newsfirstkannada.com

KSRTC, ಬೈಕ್ ಮಧ್ಯೆ ಭಯಾನಕ ಅಪಘಾತ; ಡಿಕ್ಕಿಯಾದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಸಾವು

Share :

Published June 16, 2024 at 4:36pm

  ಮೃತ ಬೈಕ್​ ಸವಾರ ವಸೀಂ (25) ಎಂಬಾತ ಮಾಗಡಿ ನಿವಾಸಿ

  ಮಾಗಡಿ ತಾಲೂಕಿನ ಮುತ್ತಯನ‌ಕಟ್ಟೆ ಬಳಿ ನಡೆದ ಅಪಘಾತ

  ಘಟನಾ ಸ್ಥಳಕ್ಕೆ ಮಾಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ

ರಾಮನಗರ: ಕೆ‌ಎಸ್‌ಆರ್‌ಟಿಸಿ‌ ಬಸ್ ಹಾಗೂ ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಸವಾರ ಸಾವನ್ನಪ್ಪಿರೋ ಘಟನೆ ಮಾಗಡಿ ತಾಲೂಕಿನ ಮುತ್ತಯನ‌ಕಟ್ಟೆ ಬಳಿ ನಡೆದಿದೆ. ಮಾಗಡಿ ನಿವಾಸಿ ವಸೀಂ (25) ಮೃತ ಬೈಕ್ ಸವಾರ.

ಇದನ್ನೂ ಓದಿ: ‘ನಿಮ್ಮನ್ನ ಮಿಸ್ ಮಾಡಿಕೊಳ್ತಿದ್ದೇನೆ ಅಪ್ಪ’ ಎಂದು ಹಾಕಿದ್ದ ಪೋಸ್ಟ್​ ಡಿಲೀಟ್​​! ದರ್ಶನ್ ಪುತ್ರ ವಿನೀಶ್​ಗೆ ಏನಾಯ್ತು​​?

ರಾಮನಗರ ಕಡೆಯಿಂದ ಬರುತ್ತಿದ್ದ ವೇಳೆ ಬೈಕ್ ಸವಾರ ಬಸ್‌ಗೆ ಏಕಾಏಕಿ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ರಭಸಕ್ಕೆ ಬಸ್ ಕೆಳಗೆ ಬೈಕ್ ಸವಾರ ಬಿದ್ದಿದ್ದಾನೆ. ಕೂಡಲೇ ಆತನ ಮೇಲೆ ಬಸ್​ ಹರಿದು ಹೋಗಿದೆ. ಪರಿಣಾಮ ತಲೆಯಿಂದ ಅಧಿಕ ರಕ್ತಸ್ರಾವನ ಉಂಟಾಗಿ ಬೈಕ್​ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕೂಡಲೇ ಘಟನಾ ಸ್ಥಳಕ್ಕೆ ಮಾಗಡಿ ಪೊಲೀಸರು ಭೇಟಿ ನೀಡ ಪರಿಶೀಲನೆ ನಡೆಸಿದ್ದಾರೆ. ಮೃತದೇಹದವನ್ನು ಮಾಗಡಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಘಟನೆ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

KSRTC, ಬೈಕ್ ಮಧ್ಯೆ ಭಯಾನಕ ಅಪಘಾತ; ಡಿಕ್ಕಿಯಾದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಸಾವು

https://newsfirstlive.com/wp-content/uploads/2024/06/accident2.jpg

Load More