newsfirstkannada.com

ಪ್ರೀತಿಸಿದ ಹುಡುಗಿ ಜೊತೆ ಕಿರಿಕ್‌.. ಪೊಲೀಸ್ ಠಾಣೆ ಗೇಟ್ ಬಳಿ ಕತ್ತು ಸೀಳಿ ಹತ್ಯೆ ಮಾಡಿದ ಯುವಕ

Share :

24-08-2023

  3 ರಿಂದ 4 ಬಾರಿ ಯುವತಿಯ ಕುತ್ತಿಗೆಗೆ ಚಾಕು ಇರಿದ ಆರೋಪಿ

  ಪುತ್ತೂರು ಪೇಟೆ ಮಹಿಳಾ ಪೊಲೀಸ್​​ ಠಾಣೆ ಬಳಿ ಭೀಕರ ದಾಳಿ

  ಏಕಾಏಕಿ ಬೈಕ್​ನಲ್ಲಿ ಬಂದು ಯುವತಿಯ ಕತ್ತು ಸೀಳಿ ಪರಾರಿ

ಮಂಗಳೂರು: ಪ್ರೇಮ ವೈಫಲ್ಯಕ್ಕೆ ಯುವಕನೋರ್ವ ಯುವತಿಯ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿರೋ ಘಟನೆ ದಕ್ಷಿಣ ಕ‌ನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ. ವಿಟ್ಲದ ಅಳಿಕೆ ನಿವಾಸಿ ಗೌರಿ (25) ಮೃತ ಯುವತಿ. ಪದ್ಮರಾಜ್ (30) ಬಂಧಿತ ಆರೋಪಿ.

ಗೌರಿ ಹಾಗೂ ಪದ್ಮರಾಜ್ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಂದು ಮಧ್ಯಾಹ್ನ ಪುತ್ತೂರು ಬಸ್ ನಿಲ್ದಾಣದ ಬಳಿ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಅದಕ್ಕೆ ಯುವತಿಯು‌ ಮಹಿಳಾ ಠಾಣೆಗೆ ದೂರು ನೀಡಲು ಹೋಗಿದ್ದಾಳೆ. ಇದೇ ವೇಳೆ ಆರೋಪಿ ಪದ್ಮರಾಜ್​ ಏಕಾಏಕಿ ಬೈಕ್​ನಲ್ಲಿ ಬಂದು ಯುವತಿಯ ಕತ್ತು ಸೀಳಿ ಪರಾರಿಯಾಗಿದ್ದಾನೆ.

ಕೂಡಲೇ ಯುವತಿಯನ್ನು ಸ್ಥಳೀಯರು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಗೌರಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಕೊಲೆ ಮಾಡಿ ಎಸ್ಕೇಪ್​ ಆಗಿದ್ದ ಆರೋಪಿ ಪದ್ಮರಾಜ್​ನನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಈ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರೀತಿಸಿದ ಹುಡುಗಿ ಜೊತೆ ಕಿರಿಕ್‌.. ಪೊಲೀಸ್ ಠಾಣೆ ಗೇಟ್ ಬಳಿ ಕತ್ತು ಸೀಳಿ ಹತ್ಯೆ ಮಾಡಿದ ಯುವಕ

https://newsfirstlive.com/wp-content/uploads/2023/08/death-7.jpg

Load More