Advertisment

ಕಂಡ ಕನಸು ಈಡೇರೋ ಮುನ್ನವೇ ಕೊನೆಯಾದ IPS ಅಧಿಕಾರಿ; ಈ ಭೀಕರ ಅಪಘಾತ ಹೇಗಾಯ್ತು?

author-image
Gopal Kulkarni
Updated On
ಹಾಸನದಲ್ಲಿ ಯುವ IPS ಅಧಿಕಾರಿ ಹರ್ಷಬರ್ಧನ್ ದುರಂತ ಅಂತ್ಯ; ಆಗಿದ್ದೇನು?
Advertisment
  • ಕಂಡ ಕನಸು ಈಡೇರುವ ಮುನ್ನವೇ ಯುವ ಅಧಿಕಾರಿಯ ದುರಂತ ಅಂತ್ಯ
  • ಕಂಬಕ್ಕೆ ಗುದ್ದಿ ಮನೆಗೆ ಡಿಕ್ಕಿ ಹೊಡೆದ ಹಾಸನಕ್ಕೆ ಹೊರಟ ಪೊಲೀಸ್ ಜೀಪ್!
  • ಮೊದಲ ಪ್ರಯತ್ನದಲ್ಲಿಯೇ ಪಾಸ್! 153 ಱಂಕ್ ಪಡೆದಿದ್ದ ಹರ್ಷವರ್ದನ್!

ಜೀವನದ ಬಗ್ಗೆ ನಾವೆಲ್ಲ ನೂರಾರು ಕನಸುಗಳನ್ನ ಕಟ್ಟಿಕೊಂಡು ಇರುತ್ತೇವೆ. ಏನೇನೋ ಆಸೆ ಇಟ್ಕೊಂಡು ಬದುಕಿನ ಬಗ್ಗೆ ಏನೇನೂ ಲೆಕ್ಕಚಾರ ಹಾಕಿರ್ತಿವಿ. ಆದ್ರೆ ಮೇಲಿರುವ ವಿಧಿ ಲೆಕ್ಕಚಾರ ಬೇರೆಯೇ ಆಗಿರುತ್ತೆ. ಈಗ ಇಂಥಾದ್ದೆ ವಿಧಿಯಾಟಕ್ಕೆ ಕೇವಲ 25 ವರ್ಷದ ಯುವ ಐಪಿಎಸ್ ಅಧಿಕಾರಿ ಬದುಕು ದುರಂತಮಯವಾಗಿ ಅಂತ್ಯ ಕಂಡಿದೆ. ಸಾವಿರ ಕನಸುಗಳನ್ನ ಕಂಡು ಜೀವನದ ಅಮೂಲ್ಯ ಕ್ಷಣಕ್ಕಾಗಿ ಕಾಯುತ್ತಿದ್ದ ಹರ್ಷವರ್ದನ್ ಕೆಲಸಕ್ಕೆ ಸೇರುವ ತವಕದಲ್ಲಿದ್ದರು. ಆದ್ರೆ ಜವರಾಯ ಆ ತವಕಕ್ಕೆ ಕೊನೆ ಎಳೆದು ಬಿಟ್ಟಿದ್ದಾನೆ. ಭೀಕರ ಅಪಘಾತದಲ್ಲಿ ಯುವ ಅಧಿಕಾರಿಯ ಪ್ರಾಣ ಪಕ್ಷಿ ಹಾರಿ ಹೋಗಿದೆ.

Advertisment

ದೊಡ್ಡವರು ಒಂದು ಮಾತು ಹೇಳ್ತಾರೆ. ಬದುಕಲ್ಲಿ ನಾವು ಅಂದಕೊಳ್ಳೋದೆ ಒಂದು. ದೇವರು ಮಾಡೋದೆ ಇನ್ನೊಂದು ಅಂತ. ಯಾಕಂದ್ರೆ ಜೀವನ ಅನ್ನೋದೆ ಅನಿರೀಕ್ಷಿತತೆಗಳ ತಿರುವು. ನಾವು ನಾಳೆಗಳ ಬಗ್ಗೆ ಏನೇನೂ ಕನಸು ಕಟ್ಕೊಂಡು ಹಾಗಿರಬೇಕು. ಹೀಗಿರಬೇಕು ಅಂತ ಲೆಕ್ಕಚಾರ ಹಾಕಿಕೊಂಡು ಇರುತ್ತೇವೆ. ಆದ್ರೆ ಮೇಲಿರುವ ವಿಧಿ ಇಂತಾ ಲೆಕ್ಕಚಾರಗಳನ್ನೆಲ್ಲ ಉಲ್ಟಾ ಪಲ್ಟಾ ಮಾಡಿ ಬಿಡುತ್ತೆ.

