newsfirstkannada.com

ತಿಂಗಳಿಗೆ 25 ಲಕ್ಷ ರೂಪಾಯಿ ಲಾಭ; ಭಾರತದಲ್ಲಿ ಸಕ್ಸಸ್ ಕಂಡ ಅಮೆರಿಕಾದ ಅಕ್ಕ-ತಂಗಿಯರು; ಏನ್ ಮಾಡಿದ್ರು ಗೊತ್ತಾ?

Share :

28-08-2023

    ದೆಹಲಿಯಲ್ಲಿ ಕ್ಲಿಕ್ ಆದ ಅಕ್ಕ-ತಂಗಿಯರ ಸ್ಟಾರ್ಟ್ ಅಪ್ ಐಡಿಯಾ

    ಅಮೆರಿಕಾದಲ್ಲಿ ನಷ್ಟ ಅನುಭವಿಸಿ ಭಾರತಕ್ಕೆ ಬಂದ ಸಹೋದರಿಯರು

    ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಅಕ್ಕ-ತಂಗಿಯರ ಐಡಿಯಾ

ನವದೆಹಲಿ: ಜೀವನದಲ್ಲಿ ಯಶಸ್ಸು ಅನ್ನೋದು ಯಾವಾಗ, ಎಲ್ಲಿ ಬೇಕಾದ್ರೂ ಯಾರನ್ನಾದ್ರೂ ಕೈ ಹಿಡಿಯಬಹುದು. ಅದಕ್ಕೆ ನಿರಂತರ ಶ್ರಮ, ಸಾಧಿಸೋ ಛಲ, ಶ್ರದ್ಧೆಯಿಂದ ಕೆಲಸ ಮಾಡಬೇಕಷ್ಟೆ. ಇದೇ ತತ್ವವನ್ನು ಪಾಲಿಸಿದ ಅಮೆರಿಕಾದ ಸಹೋದರಿಯರು ಭಾರತದಲ್ಲಿ ಯಶಸ್ಸು ಕಂಡಿದ್ದಾರೆ. ತಮ್ಮ ಬುದ್ಧಿವಂತಿಕೆ, ಚಾಣಾಕ್ಷತನದಿಂದ ಸಣ್ಣ ಬ್ಯುಸಿನೆಸ್‌ ಒಂದನ್ನ ಆರಂಭಿಸಿ ಅತಿ ದೊಡ್ಡ ಸಕ್ಸಸ್ ಕಂಡಿದ್ದಾರೆ. ಈ ಅಕ್ಕ-ತಂಗಿಯರ ಸ್ಟಾರ್ಟ್ ಅಪ್ ಐಡಿಯಾ ಸಖತ್ ಕ್ಲಿಕ್ ಆಗಿದೆ ಪ್ರತಿ ತಿಂಗಳು ಬರೋಬ್ಬರಿ 25 ಲಕ್ಷ ರೂಪಾಯಿ ಲಾಭ ಗಳಿಸುತ್ತಿದ್ದಾರೆ.

ಇದನ್ನೂ ಓದಿ: ‘ಚಿನ್ನ’ದ ಹುಡುಗನ ಮತ್ತೊಂದು ಐತಿಹಾಸಿಕ ಸಾಧನೆ.. ಭಾರತಕ್ಕೆ ಇನ್ನೊಂದು ಬಂಗಾರದ ಪದಕ..!

ಅಮೆರಿಕಾದ ಈ ಅಕ್ಕ-ತಂಗಿಯರಿಗೆ ಸಕ್ಸಸ್ ಅಷ್ಟು ಸುಲಭದಲ್ಲಿ ಸಿಕ್ಕಿಲ್ಲ. ಬಹಳಷ್ಟು ವರ್ಷ ಬ್ಯುಸಿನೆಸ್‌ನಲ್ಲಿ ಈ ಇಬ್ಬರು ನಷ್ಟ ಮತ್ತು ನಿರಾಸೆ ಅನುಭವಿಸಿದ್ದರು. ಕೊನೆಗೆ ಅಮೆರಿಕಾ ದೇಶವನ್ನೇ ಬಿಟ್ಟು ಭಾರತಕ್ಕೆ ಬಂದು ಸ್ಟಾರ್ಟ್‌ ಅಪ್ ಪ್ಲಾನ್ ಮಾಡಿದ್ದಾರೆ. ಸದ್ಯ ದೆಹಲಿಯಲ್ಲಿ ನೆಲೆಸಿರುವ ಈ ಸಿಸ್ಟರ್ಸ್‌ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದಾರೆ. ತಮ್ಮ ಉತ್ಪನ್ನಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡುತ್ತಾ ಹೊಸದೊಂದು ಪ್ರಾಡಕ್ಟ್‌ ಮೂಲಕ ಜನರ ಗಮನ ಸೆಳೆದಿದ್ದಾರೆ.

