಯೂಮೈಕೋ ಲೇಔಟ್​ನಲ್ಲಿ ವಾಸವಾಗಿದ್ದರು.

ತಡರಾತ್ರಿ ಈ ಇಬ್ಬರ ನಡುವೆ ಗಲಾಟೆ ನಡೆದಿದೆ. ಮಾತಿಗೆ ಮಾತು ಬೆಳೆದು ವೈಷ್ಣವ್ ಕುಕ್ಕರ್​​ನಿಂದ ದೇವಾ ತಲೆಗೆ ಹೊಡೆದಿದ್ದಾನೆ. ಅತಿಯಾದ ರಕ್ತಸ್ರಾವದಿಂದ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಬೇಗೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆ ಮಾಡಿದ ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕುಕ್ಕರ್​ನಿಂದ ಪ್ರಿಯತಮೆ ತಲೆಗೆ ಹೊಡೆದು ಹತ್ಯೆ ಮಾಡಿದ​ ಪ್ರೇಮಿ; ಅಸಲಿಗೆ ಇಬ್ಬರ ಮಧ್ಯೆ ನಡೆದಿದ್ದೇನು?

https://newsfirstlive.com/wp-content/uploads/2023/08/death-13-1.jpg

Load More