ಟಿಕೆಟ್ ಇಲ್ಲದೇ ಪ್ರಯಾಣಿಸಿದವರಿಗೆ ಸಾರಿಗೆ ಇಲಾಖೆ ಶಾಕ್
ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣ ಮಾಡೋ ಜನರೇ ಎಚ್ಚರ
ಟಿಕೆಟ್ ಪಡೆಯದೆ ಸಂಚಾರ ಮಾಡಿದ ಜನರೆಷ್ಟು..?
ಬೆಂಗಳೂರು: ಶಕ್ತಿ ಯೋಜನೆ ಜಾರಿಯಾಗಿ 2 ತಿಂಗಳು ತುಂಬುತ್ತಿದೆ. ಒಂದು ಕಡೆ ಬಸ್ ಫುಲ್ ರಶ್ ಆಗಿದ್ದರೆ, ಕೆಲ ಮಾರ್ಗಗಳಲ್ಲಿ ಬಸ್ ಸಂಚಾರವೇ ಇಲ್ಲದಂತಾಗಿದೆ. ಈ ಸಮಸ್ಯೆಯನ್ನ ಹೋಗಲಾಡಿಸಲು ಸಾರಿಗೆ ಇಲಾಖೆ ಈಗಾಗಲೇ 4 ಹೊಸ ಬಸ್ ಮಾರ್ಗಗಳಲ್ಲಿ ಬಸ್ ಸೇವೆಯನ್ನ ಆರಂಭಿಸಿದೆ. ವಿದ್ಯಾರಣ್ಯಪುರದಿಂದ ಲಗ್ಗೆರೆ ಮಾರ್ಗ ಸಂಖ್ಯೆ MF 28ರಲ್ಲಿ ಮೂರು ಬಸ್ಗಳ ಸೇವೆಯನ್ನು ಆರಂಭಿಸಿದೆ. ರಾಮಚಂದ್ರಪುರ, ಬಿ.ಇ.ಎಲ್ ವೃತ್ತ, ಹೆಚ್.ಎಂ.ಟಿ ಆಡಿಟೋರಿಯಂ ಮತ್ತು ಜಾಲಹಳ್ಳಿ ಕ್ರಾಸ್ ಮಾರ್ಗವಾಗಿ ಲಗ್ಗೆರೆ ತಲುಪಲಿದೆ.
K.R ಮಾರ್ಕೆಟ್ ಟು ವಿದ್ಯಾರಣ್ಯಪುರಕ್ಕೆ 276- ಇ ಹೊಸ ಮಾರ್ಗದಲ್ಲಿ 5 ಬಸ್ಗಳ ಸೇವೆಯನ್ನ ಆರಂಭಿಸಿದೆ. ಕೆಂಪೇಗೌಡ ಬಸ್ ನಿಲ್ದಾಣ, ಮಲ್ಲೇಶ್ವರಂ, ಮತ್ತಿಕೆರೆ ಮತ್ತು B.E.L ಸರ್ಕಲ್ ಮೂಲಕ ಬಸ್ಗಳು ಸಂಚರಿಸ್ತಿವೆ. ಯಶವಂತಪುರ ಟಿಟಿಎಂಸಿಯಿಂದ ನಾಯಂಡಹಳ್ಳಿ ಜಂಕ್ಷನ್ಗೆ 401 N.Y ಮಾರ್ಗ ಸಂಖ್ಯೆಯಲ್ಲಿ ಹೊಸದಾಗಿ 7 ಬಸ್ಗಳ ಸೇವೆಯನ್ನು ಆರಂಭಿಸಿದೆ. ಮಲ್ಲೇಶ್ವರಂ, ಮೋದಿ ಆಸ್ಪತ್ರೆ, ಹಾವನೂರು ಸರ್ಕಲ್, K.H.B ಕಾಲೋನಿ, ಸುಮನಹಳ್ಳಿ ಜಂಕ್ಷನ್, ನಾಗರಬಾವಿ ಸರ್ಕಲ್ ಮಾರ್ಗದಲ್ಲಿ ಬಸ್ ಸಂಚರಿಸ್ತಿವೆ. ಇನ್ನು, 500 ಕ್ಯೂ.