newsfirstkannada.com

ಪ್ರೇಯಸಿಯನ್ನು ಬರ್ಬರವಾಗಿ ಕೊಂದ ಅರ್ಚಕ; ‘ದೃಶ್ಯಂ’ ಚಿತ್ರವನ್ನೂ ಮೀರಿಸಿದ ಕೇಸ್

Share :

10-06-2023

  ಮುಂಬೈ ಬೆನ್ನಲ್ಲೇ ಹೈದ್ರಾಬಾದ್​ನಲ್ಲೊಂದು ಭಯಾನಕ ಕೃತ್ಯ

  ಹತ್ಯೆಗೈದು ಪೊಲೀಸರಿಗೆ ಆತನೇ ದೂರು ಕೊಟ್ಟ

  ತನಿಖೆ ಆರಂಭಿಸಿದ್ದ ಪೊಲೀಸರಿಗೆ ಗೊತ್ತಾಗಿದ್ದು ಭಯಾನಕ ಸತ್ಯ

ಮುಂಬೈ ಬೆನ್ನಲ್ಲೇ ಹೈದ್ರಾಬಾದ್​ನಲ್ಲೊಂದು ಆಘಾತಕಾರಿ ಘಟನೆಯೊಂದು ನಡೆದಿದೆ. ಹನಿ ಹನಿ ನೆತ್ತರಿನ ಕಹಾನಿ ಘಟಿಸಿದೆ. ಪ್ರೇಯಸಿಯೊಬ್ಬಳ ಉಸಿರನ್ನು ಪ್ರೇಮಿಯೊಬ್ಬ ನಿಲ್ಲಿಸಿಬಿಟ್ಟಿದ್ದಾನೆ.

ಆಕೆಯನ್ನ ಸಾಯಿಸಿ ಮ್ಯಾನ್ ಹೋಲ್​ನಲ್ಲಿ ಹಾಕಿದ್ದ ಕಿರಾತಕ

ತೆಲಂಗಾಣದ ರಾಜಧಾನಿ ಹೈದರಾಬಾದ್​​ನ ಶಂಶಾಬಾದ್‌ನಲ್ಲಿ ಅರ್ಚಕನೊಬ್ಬ ತನ್ನ ಪ್ರೇಯಸಿಯನ್ನು ಕೊಲೆ ಮಾಡಿ ದೇಹವನ್ನು ಮ್ಯಾನ್​ಹೋಲ್​ಗೆ ಎಸೆದಿದ್ದಾನೆ. ಅಪ್ಸರಾ ಎಂಬಾಕೆಯನ್ನು ನಿಷ್ಕರುಣೆಯಿಂದ ಹತ್ಯೆಗೈದಿದ್ದು ಸದ್ಯ ತನಿಖೆಯಲ್ಲಿ ಇಂಟ್ರೆಸ್ಟಿಂಗ್ ವಿಚಾರಗಳು ಬಯಲಾಗಿವೆ. ಅರ್ಚಕ ಕೆಲಸ ಮಾಡ್ತಿದ್ದ ದೇವಸ್ಥಾನಕ್ಕೆ ಭಕ್ತೆಯಾಗಿ ಬಂದಿದ್ದ ಅಪ್ಸರೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ. ಬಳಿಕ ಆಕೆಯ ಉಸಿರನ್ನೇ ನಿಲ್ಲಿಸಿದ್ದಾನೆ ಅಂತ ಪೊಲೀಸರು ಹೇಳಿದ್ದಾರೆ.

ವೆಂಕಟಸಾಯಿ ಕೃಷ್ಣ, ಹೈದ್ರಾಬಾದ್​ನ ಸರೂರ್‌ನಗರದ ಬಂಗಾರು ಮೈಸಮ್ಮ ದೇವಸ್ಥಾನದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದ. ಆ ದೇವಸ್ಥಾನಕ್ಕೆ ಅಪ್ಸರೆ ಎಂಬ ಯುವತಿ ಆಗಾಗ ಭೇಟಿ ನೀಡುತ್ತಿದ್ದಳು. ಇಬ್ಬರ ಪರಿಚಯ ವಿವಾಹೇತರ ಸಂಬಂಧಕ್ಕೆ ಕಾರಣವಾಗಿತ್ತು. ಕಳೆದ ಕೆಲವು ಸಮಯದಿಂದ ಇಬ್ಬರೂ ಲಿವಿಂಗ್​ ಟುಗೆದರ್​ ರಿಲೇಷನ್​ ಶಿಪ್​ನಲ್ಲಿದ್ದರು. ಈ ವೇಳೆ ವೆಂಕಟಸಾಯಿ ಅಪ್ಸರಾಗೆ ಗರ್ಭಪಾತವನ್ನೂ ಮಾಡಿಸಿದ್ದನಂತೆ.

