newsfirstkannada.com

Bus Accident: ಮತ್ತೊಂದು ಭೀಕರ ಬಸ್ ದುರಂತ.. 25 ಪ್ರಯಾಣಿಕರು ಸ್ಥಳದಲ್ಲೇ ಸಾವು

Share :

01-07-2023

    ಬಸ್ಸಿನಲ್ಲಿ ಒಟ್ಟು 33 ಮಂದಿ ಪ್ರಯಾಣಿಸುತ್ತಿದ್ದರು

    ಚಾಲಕ ಸೇರಿ 8 ಪ್ರಯಾಣಿಕರು ಗ್ರೇಟ್ ಎಸ್ಕೇಪ್

    ಡಿಕ್ಕಿ ಹೊಡೆಯುತ್ತಿದ್ದಂತೆ ಬೆಂಕಿ ಹೊತ್ತಿಕೊಂಡು ಅನಾಹುತ

ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 25 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಬಸ್ಸಿನಲ್ಲಿ ಒಟ್ಟು 33 ಮಂದಿ ಪ್ರಯಾಣ ಮಾಡುತ್ತಿದ್ದರು, ಇವರಲ್ಲಿ 8 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬುಲ್ಧಾನ ಜಿಲ್ಲೆಯ ಸಿಂಧಖೇದರಾಜ ಸಮೀಪದ ಪಿಂಪಲಖುಟಾ ಗ್ರಾಮದ ಬಳಿಯಲ್ಲಿರುವ ಸಮೃದ್ಧಿ ಹೆದ್ದಾರಿಯಲ್ಲಿ ದುರಂತ ಸಂಭವಿಸಿದೆ.

ನಿಯಂತ್ರಣ ಕಳೆದುಕೊಂಡ ಬಸ್​, ರಸ್ತೆಯ ಡಿವೈಡರ್​ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ. ಆ ಬೆಂಕಿಯು ಡೀಸೆಲ್ ಟ್ಯಾಂಕ್​ಗೆ ತಗುಲಿ ದೊಡ್ಡ ಅನಾಹುತ ಸಂಭವಿಸಿದೆ ಎಂದು ವರದಿಯಾಗಿದೆ.

ಈ ಬಸ್ ನಾಗ್ಪುರದಿಂದ ಪುಣೆಗೆ ಹೋಗುತ್ತಿತ್ತು. ಬಸ್‌ನಲ್ಲಿ ನಾಗ್ಪುರ, ವಾರ್ಧಾ ಮತ್ತು ಯವತ್ಮಾಲ್‌ನಿಂದ ಪ್ರಯಾಣಿಕರು ತೆರಳುತ್ತಿದ್ದರು. ಈ ಬಸ್ ವಿದರ್ಭ ಟ್ರಾವೆಲ್ಸ್​ಗೆ ಸೇರಿದೆ. ಜೀವ ರಕ್ಷಿಸಿಕೊಂಡವರಲ್ಲಿ ಡ್ರೈವರ್ ಹಾಗೂ ಕ್ಲೀನರ್ ಕೂಡ ಸೇರಿದ್ದಾನೆ. ಸದ್ಯ ಗಾಯಾಳುಗಳನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bus Accident: ಮತ್ತೊಂದು ಭೀಕರ ಬಸ್ ದುರಂತ.. 25 ಪ್ರಯಾಣಿಕರು ಸ್ಥಳದಲ್ಲೇ ಸಾವು

https://newsfirstlive.com/wp-content/uploads/2023/07/BUS.jpg

Load More