publive-image

ಕಂಡ ಕನಸು ಈಡೇರುವ ಮುನ್ನವೇ ಯುವ ಅಧಿಕಾರಿಯ ದುರಂತ ಅಂತ್ಯ
ಐಪಿಎಸ್ ಅನ್ನೋದು ಒಂದು ಕನಸು. ಐಪಿಎಸ್ ಅಧಿಕಾರಿ ಆಗೋದು ಅಂದ್ರೆ ಅದು ಸಾಮಾನ್ಯದ ಮಾತು ಅಲ್ವೆ ಅಲ್ಲ. ಅದೆಷ್ಟು ದಿನ ಊಟ ನಿದ್ರೆ ಎಲ್ಲ ಬಿಟ್ಟು ಮುಂದಿನ ಬದುಕಿನ ಬಗ್ಗೆ ಕನಸು ಕಟ್ಕೊಂಡು ಹರ್ಷವರ್ದನ್ ಜನರ ಸೇವೆ ಮಾಡುವ ಆಸೆ ಹೊಂದಿದ್ರು. ಆದ್ರೆ ಆ ಕನಸು ಈಡೇರುವ ಮುನ್ನವೇ ವಿಧಿ ಹರ್ಷವರ್ದನ್ ಬದುಕಲ್ಲಿ ದೊಡ್ಡ ಅನ್ಯಾಯ ಮಾಡಿಬಿಟ್ಟಿದೆ. ಇನ್ನೇನು ಕೆಲಸಕ್ಕೆ ಸೇರಬೇಕು ಎಂದುಕೊಂಡಿರುವಾಗಲೇರಣ ಭೀಕರ ಅಪಘಾತದಲ್ಲಿ ಹರ್ಷ ವರ್ಧನ್ ಪ್ರಾಣ ಪಕ್ಷಿ ಹಾರಿ ಹೋಗಿದೆ.

ಬಿಹಾರ ಮೂಲದ ಹರ್ಷವರ್ದನ್​ಗೆ ಹಾಸನದ ಪೋಸ್ಟಗೆ ಜಾಯಿನ್ ಆಗಬೇಕಿತ್ತು . ಹಾಸನಕ್ಕೆ ಬಂದು ಕೆಲಸಕ್ಕೆ ರಿಪೋರ್ಟ್ ಮಾಡಿಕೊಳ್ಳಬೇಕಿತ್ತು. ಹೀಗಾಗಿ ಮೈಸೂರಿನಲ್ಲಿ ನಾಲ್ಕು ವಾರದ ಟ್ರೈನಿಂಗ್ ಮುಗಿಸಿ ಮೈಸೂರಿನ ಪೊಲೀಸ್ ಅಕಾಡೆಮಿಯಿಂದ ಹರ್ಷವರ್ದನ್ ಹಾಸನಕ್ಕೆ ಹೊರಟ್ಟಿದ್ದರು. ಹಾಸನದ ಎಸ್​​ ಪಿಯನ್ನ ಭೇಟಿಯಾಗಿ ಕೆಲಸಕ್ಕೆ ರಿಪೋರ್ಟ್ ಮಾಡಿಕೊಳ್ಳಬೇಕಾಗಿತ್ತು. ಹೀಗಾಗಿ ಮೈಸೂರು ಹಾಸನ ರಸ್ತೆ ಮೂಲಕ ಬೊಲೆರೋ ಪೊಲೀಸ್ ಜೀಪ್​ನಲ್ಲಿ ಹರ್ಷವರ್ದನ್ ಪ್ರಯಾಣ ಬೆಳೆಸಿದ್ದರು. ಈ ವೇಳೆ ಹರ್ಷವರ್ದನ್​ ಜೊತೆ ಹಾಸನ ಡಿಆರ್ ಪೇದೆ ಕೂಡ ಇದ್ದರು. ಇಬ್ಬರು ಹಾಸನದ ಕಡೆ ಪ್ರಯಾಣ ಬೆಳೆಸಿದ್ದರು. ಇನ್ನೇನು ಕೆಲ ಗಂಟೆ ಕಳೆದಿದ್ದರೆ ಹಾಸನವನ್ನ ತಲುಪಿಬಿಡುತ್ತಿದ್ದರು. ಆದ್ರೆ ಅಷ್ಟರಲ್ಲೇ ಜೀಪ್​ನ ಟೈರ್ ಬ್ಲಾಸ್ಟ್ ಆಗಿ ಮನೆಯೊಂದಕ್ಕೆ ಡಿಕ್ಕಿ ಹೊಡೆದಿದೆ.