ಹೀಗಿರುವಾಗ ಅರ್ಚಕ ವೆಂಕಟಸಾಯಿ ಬಳಿ ಅಪ್ಸರಾ ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಳಂತೆ. ಹೀಗೆ ಆಕೆಯ ಒತ್ತಡ ತಾಳಲಾರದೆ ರೋಸಿ ಹೋಗಿದ್ದ ಆರೋಪಿ ಕೊನೆಗೂ ಅಪ್ಸರಾಳಿಗೆ ಮುಹೂರ್ತ ಫಿಕ್ಸ್ ಮಾಡಿದ್ದ. ಇದರ ಭಾಗವಾಗಿಯೇ ಬಾ ನಲ್ಲೆ ಮಧುಚಂದ್ರಕೆ ಎಂಬಂತೆ ವೆಂಕಟಸಾಯಿ ಪ್ರೇಯಸಿ ಅಪ್ಸರಾಳನ್ನು ಶಂಶಾಬಾದ್‌ಗೆ ಕರೆದೊಯ್ದು ಮಾದಕ ಮಾತ್ರೆ ನೀಡಿ ಆಕೆಯನ್ನ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

ಕೊಲೆ ಮುಚ್ಚಿಡಲು ದೃಶ್ಯಂ ಸಿನಿಮಾ ಮಾದರಿ

ಇನ್ನು ಕೊಲೆ ಮಾಡಿದ ಕಿರಾತಕ, ಅಪ್ಸರಾ ಮೃತದೇಹವನ್ನು ಕಾರಿನಲ್ಲಿ ಸರೂರ್​ನಗರಕ್ಕೆ ತಂದು ತಹಶೀಲ್ದಾರ್ ಕಚೇರಿ ಹಿಂಭಾಗದ ಸೆಪ್ಟಿಕ್ ಟ್ಯಾಂಕ್‌ಗೆ ಹಾಕಿ ಅದರ ಮೇಲೆ ಕೆಂಪುಮಣ್ಣು ಸುರಿದಿದ್ದಾನೆ. ನಂತರ ಸೆಪ್ಟಿಕ್ ಟ್ಯಾಂಕ್​ನ್ನು ಸಿಮೆಂಟ್​ನಿಂದ ಸಂಪೂರ್ಣ ಮುಚ್ಚಿ ಹಾಕಿದ್ದಾನೆ. ಜೂನ್​ 3ರಂದು ಕೊಲೆ ಮಾಡಿದ್ದ ಆರೋಪಿ ವೆಂಕಟಸಾಯಿ, ಜೂನ್​ 5ರಂದು ಅನುಮಾನ ಬಾರದಂತೆ ನೋಡಿಕೊಳ್ಳಲು ಮೃತ ಅಪ್ಸರಾ ನಾಪತ್ತೆಯಾಗಿರುವುದಾಗಿ ತಾನೇ ಹೋಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ.

ಈ ನಡುವೆ ಶಂಶಾಬಾದ್ ಇನ್ಸ್‌ಪೆಕ್ಟರ್ ಶ್ರೀನಿವಾಸ್, ಅಪ್ಸರಾ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿದ್ದಾರೆ. 5ರಂದು ಬೆಳಗ್ಗೆ ಸಾಯಿಕೃಷ್ಣ, ಅಪ್ಸರಾ ತಾಯಿಯೊಂದಿಗೆ ಠಾಣೆಗೆ ಬಂದು ತಮ್ಮ ಸಂಬಂಧಿ ಅಪ್ಸರಾ ನಾಪತ್ತೆಯಾಗಿದ್ದಾರೆ ಅಂತ ಮಳ್ಳನಂತೆ ನಟಿಸಿ ದೂರು ನೀಡಿದ್ದ. ಈ ದೂರಿನ ಆಧಾರದ ಮೇಲೆ ತನಿಖೆ ನಡೆಸಲಾಗಿದ್ದು, ಅಸಲಿಯತ್ತು ಹೊರಬಿದ್ದಿದೆ. ದೂರಿನ ಪ್ರಕಾರ ಪೊಲೀಸರು ನಡೆಸಿದ ತನಿಖೆಯಲ್ಲಿ ಆರೋಪಿ ತಗ್ಲಾಕ್ಕೊಂಡಿದ್ದಾನೆ. ಸಾಯಿಕೃಷ್ಣ ಅಪ್ಸರಾಳನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.

