newsfirstkannada.com

ಪುಷ್ಪಾ ಶ್ರೀವಲ್ಲಿಗೆ ಫೈರ್‌! ರಶ್ಮಿಕಾ ಮಂದಣ್ಣ ವಿರುದ್ಧ ಹೇಳಿಕೆ ನೀಡಿ ತಗ್ಲಾಕೊಂಡ ಸ್ಟಾರ್ ನಟಿ

Share :

19-05-2023

  ‘ಪುಷ್ಪ’ ಚಿತ್ರದ ಶ್ರೀವಲ್ಲಿ ಪಾತ್ರಕ್ಕೆ ಸವಾಲ್

  ನ್ಯಾಶನಲ್‌ ಕ್ರಶ್‌ ನಟಿಗೆ ಕಿರಿಕ್ ಪಾರ್ಟಿ!

  ಕೊಡಗಿನ ಕುವರಿಯನ್ನ ಕೆಣಕಿದ್ದು ಯಾಕೆ?

‘ಪುಷ್ಪ’ ಚಿತ್ರದ ಶ್ರೀವಲ್ಲಿ ಪಾತ್ರವನ್ನು ನಾನು ರಶ್ಮಿಕಾಗಿಂತ ಬೆಟರ್ ಆಗಿ ಮಾಡ್ತಿದ್ದೆ ಎಂದು ತೆಲುಗು ನಟಿ ಐಶ್ವರ್ಯಾ ರಾಜೇಶ್​​ ಹೇಳಿ ವಿವಾದಕ್ಕೆ ಸಿಲುಕಿಕೊಂಡಿದ್ದಾರೆ. ಅವರು ಕೊಟ್ಟ ಹೇಳಿಕೆಯು ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗೆ ಗುರಿಯಾಗಿತ್ತು. ಇದೀಗ ಐಶ್ವರ್ಯ ರಾಜೇಶ್, ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

‘ನನ್ನ ಹೇಳಿಕೆಯನ್ನು ತಿರುಚಲಾಗಿದೆ. ತೆಲುಗು ಸಿನಿಮಾರಂಗದಲ್ಲಿ ಎಂಥ ಪಾತ್ರಗಳನ್ನ ಮಾಡೋಕೆ ಇಷ್ಟ ಎಂದು ನಾನು ಹೇಳಿದ್ದೆ. ಅದಕ್ಕೆ ಉದಾಹರಣೆಯಾಗಿ ಪುಷ್ಪಾ ಚಿತ್ರದ ಶ್ರೀವಲ್ಲಿ ಅಂತಹ ಪಾತ್ರಗಳು ನನಗೆ ಸೂಕ್ತವಾಗುತ್ತೆ ಎಂಬರ್ಥದಲ್ಲಿ ಮಾತನಾಡಿದ್ದೆ ಎಂದು ಐಶ್ವರ್ಯ ಸಮಜಾಯಿಸಿ ಹೇಳಿದ್ದಾರೆ.

ಮಾತ್ರವಲ್ಲ, ರಶ್ಮಿಕಾ ಮಂದಣ್ಣರ ಬಗ್ಗೆ ಮಾತನಾಡಿ, ಅವರ (ರಶ್ಮಿಕಾ) ಹಾರ್ಡ್​ವರ್ಕ್​ ಮತ್ತು ಕೆಲಸದ ಬಗ್ಗೆ ನನಗೆ ಹೆಮ್ಮೆ ಇದೆ’ ಎಂದಿದ್ದಾರೆ. ನಟಿ ಐಶ್ವರ್ಯಾ ರಾಜೇಶ್ ಅವರ ಹೇಳಿಕೆಯನ್ನು ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಕೆಲವರು ಟ್ರೋಲ್​ ಮಾಡುತ್ತಿದ್ದಾರೆ. ಹೀಗಾಗಿ ಅವರು ನೀಡಿದ ಹೇಳಿಕೆಯ ಬೆನ್ನಲ್ಲೇ ನಟಿಯ​ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ. ನಟಿ ಐಶ್ವರ್ಯಾ ರಾಜೇಶ್​ ಅವರು ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಚಿತ್ರಪ್ರೇಮಿಗಳೇ’ ಪ್ರತಿದಿನ ಸಂಜೆ 5.27ಕ್ಕೆ ನಿಮ್ಮ ನ್ಯೂಸ್‌ ಫಸ್ಟ್‌ ಚಾನೆಲ್​ನಲ್ಲಿ ಲಭ್ಯ

ಪುಷ್ಪಾ ಶ್ರೀವಲ್ಲಿಗೆ ಫೈರ್‌! ರಶ್ಮಿಕಾ ಮಂದಣ್ಣ ವಿರುದ್ಧ ಹೇಳಿಕೆ ನೀಡಿ ತಗ್ಲಾಕೊಂಡ ಸ್ಟಾರ್ ನಟಿ

https://newsfirstlive.com/wp-content/uploads/2023/05/Rashmika-Mandanna.jpg

Load More