Advertisment

publive-image

ಕಂಬಕ್ಕೆ ಗುದ್ದಿ ಮನೆಗೆ ಡಿಕ್ಕಿ ಹೊಡೆದ ಪೊಲೀಸ್ ಜೀಪ್!
ಕಿತ್ತಾಣಿ ಬಳಿ ಬರ್ತಿದ್ದಂತೆ ಹರ್ಷವರ್ದನ್ ಕೂತಿದ್ದ ಪೊಲೀಸ್ ಜೀಪ್ ಏಕಾಏಕಿ ನಿಯಂತ್ರಣ ಕಳೆದುಕೊಂಡಿದೆ. ಏನಾಗ್ತಿದೆ ಅನ್ನೋದು ಅರಿವಿಗೆ ಬರುವಷ್ಟರಲ್ಲಿಯೇ ಜೀಪ್ ಕಂಬಕ್ಕೆ ಗುದ್ದಿ ಮನೆಯೊಂದಕ್ಕೆ ಡಿಕ್ಕಿ ಹೊಡೆದಿದೆ. ಜೀಪ್ ಡಿಕ್ಕಿ ಹೊಡೆದ ರಭಸಕ್ಕೆ ಜೀಪ್​ನಲ್ಲಿದ್ದ ಹರ್ಷವರ್ದನ್ ತಲೆಗೆ ಪೆಟ್ಟು ಬಿದ್ದಿದೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.. ಒಂದಲ್ಲ ಎರಡಲ್ಲ ಬರೋಬ್ಬರಿ ನಾಲ್ಕು ಗಂಟೆಗಳ ನಿರಂತರವಾಗಿ ಚಿಕಿತ್ಸೆ ಕೂಡ ನೀಡಲಾಗುತ್ತೆ. ಸಾವು ಬದುಕಿನ ಹೋರಾಟ ನಡೆಸುತ್ತಿದ್ದ ಹರ್ಷವರ್ದನ್​​ರನ್ನ ಮೈಸೂರು ಆಸ್ಪತ್ರೆ ಸಾಗಿಸಬೇಕು ಅಂತ ಎಲ್ಲ ಸಿದ್ಧತೆ ಕೂಡ ಮಾಡಿಕೊಳ್ಳಲಾಗಿತ್ತು. ಆದ್ರೆ ಅಷ್ಟರಲ್ಲೇ ವಿಧಿ ಹರ್ಷವರ್ದನ್​ ಪ್ರಾಣವನ್ನ ಕಸಿದುಕೊಂಡು ಬಿಟ್ಟಿತ್ತು.

ಐಪಿಎಸ್ ಅಧಿಕಾರಿಯಾಗಿ ಜನರ ಸೇವರ ಮಾಡಬೇಕು ಅನ್ನೋ ಆಸೆಯೇ ಈಗ ಕಮರಿ ಹೋಗಿದೆ. ಈಗ ಹರ್ಷವರ್ದನ್ ಕುಟುಂಬದ ಸ್ಥಿತಿ ನೆನೆದರೆ ನಿಜಕ್ಕೂ ಕರುಳು ಚರುಕ್ ಅನ್ನುತ್ತೆ. ಯಾಕಂದ್ರೆ ದೇವರು ಆ ಕುಟುಂಬದ ಬದುಕಿನ ಮುಂದಿನ ಅವಕಾಶವನ್ನೆ ಕಿತ್ತುಕೊಂಡು ಬಿಟ್ಟಿದ್ದಾನೆ. ಅಧಿಕಾರಕ್ಕೆ ಸೇರುವ ಮುನ್ನವೇ ಹರ್ಷವರ್ಷದನ್​ ಬದುಕು ದುರಂತಮಯವಾಗಿ ಅಂತ್ಯ ಕಂಡಿದೆ.

