newsfirstkannada.com

ಸ್ನೇಹಿತನ ಫೋನ್ ನಂಬರ್ ಬರೆದಿಟ್ಟು ಬಹುಮಹಡಿ ಕಟ್ಟಡದಿಂದ ಜಿಗಿದ ಕ್ಯಾಬ್ ಡ್ರೈವರ್‌; ಏನಾಯ್ತು?

Share :

12-11-2023

    ಮಲ್ಲೇಶ್ವರಂ ಅರಣ್ಯ ಭವನದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಮದನ್

    ತಾನು ವಾಸವಿದ್ದ 4ನೇ ಅಂತಸ್ತಿನಿಂದ ಬಿದ್ದು ಯುವಕ ದಾರುಣ ಸಾವು

    ಘಟನಾ ಸ್ಥಳಕ್ಕೆ ಆರ್.ಆರ್ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ

ಬೆಂಗಳೂರು: ಬಹುಮಹಡಿ ಕಟ್ಟಡದಿಂದ ಬಿದ್ದು ಯುವಕನೊಬ್ಬ ಸಾವನ್ನಪ್ಪಿರೋ ಘಟನೆ ಆರ್.ಆರ್.ನಗರದ ಪಟ್ಟಣಗೆರೆಯಲ್ಲಿ ನಡೆದಿದೆ. ಮದನ್ ಶೆಟ್ಟಿ (25) ಮೃತ ದುರ್ದೈವಿ. ಮದನ್ ಕ್ಯಾಬ್‌ ಡ್ರೈವರ್‌ ಆಗಿ ಕೆಲಸ ನಿರ್ವಹಿಸುತ್ತಿದ್ದು, ಈ ಹಿಂದೆ ಮಲ್ಲೇಶ್ವರಂನ ಅರಣ್ಯ ಭವನ ಚಾಲಕನಾಗಿದ್ದ. ಅರಣ್ಯ ಭವನದಲ್ಲಿ ಕೆಲಸ ಬಿಟ್ಟು, ಬೇರೊಬ್ಬರ ಪರ್ಸನಲ್ ಕ್ಯಾಬ್ ಡ್ರೈವರ್ ಆಗಿದ್ದರು. ತಾನು ವಾಸವಿದ್ದ 4ನೇ ಅಂತಸ್ತಿನಿಂದ ಬಿದ್ದು ಸಾವನ್ನಪ್ಪಿದ್ದಾನೆ.

ಮೃತ ಮದನ್ ಮೂಲತಃ ಶಿವಮೊಗ್ಗದ ವಿನೋಬಾ ನಗರ ನಿವಾಸಿ. ಮೃತ ಮದನ್ ಜೊತೆ ತೇಜು ಹಾಗೂ ಇನ್ನೊಬ್ಬ ಸ್ನೇಹಿತ ಬಾಡಿಗೆ ಮನೆಯಲ್ಲಿದ್ದರು. ಬಾಡಿಗೆಗೆ ಇದ್ದ ಕಟ್ಟಡದಿಂದ ಜಿಗಿದು ಮದನ್​ ಮೃತಪಟ್ಟಿದ್ದಾನೆ. ಇನ್ನೂ ಸ್ನೇಹಿತನ ಫೋನ್ ನಂಬರ್ ಬರೆದಿಟ್ಟು ನಾಲ್ಕು ಅಂತಸ್ತಿನಿಂದ ಜಿಗಿದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದ್ಯ ಮದನ್ ಸಾವಿಗೆ ಕಾರಣ ತಿಳಿದು ಬಂದಿಲ್ಲ. ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಆರ್.ಆರ್ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸ್ನೇಹಿತನ ಫೋನ್ ನಂಬರ್ ಬರೆದಿಟ್ಟು ಬಹುಮಹಡಿ ಕಟ್ಟಡದಿಂದ ಜಿಗಿದ ಕ್ಯಾಬ್ ಡ್ರೈವರ್‌; ಏನಾಯ್ತು?

https://newsfirstlive.com/wp-content/uploads/2023/11/death-2023-11-12T061303.774.jpg

Load More