ಅಪ್ಸರಾ ಭದ್ರಾಚಲಂಗೆ ಆಕೆಯ ಸ್ನೇಹಿತರೊಂದಿಗೆ ಹೋಗಿರುವುದಾಗಿ ವಿಷಯವನ್ನು ಮುಚ್ಚಿಡಲು ಸಾಯಿಕೃಷ್ಣ ಯತ್ನಿಸಿದ್ದಾನೆ. ಅಂದಿನಿಂದ ಅಪ್ಸರಾ ಫೋನ್ ಎತ್ತುತ್ತಿಲ್ಲ ಎಂದು ದೂರಿನಲ್ಲಿ ಸಾಯಿಕೃಷ್ಣ ತಿಳಿಸಿದ್ದ. ಜೂನ್​ 5 ರಂದು ಸಾಯಿಕೃಷ್ಣ ಪೊಲೀಸ್ ಠಾಣೆಗೆ ಹೋಗಿ ಅಪ್ಸರಾ ಕಾಣಿಸುತ್ತಿಲ್ಲ ಎಂದು ದೊಡ್ಡ ನಾಟಕವಾಡಲು ಆರಂಭಿಸಿದ್ದ. ಆದರೆ ಸಿಸಿಟಿವಿ ದೃಶ್ಯಾವಳಿ ಮತ್ತು ಕಾಲ್ ಡೇಟಾ ಆಧರಿಸಿ ಪೊಲೀಸರು ನಾಟಕಕ್ಕೆ ತೆರೆ ಎಳೆದಿದ್ದಾರೆ. ಅರ್ಚಕ ಸಾಯಿಕೃಷ್ಣನೇ ಹಂತಕ ಎಂದು ತೀರ್ಮಾನಿಸಿ ಹೆಡೆಮುರಿಕಟ್ಟಿದ್ದಾರೆ.

ಪೊಲೀಸರ ವಿಚಾರಣೆಯಲ್ಲಿ ಅಪ್ಸರಾಳ ಕಿರುಕುಳ ತಾಳಲಾರದೆ ಆಕೆಯನ್ನು ಕೊಂದಿರುವುದಾಗಿ ಸಾಯಿಕೃಷ್ಣ ತಪ್ಪೊಪ್ಪಿಕೊಂಡಿದ್ದಾನೆ. ವೃತ್ತಿಯಲ್ಲಿ ಅರ್ಚಕ, ಬಿಲ್ಡರ್​ ಆಗಿ ಕೆಲಸ ಮಾಡುತ್ತಿದ್ದ ಸಾಯಿಕೃಷ್ಣಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದು, ಆರೋಪಿ ಅಪ್ಸರಾ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ. ಅಪ್ಸರಾ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಇನ್ನಷ್ಟು ವಿಷಯಗಳು ಬೆಳಕಿಗೆ ಬರುವ ಸಾಧ್ಯತೆ ಇದೆ. ಇತ್ತ ಮಗಳನ್ನು ಕಳೆದುಕೊಂಡ ಅಪ್ಸರಾ ತಾಯಿಯ ಆಕ್ರಂದನ ಮಾತ್ರ ಮುಗಿಲುಮುಟ್ಟಿದೆ. ಒಟ್ಟಾರೆ ಮೊದಲ ಪತ್ನಿಗೆ ವಿಚ್ಛೇದನ ನೀಡಿ ನನ್ನನ್ನು ಮದುವೆಯಾಗುವಂತೆ ಪ್ರೇಯಸಿ ಒತ್ತಾಯಿಸಿದ್ದಕ್ಕೆ ಆಕೆಗೆ ಪಾಪಿ ಪ್ರಿಯಕರ ಪರಲೋಕದ ದಾರಿ ತೋರಿಸಿದ್ದು ದುರಂತ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರೇಯಸಿಯನ್ನು ಬರ್ಬರವಾಗಿ ಕೊಂದ ಅರ್ಚಕ; ‘ದೃಶ್ಯಂ’ ಚಿತ್ರವನ್ನೂ ಮೀರಿಸಿದ ಕೇಸ್

https://newsfirstlive.com/wp-content/uploads/2023/06/Accused-1.jpg

Load More