publive-image

ಮೊದಲ ಪ್ರಯತ್ನದಲ್ಲಿಯೇ ಪಾಸ್! 153 ಱಂಕ್!
ಈಗಾಗಲೇ ಹೇಳಿದಂತೆ ಐಪಿಎಸ್​ ಅನ್ನೋದೇ ಒಂದು ತಪಸ್ಸು. ಅದೆಷ್ಟೆ ಶ್ರೀಮಂತರಿದ್ದರೂ, ಇನ್​ಫ್ಲೂಯೆನ್ಸ್ ಇದ್ದರೂ ಐಪಿಎಸ್ ಆಗೋಕೆ ಕಠಿಣ ಶ್ರಮ ಬೇಕೇ ಬೇಕು. ಹಾಗಾಗಿ ಹರ್ಷರ್ವರ್ದನ್ ಕೂಡ ಕಠಿಣ ಶ್ರಮ ಪಟ್ಟು ಓದಿ ಇನ್ನೇನು ಕಂಡ ಕನಸು ಈಡೇರಬೇಕು ಅನ್ನುವಾಗಲೇ ಆ್ಯಕ್ಸಿಡೆಂಟ್ ನಡೆದಿದೆ ಹರ್ಷವರ್ದನ್ ದಾರುಣವಾಗಿ ಸಾವನ್ನಪ್ಪಿರೋದರು ನೋಡಿದ್ರೆ ದೇವರು ಅದೆಷ್ಟು ಕ್ರೂರಿ ಅಂತ ಅನಿಸಿಬಿಡುತ್ತೆ.
ಹರ್ಷವರ್ದನ್​ ಮೂಲ ಬಿಹಾರವಾದ್ರೂ ಮಧ್ಯಪ್ರದೇಶದಲ್ಲೇ ಹರ್ಷವರ್ದನ್​ ವಿಧ್ಯಬ್ಯಾಸ ಮುಗಿಸಿದ್ರು. ಬಿ ಇ ಸಿವಿಲ್ ಎಂಜಿನಿಯರ್ ಮುಗಿಸಿದ ಹರ್ಷರ್ದನ್​ ಯಪಿಎಸ್​ಪಿ ಬರೀಬೇಕು ಅನ್ನೋ ಕನಸು ಕಟ್ಟಿಕೊಂಡಿದ್ದರು. ಕಂಡ ಕನಸಿನಂತೆ ಪರೀಕ್ಷೆ ಬರೆದು ಮೊದಲ ಅಟೆಂಪ್ಟ್​ನಲ್ಲೇ ಪಾಸ್ ಆಗಿದ್ದರು. 153 ನೇ ಱಂಕ್ ಪಡೆದು ಕರ್ನಾಟಕ ಕೆಡೆರ್​ನಲ್ಲಿ ಪೋಸ್ಟ್​ ಪಡೆದಿದ್ದರು. ಹೀಗಾಗಿ ಮೈಸೂರಿನಲ್ಲಿ ತರಬೇತಿ ಮುಗಿಸಿ ಹಾಸನ ಕಡೆ ಹೊರಟ್ಟಿದ್ದರು. ಆದ್ರೆ ಆ ಕನಸು ನನಾಸಗುವ ಮುನ್ನವೇ ಹರ್ಷವರ್ದನ್​ ಬದುಕೆ ಮುಗಿದು ಹೋಗಿದೆ.

Advertisment

ವರ್ಷಗಳ ಕಠಿಣ ಶ್ರಮ ಫಲ ನೀಡುವ ಹೊತ್ತಲ್ಲಿ ಘೋರ ದುರಂತ!

ಐಪಿಎಸ್ ಅಧಿಕಾರಿ ಹರ್ಷವರ್ದನ್ ದುರಂತಮಯ ಸಾವು ಅಕ್ಷರಶಃ ಬೆಚ್ಚಿ ಬೀಳಿಸಿದೆ. ಅದೆಷ್ಟು ವರ್ಷಗಳ ಕಠಿಣ ಶ್ರಮ ಫಲ ನೀಡುವ ಹೊತ್ತಲ್ಲಿ ಇಂಥಾ ಘೋರ ದುರಂತ ನಡೆದಿರೋದು ನಿಜಕ್ಕೂ ಮನಸ್ಸನ್ನ ಮಮ್ಮಲ ಮರುಗಿಸಿಬಿಡುತ್ತೆ. ಹರ್ಷವರ್ದನ್​ ಸಾವಿಗೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದು, ವರ್ಷಗಳ ಕಠಿಣ ಶ್ರಮ ಫಲ ನೀಡುವ ಹೊತ್ತಲ್ಲಿ ಹೀಗಾಗಬಾರದಿತ್ತು ಅಂತಾ ನೊಂದುಕೊಂಡಿದ್ದಾರೆ. ಪೊಲೀಸ್ ಇಲಾಖೆ ಕೂಡ ಹರ್ಷವರ್ದನ್ ಸಾವಿಗೆ ಕಂಬನಿ ಮಿಡಿದಿದೆ. ಅಲೋಕ್​ ಕುಮಾರ್​ ಟ್ವೀಟ್​ ಮಾಡಿ ಸಂತಾಪ ಸೂಚಿಸಿದ್ದಾರೆ. ಹರ್ಷವರ್ದನ್ ಸಾವು ನಿಜಕ್ಕೂ ದೇವರು ಮಾಡಿದ ಮೋಸ. ಯಾಕಂದ್ರೆ ಬದುಕಿನ ಗುರಿ ಈಡೇರೋವ ಹೊತಲ್ಲೇ ಇಂತಾ ಸಾವು ಕೊಟ್ಟಿದ್ದು ಮಾತ್ರ ಅನ್ಯಾಯವೇ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment