ಒಂದೇ ಎಸೆತಕ್ಕೆ 286 ರನ್
ಕ್ರಿಕೆಟ್ ಲೋಕದಲ್ಲಿ ಯಾರು ಮಾಡದ ದಾಖಲೆ
ಇದು ಇಂದು ನಿನ್ನೆಯ ಕಥೆಯಲ್ಲ
ಕಿಕ್ರೆಟ್ ಅಂದರೆ ಅದೊಂದು ವಿಭಿನ್ನ ಆಟ. ಜಗದ ಉದ್ದಗಲಕ್ಕೂ ಇದನ್ನು ಕಣ್ತುಂಬಿಕೊಳ್ಳುವ ಮತ್ತು ಈ ಆಟವನ್ನು ಇಷ್ಟಪಡುವ ಅಭಿಮಾನಿಗಳಿದ್ದಾರೆ. ಅಂದಹಾಗೆಯೇ ಈ ವಿಭಿನ್ನ ಆಟದಲ್ಲಿ ಸಾಕಷ್ಟು ದಾಖಲೆಗಳು ಸೃಷ್ಠಿಯಾಗಿವೆ. ಆದರೆ ಕೆಲವೊಂದು ನಂಬಿಕೆ ಅರ್ಹವಾದರೆ ಇನ್ನೂ ಕೆಲವು ನಂಬಲಸಾಧ್ಯವಾದ ದಾಖಲೆಗಳಿವೆ. ಆದರೆ ಕ್ರಿಕೆಟ್ ಲೋಕದಲ್ಲಿ ಯಾರು ಮಾಡದ ದಾಖಲೆಯೊಂದರ ಬಗ್ಗೆ ಈ ಸ್ಟೋರಿ ಇದೆ. ಅದೇನು ಗೊತ್ತಾ? ಒಂದೇ ಎಸೆತಕ್ಕೆ 286 ರನ್ ಬಾರಿಸಿದ ದಾಖಲೆ!.
ಮೊದಲೇ ಹೇಳಿದಂತೆ ಕ್ರಿಕೆಟ್ನಲ್ಲಿ ಆರು ಎಸೆತಕ್ಕೆ ಆರು ಸಿಕ್ಸ್ ಬಾರಿಸಿದ ದಾಂಡಿಗರು ಇದ್ದಾರೆ. ಒಂದು ಬಾಲ್ಗೆ 19 ರನ್ ಕೊಟ್ಟವರು ಇದ್ದಾರೆ. ಆದರೆ ಒಂದೇ ಎಸೆತಕ್ಕೆ 286 ರನ್ ಕೊಟ್ಟವರು ಇದ್ದಾರೆ ಎಂದರೆ ನಂಬುತ್ತೀರಾ? ನಂಬಲೇ ಬೇಕು.
ಸದ್ಯ 16ನೇ ಆವೃತ್ತಿಯ ಐಪಿಎಲ್ ನಡೆಯುತ್ತಿದೆ. ಹಾಗಾಗಿ ಈ ಸುದ್ದಿ ಕೊಂಚ ಇಂಟ್ರಸ್ಟಿಂಗ್ ಆಗಿದೆ. ಅಂದಹಾಗೆಯೇ ಒಂದೇ ಎಸೆತಕ್ಕೆ 286 ರನ್ ಬಾರಿಸಿದ ಘಟನೆ ನಡೆದದ್ದು, ಇಂದು ನಿನ್ನೆಯಲ್ಲ. ಜನವರಿ 15, 1894ರಲ್ಲಿ ಈ ಘಟನೆ ನಡೆದಿದೆ.
ಪಶ್ಚಿಮ ಆಸ್ಟ್ರೇಲಿಯಾ ಮತ್ತು ವಿಕ್ಟೋರಿಯಾ ತಂಡಗಳ ನಡುವೆ ನಡೆದ ಸ್ಕ್ರಾಚ್ ಇಲೆವನ್ ಪಂದ್ಯದಲ್ಲಿ ಈ ಘಟನೆ ನಡೆದಿದೆ. ಒಂದು ಎಸೆತಕ್ಕೆ 286 ರನ್ ಪೇರಿಸಲಾಗಿತ್ತು ಎಂದು ಪತ್ರಿಕೆಯೊಂದು ಈ ಬಗ್ಗೆ ವರದಿಯನ್ನು ಮಾಡಿತ್ತು.
ಇದು ಹೇಗೆ ಸಾಧ್ಯ?
ಸ್ಕ್ರಾಚ್ ಇಲೆವನ್ ಪಂದ್ಯದಲ್ಲಿ ವಿಕ್ಟೋರಿಯಾ ಟೀಮ್ ಬ್ಯಾಟಿಂಗ್ ಮಾಡುತ್ತಾರೆ. ಈ ವೇಳೆ ಎದುರಾಳಿ ಎಸೆದ ಚೆಂಡು ಮೈದಾನದ ಒಳಗಿದ್ದ ಜರಾಹ್ ಎಂಬ ಮರದ ಕೊಂಬೆಯಲ್ಲಿ ಸಿಲುಕಿಕೊಳ್ಳುತ್ತದೆ. ಇದೇ ಉತ್ತಮ ಅವಕಾಶವೆಂದುಕೊಂಡ ವಿಕ್ಟೋರಿಯಾ ತಂಡ ರನ್ ಪೇರಿಸಲು ಓಡುತ್ತಾರೆ. ಹೀಗೆ ಓಡುತ್ತಾ 286 ರನ್ಗಳನ್ನು ಕಲೆಹಾಕಿದ್ದರು ಎಂದು ಹೇಳಲಾಗುತ್ತಿದೆ.
ಕೆಲವರು ಈ ಘಟನೆ ನಿಜವಾಗಿ ನಡೆದಿದೆ ಎನ್ನುತ್ತಾರೆ. ಇನ್ನು ಕೆಲವರು ಕಥೆ ಎನ್ನುತ್ತಾರೆ. ಅದರಂತೆ ಲಂಡನ್ ಮೂಲದ ಇಂಗ್ಲೀಷ್ ಭಾಷೆಯಲ್ಲಿ ಪ್ರಕಟವಾಗುತ್ತಿದ್ದ ಪಾಲ್ ಮಾಲ್ ಗ್ಯಾಜೆಟ್ 1865ರಲ್ಲಿ ಇದರ ಬಗ್ಗೆ ಉಲ್ಲೇಖಿಸಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