ರೆಬೆಕಾ ಸೂದ್, ಏರಿಯೆಲ್ಲಾ ಬ್ಲಾಂಕ್ ಸಹೋದರಿಯರು

ಅಂದ ಹಾಗೆ ಈ ಸಹೋದರಿಯರ ಹೆಸರು ರೆಬೆಕಾ ಸೂದ್ ಮತ್ತು ಏರಿಯೆಲ್ಲಾ ಬ್ಲಾಂಕ್. ಇವರಿಬ್ಬರು ಬಹಳ ಬುದ್ಧಿವಂತರು. ಇವರಿಬ್ಬರು ಸೇರಿ ‘ಕೊಂಬುಚಾ’ ಅನ್ನೋ ಬ್ರಾಂಡ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಕೊಂಬುಚಾ ಅಂದ್ರೆ ಸುವಾಸನೆಯ ಕಪ್ಪು ಚಹಾ ಪಾನೀಯ. ಬ್ಲಾಕ್ ಟೀ ರೀತಿಯಲ್ಲೇ ಇರುವ ಈ ಕೊಂಬುಚಾ ಪಾನೀಯ ಆರೋಗ್ಯಕ್ಕೆ ಬಹಳ ಒಳ್ಳೆಯದು. ಈ ಪಾನೀಯವನ್ನು ಗಿಡ ಮೂಲಿಕೆಗಳಿಂದ ತಯಾರಿಸಲಾಗಿದೆ ಎಂದು ರೆಬೆಕಾ ಸೂದ್, ಏರಿಯೆಲ್ಲಾ ಬ್ಲಾಂಕ್ ಹೇಳುತ್ತಿದ್ದಾರೆ. ದೆಹಲಿಯ ಸುತ್ತಾಮುತ್ತ ಅಮೆರಿಕಾ ಸಹೋದರಿಯರ ‘ಕೊಂಬುಚಾ’ ಪಾನೀಯಾವನ್ನು ಮಾರಾಟ ಮಾಡಲಾಗುತ್ತಿದೆ.

View this post on Instagram

A post shared by Atmosphere Studio (@atmosphere.in)

ರೆಬೆಕಾ ಸೂದ್, ಏರಿಯೆಲ್ಲಾ ಬ್ಲಾಂಕ್ ಸಹೋದರಿಯರು ತಮ್ಮ ಇನ್ಸ್‌ಟಾದಲ್ಲಿ ಕೊಂಬುಚಾ ಪಾನೀಯಾಗೆ ವಿವರಣೆ ನೀಡಿದ್ದಾರೆ. ರೆಬೆಕಾ ಒಮ್ಮೆ ಇಂಡೋನೇಷ್ಯಾದ ಬಾಲಿಗೆ ಪ್ರವಾಸಕ್ಕೆ ಹೋಗಿದ್ದಾಗ ಈ ಐಡಿಯಾ ಬಂತಂತೆ. ಇದಾದ ಬಳಿಕ ಇಬ್ಬರೂ ಸಹೋದರಿಯರು ಸಾಕಷ್ಟು ಸಂಶೋಧನೆ ಮಾಡಿ ಈ ಪಾನೀಯವನ್ನು ಕಂಡು ಹಿಡಿದಿರುವುದಾಗಿ ಹೇಳಿದ್ದಾರೆ. ಈ ಇಬ್ಬರು ಸಹೋದರಿಯರ ತಂದೆ ಕೂಡ ಐಐಟಿ ಖಾನ್‌ಪುರದಲ್ಲಿ ಪ್ರೊಫೆಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಏರಿಯೆಲ್ಲಾ ಬ್ಲಾಂಕ್ ಎಂಬ ಯುವತಿ ನ್ಯೂಟ್ಸಿಷನಲ್ ಥೆರಪಿಸ್ಟ್ ಅಧ್ಯಯನ ಮಾಡಿದ್ದು, ರೆಬೆಕಾ ಸೂದ್ ಬ್ಯುಸಿನೆಸ್ ಕನ್ಸಲ್ಟೆಂಟ್ ಕೂಡ ಆಗಿದ್ದಾರೆ. ಭಾರತದಲ್ಲಿ ಬಹಳಷ್ಟು ಯುವಕರು ಸ್ಟಾರ್ಟ್ ಅಪ್‌ ಹಿಂದೆ ಬಿದ್ದಿರುವಾಗ ಅಮೆರಿಕಾದ ಈ ಸಹೋದರಿಯರ ಸಕ್ಸಸ್ ಗಮನ ಸೆಳೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ತಿಂಗಳಿಗೆ 25 ಲಕ್ಷ ರೂಪಾಯಿ ಲಾಭ; ಭಾರತದಲ್ಲಿ ಸಕ್ಸಸ್ ಕಂಡ ಅಮೆರಿಕಾದ ಅಕ್ಕ-ತಂಗಿಯರು; ಏನ್ ಮಾಡಿದ್ರು ಗೊತ್ತಾ?

https://newsfirstlive.com/wp-content/uploads/2023/08/American-Sisters.jpg

Load More