newsfirstkannada.com

14 ಹುಡುಗರಲ್ಲಿ ನಾನು ಯಾರನ್ನ ಮದ್ವೆ ಆಗಲಿ.. 29 ವರ್ಷದ ಹುಡುಗಿ ಕೇಳಿದ ಪ್ರಶ್ನೆಗೆ ಎಲ್ರೂ ಕನ್ಫ್ಯೂಸ್

Share :

18-07-2023

    ನನಗೂ ಒಬ್ಬ ಗೆಳೆಯ ಬೇಕು ಸಹಾಯ ಮಾಡಿ ಎಂದ ಹುಡುಗಿ

    14 ಹುಡುಗರಿಗೂ ಲಕ್ಷ, ಲಕ್ಷ ಸಂಬಳ ಬರುತ್ತೆ ಯಾರು ಬೆಸ್ಟ್‌?

    ದಯವಿಟ್ಟು ನೀವೇ ಹೇಳಿ ನಾನು ಯಾರನ್ನ ಆಯ್ಕೆ ಮಾಡಲಿ

ಮದುವೆ ಆಗ್ತೀನಿ ಅನ್ನೋ ಹುಡುಗರಿಗೆ ಸರಿಯಾಗಿ ಹುಡುಗಿಯರು ಸಿಗ್ತಿಲ್ಲ. ಹೆಣ್ಣು ಸಿಗದೇ ಎಷ್ಟೋ ಹುಡುಗರು ಬ್ರಹ್ಮಚಾರಿಗಳಾಗೇ ಉಳಿಯುತ್ತಿದ್ದಾರೆ. ಅಂತಹದರಲ್ಲಿ 29 ವರ್ಷದ ಯುವತಿಯೊಬ್ಬಳು ಸೋಷಿಯಲ್ ಮೀಡಿಯಾದಲ್ಲಿ 14 ಯುವಕರ ಪಟ್ಟಿ ಕೊಟ್ಟು ನಾನು ಯಾರನ್ನ ಮದುವೆ ಆಗ್ಲಿ ನೀವೇ ಹೇಳಿ ಎಂದು ಕೇಳುತ್ತಿದ್ದಾಳೆ. ಯುವತಿ ಕೇಳಿರೋ ಪ್ರಶ್ನೆಗೆ ಎಲ್ರೂ ಡಿಸೈನ್, ಡಿಸೈನ್ ಉತ್ತರ ಕೊಡುತ್ತಿದ್ದಾರೆ. ಟ್ವಿಟರ್‌ನಲ್ಲಿ ಈ ಹುಡುಗಿ ಹಾಕಿರೋ ಸವಾಲು ನಿಜಕ್ಕೂ ಗುಲ್ಲೆಬ್ಬಿಸಿದೆ.

ಅಷ್ಟಕ್ಕೂ 29 ವರ್ಷದ ಆ ಯುವತಿ ಹಾಕಿರೋ ಪ್ರಶ್ನೆ ಇಷ್ಟೇ. ನಾನು ಬಿಕಾಂ ಓದಿದ್ದೇನೆ ನನಗಿನ್ನೂ ಯಾವುದೇ ಕೆಲಸ ಸಿಕ್ಕಿಲ್ಲ. ಮ್ಯಾಟ್ರಿಮೋನಿಯೊಂದರಲ್ಲಿ ನನ್ನ ಪ್ರೊಫೈಲ್ ಹಾಕಿದ್ದು 14 ಹುಡುಗರ ಜೊತೆ ಮಾತನಾಡಿದ್ದೇನೆ. ಆ 14 ಹುಡುಗರ ಸಂಬಳ, ವಿಳಾಸದ ವಿವರ ಇಲ್ಲಿದೆ. ಇಷ್ಟಾದ್ರೂ ನಾನು ಗೊಂದಲದಲ್ಲಿದ್ದೇನೆ. ದಯವಿಟ್ಟು ನೀವೇ ಹೇಳಿ ನಾನು ಈ 14 ಹುಡುಗರಲ್ಲಿ ಯಾರನ್ನ ಆಯ್ಕೆ ಮಾಡಲಿ ಎಂದು ಕೇಳಿದ್ದಾರೆ.

