newsfirstkannada.com

ರಾಜ್ಯದಲ್ಲಿ ಮತ್ತೆ ಇಂದಿರಾ ಕ್ಯಾಂಟೀನ್​ಗಳ ಪುನರಾರಂಭ; ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

Share :

Published June 13, 2023 at 6:11am

    ಬೆಂಗಳೂರು ಒಂದರಲ್ಲಿ ಎಷ್ಟು ಕ್ಯಾಂಟೀನ್​ ಓಪನ್ ಆಗ್ತಾವೆ ಗೊತ್ತಾ?

    ಬಿಜೆಪಿ ಸರ್ಕಾರದಲ್ಲಿ ಬಾಗಿಲು ಮುಚ್ಚಿದ್ದ ಕ್ಯಾಂಟೀನ್​ಗಳು

    ಊಟದ ಮೆನುವಿನಲ್ಲಿ ಕೆಲವು ಬದಲಾವಣೆ ಆಗಲಿದೆ

ಗರೀಬಿ ಹಠಾವೋ ಮೂಲಕ ಬಡತನ ನಿರ್ಮೂಲನೆಗೆ ಶ್ರಮಿಸಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹೆಸರಲ್ಲಿ ಸಿದ್ದರಾಮಯ್ಯ ಸರ್ಕಾರ ಇಂದಿರಾ ಕ್ಯಾಂಟೀನ್​ಗಳನ್ನು ಸ್ಥಾಪಿಸಿತ್ತು. ಬಡವರ ಹಸಿವು ನೀಗಿಸುವ ಇಂದಿರಾ ಕ್ಯಾಂಟೀನ್​ಗಳು ಬಿಜೆಪಿ ಸರ್ಕಾರದ ಅವಧಿಯಲ್ಲಿ ಸೊರಗಿದ್ದವು. ಈಗ ಮತ್ತೆ ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು ಬಡವರ ಕ್ಯಾಂಟೀನ್​​ಗಳಿಗೆ ಮರುಜೀವ ಸಿಕ್ಕಿದೆ.

ಇಂದಿರಾ ಕ್ಯಾಂಟೀನ್ ಪುನಾರಂಭಕ್ಕೆ ಸಿದ್ದು ಸರ್ಕಾರ ಸಜ್ಜು!

ಬಡವರ ಹಸಿವು ನೀಗಿಸಲು ಅನ್ನಭಾಗ್ಯ ಕೊಟ್ಟಿದ್ದ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ. ನಗರ ಪಟ್ಟಣಗಳಲ್ಲಿರುವ ಹಾಗೂ ಕಾರ್ಯನಿಮಿತ್ತ ನಗರಗಳಿಗೆ ಬರುವ ಬಡವರಿಗಾಗಿ 2017ರಲ್ಲಿ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್​​ಗಳನ್ನು ಆರಂಭಿಸಿತ್ತು. ಕೇವಲ 5 ರೂಪಾಯಿಗೆ ತಿಂಡಿ ಹಾಗೂ ಊಟ ಸಿಗುವಂತೆ ವ್ಯವಸ್ಥೆ ಮಾಡಲಾಗಿತ್ತು. ಬಿಜೆಪಿ ಸರ್ಕಾರಕ್ಕೆ ಅಧಿಕಾರಕ್ಕೆ ಬಂದ ಮೇಲೆ ಗ್ರಾಹಕರು ಬರುತ್ತಿಲ್ಲ ಅಂತ ಇಂದಿರಾ ಕ್ಯಾಂಟೀನ್​ಗಳು ಬಾಗಿಲು ಮುಚ್ಚಿದ್ದವು. ಬಡವರ ಫೈವ್ ಸ್ಟಾರ್​ ಹೋಟೆಲ್​ಗಳು ಎನಿಸಿಕೊಂಡಿದ್ದ ಇಂದಿರಾ ಕ್ಯಾಂಟೀನ್​ಗಳು 6 ವರ್ಷಗಳ ಬಳಿಕ ಮರುಜೀವ ಪಡೆಯುತ್ತಿವೆ.

