newsfirstkannada.com

VIDEO: ನೀನೆಲ್ಲೋ ನಾನಲ್ಲೇ.. ಆಮೆ ಜೊತೆ ಅಜ್ಜನ ಬಿಂದಾಸ್ ವಾಕಿಂಗ್ ಸ್ಟೈಲ್ ಹೇಗಿದೆ ನೋಡಿ

Share :

20-08-2023

    ಆಮೆ ಹಾಗೂ ಅಜ್ಜನ ಫ್ರೆಂಡ್‌ಶಿಪ್‌ಗೆ ಮನಸೋತ ನೆಟ್ಟಿಗರು

    26 ವರ್ಷದ ಆಮೆ ಜೊತೆ ಹೆಜ್ಜೆ ಹಾಕುವ 69 ವರ್ಷದ ವೃದ್ಧ

    ಮಿಲಿಯನ್​​ ವೀವ್ಸ್​ ಪಡೆದುಕೊಂಡ ಆಮೆ ವಾಕಿಂಗ್​ ವಿಡಿಯೋ

ಸಾಮಾನ್ಯವಾಗಿ ಜನರು ತಮ್ಮ ಮನೆಯಲ್ಲಿರೋ ಸಾಕು ಪ್ರಾಣಿಗಳನ್ನು ವಾಕಿಂಗ್​ಗೆ ಕರೆದುಕೊಂಡು ಹೋಗುವುದನ್ನು ಎಲ್ಲರು ನೋಡಿರುತ್ತಾರೆ. ಅದರಲ್ಲೂ ಶ್ವಾನ, ಬೇಕುಗಳನ್ನು ಕರೆದುಕೊಂಡು ಹೋಗುವುದು ಸರ್ವೆ ಸಾಮಾನ್ಯ. ಆದ್ರೆ ಜಪಾನ್‌ನ ಟೋಕಿಯೊದ ತ್ಸುಕಿಶಿಮಾ ಪ್ರದೇಶದಲ್ಲಿ ಹಿಸಾವೊ ಮಿತಾನಿ ಎಂಬ ವೃದ್ಧನೊರ್ವ ಆಮೆಯನ್ನ ವಾಕಿಂಗ್​ಗೆ ಕರೆದುಕೊಂಡು ಹೋಗುತ್ತಿರುವುದನ್ನು ಕಂಡ ಜನರು ಶಾಕ್​ ಆಗಿದ್ದಾರೆ.

ಈ ವೃದ್ಧನು ಪ್ರತಿದಿನ ಆಮೆಯನ್ನು ವಾಕಿಂಗ್​ಗೆ ಕರೆದುಕೊಂಡು ರಸ್ತೆಗೆ ಬರ್ತಾರೆ. 69 ವರ್ಷದ ಹಿಸಾವಿ 26 ವರ್ಷದ ಬಾನ್-ಚಾನ್‌ ಆಮೆಯೊಂದಿಗೆ ವಾಸವಾಗಿದ್ದಾರೆ. ಇವರಿಬ್ಬರ ಸ್ನೇಹವು​ ನೋಡುಗರ ಕಣ್ಮನ ಸೆಳೆಯುವಂತಿದೆ. ವೃದ್ಧ ಎಲ್ಲೇ ಹೋದರು ಕೂಡ ಅವರ ಹಿಂದೆಯೇ ಆಮೆ ಹೋಗುತ್ತೆ. ಅಚ್ಚರಿ ಏನಂದ್ರೆ ಆಮೆ ಬಾನ್-ಚಾನ್‌ ಎಷ್ಟೇ ನಿಧಾನವಾಗಿ ಚಲಿಸಿದರು ಹಿಸಾವಿ ತಾಳ್ಮೆಯಿಂದ ಜೊತೆಗೆ ಹೆಜ್ಜೆ ಹಾಕ್ತಾರೆ. ಇನ್ನು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಬಗೆ ಬಗೆಯಾಗಿ ಕಾಮೆಂಟ್​ ಮಾಡಿದ್ದಾರೆ. ವಾವ್​​ ಎಷ್ಟು ಕ್ಯೂಟ್​ ಆಗಿದೆ ಈ ಆಮೆ, ಒಳ್ಳೆಯ ಗೆಳತನ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ನೀನೆಲ್ಲೋ ನಾನಲ್ಲೇ.. ಆಮೆ ಜೊತೆ ಅಜ್ಜನ ಬಿಂದಾಸ್ ವಾಕಿಂಗ್ ಸ್ಟೈಲ್ ಹೇಗಿದೆ ನೋಡಿ

https://newsfirstlive.com/wp-content/uploads/2023/08/walking.jpg

Load More