ಮಗಳ ಕುಟುಂಬಕ್ಕೆ ಸಂಬಂಧಿಗಳು ಹುಳಿ ಹಿಂಡಿದ ಆರೋಪ
ಪೋಷಕರ ದೂರಿನ ಆಧಾರದ ಮೇಲೆ ಐವರ ಬಂಧನ
ಗೋವಿಂದರಾಜನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಮನನೊಂದು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಗೋವಿಂದರಾಜನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಐಶ್ವರ್ಯ (26), ಆತ್ಮಹತ್ಯೆಗೆ ಶರಣಾದ ಮಹಿಳೆ. ಪ್ರಕರಣ ಸಂಬಂಧ ಮೃತ ಐಶ್ವರ್ಯ ಪತಿ ರಾಜೇಶ್ ಸೇರಿ ಐವರು ಆರೋಪಿಗಳನ್ನು ಗೋವಿಂದರಾಜನಗರ ಪೊಲೀಸರು ಬಂಧಿಸಿದ್ದಾರೆ. ಮಾವ ಗಿರಿಯಪ್ಪ, ಅತ್ತೆ ಸೀತಾ, ಪತಿ ರಾಜೇಶ್, ಮೈದುನ ವಿಜಯ್, ಮೈದುನನ ಪತ್ನಿ ತಸ್ಮಿನ್ ಬಂಧನವಾಗಿದೆ.
ಏನಿದು ಪ್ರಕರಣ?
ಅಕ್ಟೋಬರ್ 26 ರಂದು ಗೋವಿಂದರಾಜ ನಗರದಲ್ಲಿರುವ ತನ್ನ ತವರು ಮನೆಯಲ್ಲಿ ಐಶ್ವರ್ಯ ಫ್ಯಾನಿಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದರು. ಘಟನೆ ಸಂಬಂಧ ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.
ಪೋಷಕರು ಹೇಳ್ತಿರೋದೇನು..?
ಕಳೆದ 5 ವರ್ಷಗಳ ಹಿಂದೆ ರಾಜೇಶ್ ಎಂಬಾತನನ್ನ ಐಶ್ವರ್ಯ ಮದುವೆ ಆಗಿದ್ದಳು. ಕುಟುಂಬಸ್ಥರ ನಿಶ್ಚಯದಂತೆ ಐಶ್ವರ್ಯಗೆ ಮದುವೆ ಮಾಡಲಾಗಿತ್ತು. ಯುಎಸ್ಎನಲ್ಲಿ ಎಂಬಿಎ ಮಾಡಿದ್ದ ಐಶ್ವರ್ಯ ಪ್ರತಿಭಾವಂತೆ ಆಗಿದ್ದಳು. ಆರೋಪಿ ರಾಜೇಶ್ ಕುಟುಂಬ ಪ್ರಸಿದ್ಧ ಡೈರಿ ರಿಚ್ ಐಸ್ ಕ್ರೀಮ್ ಕಂಪನಿ ನಡೆಸುತ್ತಿದೆ. ಇದೇ ಕಂಪನಿಯಲ್ಲಿ ಐಶ್ವರ್ಯ ಸಂಬಂಧಿ ರವೀಂದ್ರ ಆಡಿಟರ್ ಆಗಿದ್ದರು. ಈ ರವೀಂದ್ರ, ಐಶ್ವರ್ಯ ತಂದೆ ಸುಬ್ರಮಣಿ ಅವರ ತಂಗಿಯ ಗಂಡನಾಗಿದ್ದಾನೆ. ಈ ರವೀಂದ್ರನೇ ಮುಂದೆ ನಿಂತು ರಾಜೇಶ್ ಹಾಗೂ ಐಶ್ವರ್ಯ ನಡುವೆ ಮದುವೆ ಮಾಡಿಸಿದ್ದರು ಎಂದು ಹೇಳಿದ್ದಾರೆ. ಕೊನೆಗೆ ಆಸ್ತಿ ವಿಚಾರವಾಗಿ ರವೀಂದ್ರ ಮತ್ತು ಸುಬ್ರಮಣಿ ಕುಟುಂಬದಲ್ಲಿ ಕಲಹ ಉಂಟಾಗಿತ್ತು. ತಂದೆ ಮೇಲಿನ ದ್ವೇಷಕ್ಕೆ ಮಗಳ ಸಂಸಾರದಲ್ಲಿ ದಾಯಾದಿಗಳು ಹುಳಿ ಹಿಂಡಿದ್ದಾರೆ ಅನ್ನೋ ಆರೋಪವನ್ನು ಐಶ್ವರ್ಯ ಪೋಷಕರು ಮಾಡಿದ್ದಾರೆ.
ಏನಿದು ಆರೋಪ..?
ಐಶ್ವರ್ಯಳ ಚಾರಿತ್ರ್ಯ ವಧೆ ಮಾಡಿ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಪತಿ ರಾಜೇಶ್ ಕುಟುಂಬಕ್ಕೆ ಐಶ್ವರ್ಯ ವಿರುದ್ಧ ರವೀಂದ್ರ ಕಡೆಯವರು ಇಲ್ಲಸಲ್ಲದ ಕಟ್ಟುಕಥೆ ಹೇಳುತ್ತಿತ್ತು. ಅಷ್ಟೇ ಅಲ್ಲದೇ ಐಶ್ವರ್ಯಳ ಫೋಟೋಗಳನ್ನ ಕಳುಹಿಸಿ, ನಿಮ್ಮ ಸೊಸೆ ಸರಿಯಿಲ್ಲ ಎಂದು ಕೆಟ್ಟದಾಗಿ ಬಿಂಬಿಸುತ್ತಿದ್ದರು. ಇದರಿಂದಾಗಿ ರಾಜೇಶ್ ಕುಟುಂಬ ಪ್ರತಿನಿತ್ಯ ಮಗಳು ಐಶ್ವರ್ಯಳಿಗೆ ಕಿರುಕುಳ ನೀಡುತ್ತಿತ್ತು ಎಂದು ಆರೋಪಿಸಿದ್ದಾರೆ.
ಗಂಡನಿಗಾಗಿ ಮಗಳು ಸುಮ್ಮನಿದ್ದಳು-ಐಶ್ವರ್ಯ ಪೋಷಕರು
ಐಶ್ವರ್ಯ ಮಾವ ಗಿರಿಯಪ್ಪ, ಅತ್ತೆ ಸೀತಾ ಹಾಗೂ ಮೈದುನ ವಿಜಯ್ ಹಾಗೂ ಆತನ ಪತ್ನಿ ತಸ್ಮಿಯಿಂದ ಕಿರುಕುಳ ನಡೆದಿದೆ. ವರದಕ್ಷಿಣೆ ತರುವಂತೆಯೂ ಹೇಳಿ ಕಿರುಕುಳ ನೀಡಿದ್ದಾರೆ. ಎಷ್ಟೇ ಕಿರುಕುಳ ಕೊಟ್ಟರೂ ಗಂಡನಿಗಾಗಿ ಐಶ್ವರ್ಯ ಸುಮ್ಮನಿದ್ದಳು. ತಾನು ದುಡಿದ ಹಣದಲ್ಲಿ ಗಂಡನಿಗೆ ಐಶಾರಾಮಿ ಸೂಪರ್ ಬೈಕ್ ಹಾಗೂ ಚಿನ್ನದ ಒಡವೆ ಸಹ ಕೊಡಿಸಿದ್ದಳು ಎಂದು ಪೋಷಕರು ಹೇಳಿದ್ದಾರೆ.
ಇನ್ನು ಕುಟುಂಬಸ್ಥರ ಮಾತನ್ನು ಕೇಳಿ ಗಂಡ ರಾಜೇಶ್ ಆಕೆಗೆ ಟಾರ್ಚರ್ ನೀಡಲು ಶುರುಮಾಡಿದ್ದ. ಇದರಿಂದ ನೊಂದು ಕಳೆದ 20 ದಿನಗಳ ಹಿಂದೆ ಗಂಡನ ಮನೆಬಿಟ್ಟು ಐಶ್ವರ್ಯ ತವರು ಮನೆಗೆ ಬಂದಿದ್ದಳು. ಕಳೆದ 26 ರಂದು ಯಾರೂ ಇಲ್ಲದ ವೇಲೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಡೆತ್ ನೋಟ್ ಬರೆದಿಟ್ಟು ಐಶ್ವರ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ.
ಘಟನೆ ಸಂಬಂಧ ಐಶ್ವರ್ಯ ತಾಯಿಯಿಂದ ಗೋವಿಂದರಾಜನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಗಂಡ ರಾಜೇಶ್, ಅತ್ತೆ ಸೀತಾ, ಮಾವ ಗಿರಿಯಪ್ಪ, ಮೈದುನ ವಿಜಯ ಹಾಗೂ ಆತನ ಪತ್ನಿ ತಸ್ಮಿ ಮೇಲೆ ದೂರು ದಾಖಲಿಸಿದ್ದರು. ಜೊತೆಗೆ ರವೀಂದ್ರ , ಗೀತಾ , ಶಾಲಿನ , ಓಂಪ್ರಕಾಶ್ ಅನ್ನೋರ ವಿರುದ್ಧವೂ ದೂರು ನೀಡಿದ್ದಾರೆ. ಇವರು ಮಗಳು ಸಂಸಾರ ಒಡೆಯಲು ಪ್ರೇರಣೆ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