ಇಂದಿರಾ ಕ್ಯಾಂಟೀನ್ ಆರಂಭ ಸಂಬಂಧ ಸಿಎಂ ಮಹತ್ವದ ಸಭೆ!

ಇಂದಿರಾ ಕ್ಯಾಂಟೀನ್ ಪುನಾರಂಭ ಬಗ್ಗೆ ಈ ಮೊದಲೇ ಸುಳಿವು ನೀಡಿದ್ದ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ರು. ಹಾಗಿದ್ರೆ ಸಭೆಯಲ್ಲಿ ಏನೆಲ್ಲ ಚರ್ಚೆ ಆಯ್ತು ಅಂತ ನೋಡೋದಾದ್ರೆ..

ಬೆಂಗಳೂರಲ್ಲಿ 250 ಇಂದಿರಾ ಕ್ಯಾಂಟೀನ್​ಗಳನ್ನು ತೆರೆಯಲು ಒಪ್ಪಿಗೆ ಸೂಚಿಸಲಾಗಿದೆ. ಬೆಂಗಳೂರಲ್ಲಿ ಇಂದಿರಾ ಕ್ಯಾಂಟೀನ್​ಗಳ ನಿರ್ವಹಣೆಗೆ ಸರ್ಕಾರ-ಬಿಬಿಎಂಪಿ ತಲಾ 50% ಷೇರು ಹಾಕಲಿವೆ. ಯಾವುದೇ ರೀತಿಯ ದರ ಪರಿಷ್ಕರಣೆ ಇರುವುದಿಲ್ಲ. ಕ್ವಾಂಟಿಟಿ, ಕ್ವಾಲಿಟಿ ಎರಡೂ ಇರುವಂತೆ ಕ್ರಮ ವಹಿಸಲಾಗಿದೆ. ಹೊಸದಾಗಿ ಟೆಂಡರ್ ಕರೆಯಲು ತೀರ್ಮಾನಿಸಲಾಗಿದ್ದು ಟೆಂಡರ್ ಆದ ಬಳಿಕ ಇಂದಿರಾ ಕ್ಯಾಂಟೀನ್​ಗಳ ಪುನಾರಂಭಕ್ಕೆ ನಿರ್ಧರಿಸಲಾಗಿದೆ. ರಾಜ್ಯದೆಲ್ಲೆಡೆ ಅಗತ್ಯ ಇರುವಲ್ಲಿ ಮಾತ್ರ ಇಂದಿರಾ ಕ್ಯಾಂಟೀನ್ ಸ್ಥಾಪನೆಗೆ ಸೂಚಿಸಲಾಗಿದೆ. ಊಟದ ಮೆನುವಿನಲ್ಲಿ ಕೆಲವು ಬದಲಾವಣೆಗೆ ನಿರ್ಧಾರ ಮಾಡಲಾಗಿದ್ದು ಆಹಾರದ ಜೊತೆಗೆ ಸ್ವಚ್ಛತೆಗೂ ಆದ್ಯತೆ ನೀಡಲಾಗಿದೆ.

ಇನ್ನು ಸಭೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ರಾಜ್ಯಾದ್ಯಂತ ಕ್ಯಾಂಟೀನ್ ತೆರೆಯಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದ್ರು.
‘ಹೊಸ ಕ್ಯಾಂಟೀನ್ ಆರಂಭಕ್ಕೂ ನಿರ್ಧಾರ’

ಇಲ್ಲಿವರೆಗೆ ಕಾರ್ಪೊರೇಷನ್ 70% ಕೊಡುವುದು ಸರ್ಕಾರ 30% ಕೊಡುವುದಿತ್ತು. ಈಗ ಸರ್ಕಾರ 50%, ಕಾರ್ಪೊರೇಷನ್ 50% ಕೊಡಬೇಕು ಎಂದು ಹೇಳಿದ್ದೀನಿ. ಬೆಂಗಳೂರು ಬಿಟ್ಟು ಬೇರೆ ಕಡೆ 70% ಸರ್ಕಾರ ಕೊಟ್ಟು 30% ಕಾರ್ಪೊರೇಷನ್ ಕೊಡುತ್ತದೆ.