ಮದುವೆ ಆಗಲು ರೆಡಿಯಾಗಿರೋ ಹುಡುಗಿ ಹಂಚಿಕೊಂಡಿರೋ 14 ಹುಡುಗರ ಪೈಕಿ ಎಲ್ಲರೂ 29 ವರ್ಷದ 35 ವಯಸ್ಸಿನ ಒಳಗಿನವರು. ಒಬ್ಬೊಬ್ಬರು ವರ್ಷಕ್ಕೆ ಬರೋಬ್ಬರಿ 20 ರಿಂದ 45 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ಬೆಂಗಳೂರು, ಮುಂಬೈ, ಕೊಲ್ಕತ್ತಾ, ಪುಣೆ, ಹೈದರಾಬಾದ್, ದೆಹಲಿ ಹೀಗೆ ದೇಶದ ಪ್ರಮುಖ ನಗರಗಳಲ್ಲಿ ನೆಲೆಸಿದ್ದಾರೆ. ಒಬ್ಬರ ಎತ್ತರ 5.5 ಅಡಿ ಅಂತಾ ಬರೆದಿದ್ರೆ ಮತ್ತೊಬ್ಬರ ತಲೆಯಲ್ಲಿ ಕೂದಲಿಲ್ಲ ಎಂದು ಬರೆಯಲಾಗಿದೆ. ಈ 14 ಹುಡುಗರಲ್ಲಿ ನಾನು ಯಾರನ್ನು ಆಯ್ಕೆ ಮಾಡಲಿ ಅನ್ನೋದು ಹುಡುಗಿಯ ಕಟ್ಟ ಕಡೆಯ ಪ್ರಶ್ನೆಯಾಗಿದೆ.

ನೆಟ್ಟಿಗರು ಕೊಟ್ಟಿದ್ದು ಡಿಫರೆಂಟ್ ಆನ್ಸರ್‌!

14 ಹುಡುಗರಲ್ಲಿ ಯಾರು ಬೆಸ್ಟ್ ಅನ್ನೋ ಈ ಪ್ರಶ್ನೆಯೇ ಸೋಷಿಯಲ್ ಮೀಡಿಯಾದಲ್ಲಿ ಗುಲ್ಲೆಬ್ಬಿಸಿದೆ. ಸಖತ್ ತಲೆಕೆಡಿಸಿಕೊಂಡಿರೋ ನೆಟ್ಟಿಗರು ಡಿಸೈನ್, ಡಿಸೈನ್ ಆನ್ಸರ್‌ಗಳನ್ನು ಕೊಟ್ಟಿದ್ದಾರೆ. ನೀವು ಅರೆಂಜ್ಡ್‌ ಮ್ಯಾರೇಜ್ ಆಗ್ತಿರೋದು ಖುಷಿಯ ವಿಚಾರ ಅಂತಾ ಕೆಲವರು ಹೇಳಿದ್ರೆ, ಹಲವರು ನೀವು ಗಂಡು ಮಕ್ಕಳಿಗೆ ಅವಮಾನ ಮಾಡ್ತಿದ್ದೀರಾ ಎಂದು ಕಿಡಿಕಾರಿದ್ದಾರೆ. ಇನ್ನು ಹಲವರು ಮಾರ್ಕೆಟ್‌ನಲ್ಲಿ ಹುಡುಗಿಯರಿಗೆ ಸಖತ್‌ ಡಿಮ್ಯಾಂಡ್ ಇದೆ ತೋರಿಸಿಕೊಳ್ಳುತ್ತಿದ್ದೀರಾ ಎಂದು ಕಿಡಿಕಾರಿದ್ದಾರೆ. ಇದೊಂದು ಫೇಕ್ ಅಂತಲೂ ಕೆಲವರು ಸ್ಕ್ರೀನ್‌ ಶಾಟ್‌ಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

14 ಹುಡುಗರಲ್ಲಿ ನಾನು ಯಾರನ್ನ ಮದ್ವೆ ಆಗಲಿ.. 29 ವರ್ಷದ ಹುಡುಗಿ ಕೇಳಿದ ಪ್ರಶ್ನೆಗೆ ಎಲ್ರೂ ಕನ್ಫ್ಯೂಸ್

https://newsfirstlive.com/wp-content/uploads/2023/07/29-Year-Girl.jpg

Load More