newsfirstkannada.com

ಮೊರಾಕೊದಲ್ಲಿ ತಡರಾತ್ರಿ ಪ್ರಬಲ ಭೂಕಂಪ.. 296 ಜನ ಸಾವು, ಸಾವಿರಾರು ಮಂದಿ ಗಂಭೀರ..!

Share :

Published September 9, 2023 at 8:53am

Update September 9, 2023 at 9:02am

    ಭೂಕಂಪದಿಂದ ಇನ್ನು ಸಾವಿನ ಸಂಖ್ಯೆ ಹೆಚ್ಚಾಗುವ ಸಂಭವ, ಆತಂಕ.!

    ರಾತ್ರೋ ರಾತ್ರಿ ಮನೆಗಳನ್ನ ಕಳೆದುಕೊಂಡು ಭಯದಲ್ಲಿ ಬೀದಿಗೆ ಬಂದ ಜನ

    ಭೂಕಂಪದಿಂದ ಕಟ್ಟಡದ ಅಡಿಯಲ್ಲಿ ಜನರು ಸಿಲುಕಿರವ ಅನುಮಾನ

ರಬತ್: ಶುಕ್ರವಾರ ತಡರಾತ್ರಿ ಮೊರಾಕೊದಲ್ಲಿ 6.8 ತೀವ್ರತೆಯ ಪ್ರಬಲ ಭೂಕಂಪ ಆಗಿದ್ದರಿಂದ ಸುಮಾರು 296 ಜನರು ಸಾವನ್ನಪ್ಪಿದ್ದು ಸಾವಿರಾರು ಜನರು ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

US ಭೂ ವೈಜ್ಞಾನಿಕ ಸಮೀಕ್ಷೆ ಪ್ರಕಾರ ತಡರಾತ್ರಿ ಮೊರೊಕಾದಲ್ಲಿ ಭೂಕಂಪವು ಮರಕೇಶ್‌ನ ನೈಋತ್ಯಕ್ಕೆ 71 ಕಿಲೋ ಮೀಟರ್ ವೇಗದಲ್ಲಿ 18.5 ಕಿಲೋಮೀಟರ್ ಆಳದಲ್ಲಿ ರಾತ್ರಿ 11:11ಕ್ಕೆ ಅಪ್ಪಳಿಸಿದೆ. ಇದರಿಂದ ಸುಮಾರು 6.8 ತೀವ್ರತೆಯ ಪ್ರಬಲ ಭೂಕಂಪದಿಂದ 296 ಜನರು ಸಾವನ್ನಪ್ಪಿದ್ದು ಸಾವಿರಾರು ಜನರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಮನೆಗಳು, ಕಟ್ಟಡಗಳು, ಅಪಾರ್ಟ್​ಮೆಂಟ್​ಗಳು ನೆಲಸಮವಾಗಿದ್ದು ಕಟ್ಟಡದ ಅಡಿಯಲ್ಲಿ ಇನ್ನು ಜನರು ಸಿಲುಕಿರಬಹುದು ಎಂದು ಅನುಮಾನ ವ್ಯಕ್ತಪಡಿಸಲಾಗಿದೆ. ಇದರಿಂದ ಸಾವಿನ ಸಂಖ್ಯೆ ಇನ್ನು ಹೆಚ್ಚಾಗುವ ಸಂಭವವಿದೆ ಎಂದು ಹೇಳಲಾಗುತ್ತಿದೆ.

ರಾತ್ರೋ ರಾತ್ರಿ ಭೂಕಂಪ ಸಂಭವಿಸಿದ್ದರಿಂದ ಭಯಭೀತರಾದ ಜನರು ನಿದ್ದೆಯಿಂದ ಎದ್ದು ರಸ್ತೆಗೆ ಬಂದಿದ್ದಾರೆ. ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ ಎಲ್ಲರೂ ರಾತ್ರಿ ರಸ್ತೆ ಬದಿಯೇ ಸಮಯ ಕಳೆದಿದ್ದಾರೆ. ಇನ್ನು ಭೂಕಂಪನದಿಂದ ಆಗಿರುವ ಹಾನಿಯ ಬಗ್ಗೆ ಅಧಿಕಾರಿಗಳು ವರದಿ ನೀಡಬೇಕಿದೆ ಎನ್ನಲಾಗಿದೆ. ಲೆಕ್ಕಾಚಾರ ಮಾಡಬೇಕಾಗಿದೆ. ಕರಾವಳಿ ನಗರಗಳಾದ ರಬತ್, ಕಾಸಾಬ್ಲಾಂಕಾ ಮತ್ತು ಎಸ್ಸೌಯಿರಾಗಳಲ್ಲಿ ಭೂಕಂಪನದ ಅನುಭವವಾಗಿದೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೊರಾಕೊದಲ್ಲಿ ತಡರಾತ್ರಿ ಪ್ರಬಲ ಭೂಕಂಪ.. 296 ಜನ ಸಾವು, ಸಾವಿರಾರು ಮಂದಿ ಗಂಭೀರ..!

https://newsfirstlive.com/wp-content/uploads/2023/09/Moroccan.jpg

Load More