ಇನ್ನು ಹೊಸದಾಗಿ ಎಲ್ಲೆಲ್ಲಿ ಇಂದಿರಾ ಕಾಂಟೀನ್​ ಓಪನ್ ಮಾಡಬೇಕು ಎಂದು ಅವಶ್ಯಕತೆ ಇದೆ. ಅದರ ಲಿಸ್ಟ್​ ರೆಡಿ ಮಾಡಿ ನಮಗೆ ಕೊಡಿ ಎಂದು ಹೇಳಿದ್ದೇವೆ.

ಸಿದ್ದರಾಮಯ್ಯ, ಮುಖ್ಯಮಂತ್ರಿ

ಇನ್ನು ಹೊಸ ರೂಪದಲ್ಲಿ ಇಂದಿರಾ ಕ್ಯಾಂಟೀನ್​ಗಳು ಲಕಲಕ ಹೊಳೆಯಲಿವೆ. ಸಿಎಂ ಸಿದ್ದರಾಮಯ್ಯ ಇಂದಿರಾ ಕ್ಯಾಂಟೀನ್‌ಗಳ ಸ್ಥಿತಿಗತಿಯ ಕುರಿತಾಗಿ ವರದಿ ಸಲ್ಲಿಸುವಂತೆ ಬಿಬಿಎಂಪಿಗೆ ಸೂಚಿಸಿದ್ದರು. ಹಾಲಿ ಇರುವ ಇಂದಿರಾ ಕ್ಯಾಂಟೀನ್‌ಗಳನ್ನು ಮೇಲ್ದರ್ಜೆಗೇರಿಸುವುದು ಜೊತೆಗೆ ಬೆಂಗಳೂರಿನ ಮೂಲೆ ಮೂಲೆಗೆ ‘ಇಂದಿರಾ ಕ್ಯಾಂಟೀನ್‌’ ವಿಸ್ತರಣೆಗೆ ಸರ್ಕಾರ ಪ್ಲ್ಯಾನ್ ಮಾಡಿದೆ ಎನ್ನಲಾಗಿದೆ.

ಹಸಿದವರು, ಬಡವರಿಗೆ ಆಸರೆಯಾಗಿದ್ದ ಇಂದಿರಾ ಕ್ಯಾಂಟೀನ್​ಗಳು ಮತ್ತೆ ವೈಭವದ ದಿನಗಳಿಗೆ ಮರಳಲಿವೆ. ಈ ಮೂಲಕ ಬಸವಣ್ಣನವರ ದಾಸೋಹ ತತ್ವವನ್ನು ಕಾಂಗ್ರೆಸ್ ಸರ್ಕಾರ ಪಾಲಿಸುತ್ತಿದೆ. ಆದ್ರೆ ಮೊದಲಿನಂತೆ ಗೊಂದಲಕ್ಕೆ ಅವಕಾಶ ಇಲ್ಲದಂತೆ ಇಂದಿರಾ ಕ್ಯಾಂಟೀನ್​ಗಳು ಕಾರ್ಯನಿರ್ವಹಿಸುವಂತೆ ಸೂಕ್ತ ಕ್ರಮ ವಹಿಸಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯದಲ್ಲಿ ಮತ್ತೆ ಇಂದಿರಾ ಕ್ಯಾಂಟೀನ್​ಗಳ ಪುನರಾರಂಭ; ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

https://newsfirstlive.com/wp-content/uploads/2023/06/CM_SIDDARAMAIAH_INDIRA.jpg

Load More