newsfirstkannada.com

ಅಯ್ಯಯ್ಯೋ! ಬಟ್ಟೆ ತೊಳೆಯಲು ಹೋಗಿದ್ದ ಮಹಿಳೆ ನೀರಿಗೆ ಬಿದ್ದು ಸಾವು

Share :

18-08-2023

    ಬಟ್ಟೆ ತೊಳೆದ ಜಾಗಕ್ಕೆ ಹೋದಾಗ ಪ್ರಕರಣ ಬೆಳಕಿಗೆ

    ಸೌಂದರ್ಯ (26) ನೀರಿನಲ್ಲಿ ಬಿದ್ದು ಮೃತಪಟ್ಟ ಮಹಿಳೆ

    ಗ್ರಾಮಾಂತರ ಪೊಲೀಸ್​​ ಅಧಿಕಾರಿಗಳಿಂದ ಪರಿಶೀಲನೆ

ತುಮಕೂರು: ಬಟ್ಟೆ ತೊಳೆಯಲು ಹೋಗಿದ್ದ ಮಹಿಳೆ ನೀರಿಗೆ ಬಿದ್ದು ಮೃತಪಟ್ಟಿರೋ ಘಟನೆ ತಿಮ್ಮನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸೌಂದರ್ಯ(26) ಮೃತ ಮಹಿಳೆ.

ಮೃತ ಮಹಿಳೆ ಊರ್ಡಿಗೆರೆ ಹೋಬಳಿ ತಿಮ್ಮನಾಯಕನಹಳ್ಳಿ ಗ್ರಾಮದಲ್ಲಿ ನಿವಾಸಿ. ಸೌಂದರ್ಯ ತಿಮ್ಮನಾಯಕನಹಳ್ಳಿಯ ತವರು ಮನೆಗೆ ಬಂದಿದ್ದರು. ಈ ವೇಳೆ ಗೋಕಟ್ಟೆಗೆ ಬಟ್ಟೆ ತೊಳೆಯಲು ಹೋಗಿದ್ದಾಗ ಈ ದುರಂತ ಸಂಭವಿಸಿದೆ.

ಮಹಿಳೆ ಮನೆಗೆ ವಾಪಸ್ ಬಾರದೇ ಇದ್ದ ಕಾರಣ ಗಂಡನ ಮನೆಗೆ ಹೋಗಿರಬೇಕು ಎಂದು ಕುಟುಂಬಸ್ಥರು ಭಾವಿಸಿದ್ದರು. ಆದರೆ ಅನುಮಾನಗೊಂಡ ಗ್ರಾಮಸ್ಥರು ಗೋಕಟ್ಟೆ ಬಳಿ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ತುಮಕೂರು ಗ್ರಾಮಾಂತರ ಪೊಲೀಸ್​​ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಯ್ಯಯ್ಯೋ! ಬಟ್ಟೆ ತೊಳೆಯಲು ಹೋಗಿದ್ದ ಮಹಿಳೆ ನೀರಿಗೆ ಬಿದ್ದು ಸಾವು

https://newsfirstlive.com/wp-content/uploads/2023/08/death-1-1.jpg

Load More