ಎ ಮಾರ್ಗದಲ್ಲಿ ಗೊರಗುಂಟೆಪಾಳ್ಯದಿಂದ ಹೆಬ್ಬಾಳ ಮಾರ್ಗವಾಗಿ ಕೆ.ಆರ್ ಪುರ ಮೆಟ್ರೋ ಸ್ಟೇಷನ್ವರೆಗೆ 11 ಬಸ್ಗಳ ಸೇವೆ ಆರಂಭಿಸಿದೆ. ಹೆಬ್ಬಾಳ, ಟಿನ್ ಫ್ಯಾಕ್ಟರಿ ಮಾರ್ಗದಲ್ಲಿ ಈ ಬಸ್ಗಳು ಸಂಚರಿಸ್ತಿವೆ. ಇನ್ನು ಬಿಎಂಟಿಸಿ ಬಸ್‌ಗಳಲ್ಲಿ ಟಿಕೆಟ್ ರಹಿತ ಪ್ರಯಾಣಿಸಿದವರಿಗೆ ಸಾರಿಗೆ ಇಲಾಖೆ ದಂಡದ ಬಿಸಿ ನೀಡಿದೆ.
ಸಾರಿಗೆ ಇಲಾಖೆ ಜೂನ್ ತಿಂಗಳಲ್ಲಿ ಟಿಕೆಟ್ ರಹಿತವಾಗಿ ಪ್ರಯಾಣಿಸಿದ 2,627 ಪ್ರಯಾಣಿಕರಿಗೆ ದಂಡ ವಿಧಿಸಿದೆ. ಕಳೆದ ಜೂನ್ ತಿಂಗಳಲ್ಲಿ 13 ಸಾವಿರದ 196 ಟ್ರಿಪ್‌ಗಳನ್ನು ತಪಾಸಣೆ ನಡೆಸಲಾಗಿತ್ತು. ಈ ವೇಳೆ ಟಿಕೆಟ್ ಪಡೆಯದೇ ಪ್ರಯಾಣಿಸುತ್ತಿದ್ದ 2 ಸಾವಿರದ 627 ಪ್ರಯಾಣಿಕರು ಪತ್ತೆಯಾಗಿದ್ದರು. ಅವರಿಂದ 5 ಲಕ್ಷದ 19 ಸಾವಿರದ 60 ರೂಪಾಯಿ ದಂಡ ವಸೂಲಿ ಮಾಡಲಾಯಿತು. ಅಲ್ಲದೆ ಕರ್ತವ್ಯ ಲೋಪವೆಸಗಿದ ಕಾರಣಕ್ಕಾಗಿ ಸಂಸ್ಥೆಯ ಒಂದು ಸಾವಿರದ 5 ನಿರ್ವಾಹಕರ ವಿರುದ್ಧ ಪ್ರಕರಣವೂ ದಾಖಲು ಮಾಡಲಾಗಿದೆ. ಇನ್ನು ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ 328 ಮಂದಿ ಪುರುಷರು ಕುಳಿತು ಸಂಚರಿಸಿದ್ದರಿಂದ 32ಸಾವಿರದ 800 ರೂಪಾಯಿ ದಂಡ ವಿಧಿಸಲಾಗಿದೆ. ಒಟ್ಟಾರೆ, ಜನರಿಗೆ ಹೊರೆಯಾಗದಂತೆ ಬಿಎಂಟಿಸಿ ಇಟ್ಟಿರೋ ಈ ಹೆಜ್ಜೆ. ಪ್ರಯಾಣಿಕರ ಸಮಸ್ಯೆಗೆ ಇತಿಶ್ರೀ ಹಾಡುತ್ತಾ ಅನ್ನೋದೇ ಯಕ್ಷ ಪ್ರಶ್ನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