newsfirstkannada.com

ಟೀಮ್​ನಲ್ಲಿ ಚಾನ್ಸ್​ ಕೊಟ್ಟರೂ ಆಡ್ತಿಲ್ಲ ಯಂಗ್​ಸ್ಟರ್ಸ್​.. ಸೂರ್ಯ​, ಹಾರ್ದಿಕ್​ ಪಾಂಡ್ಯ ಬ್ಯಾಟಿಂಗ್​ ವೈಫಲ್ಯ

Share :

30-07-2023

    ವಿಶ್ವಕಪ್​ ಟೂರ್ನಿಗೂ ಮೊದಲೇ ಯುವ ಆಟಗಾರರ ವೈಫಲ್ಯ

    ಬ್ಯಾಟಿಂಗ್ ಲೈನ್ ತಪ್ಪಿದ ಸೂರ್ಯ, ಗಿಲ್​, ಸಂಜು ಸ್ಯಾಮ್ಸನ್..!

    ಟೆಸ್ಟಿಂಗ್​ ಟೈಮ್​’ನಲ್ಲಿ ಅವಕಾಶ ಕಳೆದುಕೊಳ್ಳುತ್ತಾರಾ ಇವರು?

ಕೊಟ್ಟ ಕುದುರೆ ಏರಲಾರದವನು ವೀರನೂ ಅಲ್ಲ, ಶೂರನೂ ಅಲ್ಲ. ಅನ್ನೋ ಮಾತು ಟೀಮ್​ ಇಂಡಿಯಾದ ಈ ಆಟಗಾರರಿಗೆ ಪರ್ಫೆಕ್ಟ್​ ಆಗಿದೆ. ಎಲ್ರೂ, ವಿಶ್ವಕಪ್​ ತಂಡದ ಸ್ಥಾನ ಸೀಲ್​ ಮಾಡಿಕೊಳ್ಳೋ ಸರ್ಕಸ್​​ನಲ್ಲಿದ್ರೆ, ಇವ್ರು ನಮಗೆ ಸ್ಥಾನವೇ ಬೇಡ ಎಂದು ನಿರ್ಧರಿಸಿದಂತಿದೆ.

ಇಂಡೋ- ವಿಂಡೀಸ್​ ಏಕದಿನ ಸರಣಿ ಹಲ ಪ್ರಯೋಗಗಳಿಗೆ ಸಾಕ್ಷಿಯಾಗ್ತಿದೆ. ಮೊದಲ ಪಂದ್ಯದಲ್ಲಿ ಬ್ಯಾಟಿಂಗ್​ ಆರ್ಡರ್​ನಲ್ಲಿ ಬದಲಾವಣೆಯಾದ್ರೆ, 2ನೇ ಪಂದ್ಯದಲ್ಲಿ ಇಡೀ ತಂಡವೇ ಬದಲಾಯಿತು. ಬೆಂಚ್​​ ಸ್ಟ್ರೆಂಥ್​​ನ ಸಾಮರ್ಥ್ಯ ಚೆಕ್​ ಮಾಡೋಕೆ ಮ್ಯಾನೇಜ್​ಮೆಂಟ್​ ಮುಂದಾಯಿತು.

ಶುಭ್​ಮನ್ ಗಿಲ್, ಇಶನ್ ಕಿಶನ್

ಟೆಸ್ಟಿಂಗ್​ ಟೈಮ್​ನಲ್ಲಿ ಚಾನ್ಸ್​ ಗಿಟ್ಟಿಸಿಕೊಂಡವರು ಫೇಲ್​.!

ವಿಶ್ವಕಪ್​ಗೂ ಮುನ್ನ ಭಾರತಕ್ಕೆ 11 ಏಕದಿನ ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. ಈ ಪಂದ್ಯಗಳಲ್ಲಿ ಪ್ರಮುಖವಾಗಿ ಪರ್ಫೆಕ್ಟ್​ ಬ್ಯಾಟಿಂಗ್​ ಲೈನ್​ ಅಪ್​ ಫೈನಲ್​ ಮಾಡಿಕೊಳ್ಳೋದು ಮ್ಯಾನೇಜ್​ಮೆಂಟ್​ನ ಲೆಕ್ಕಾಚಾರ. ಹೀಗಾಗಿ ನಿನ್ನೆಯ ಪಂದ್ಯಗಳಲ್ಲಿ ಯಂಗ್​ಸ್ಟರ್ಸ್​​ಗೆ ಬ್ಯಾಟಿಂಗ್​ನಲ್ಲಿ ಅವಕಾಶ ನೀಡಲಾಯಿತು. ಆದ್ರೆ, ಈ ‘ಟೆಸ್ಟಿಂಗ್​ ಟೈಮ್​’ನಲ್ಲಿ ಅವಕಾಶ ಗಿಟ್ಟಿಸಿಕೊಂಡವರು ಆಗಿದ್ದು ಫೇಲ್​.

ಮುಂದುವರೆದ ಶುಭ್​ಮನ್​ ಗಿಲ್​ ವೈಫಲ್ಯ.!

ನಿನ್ನೆಯ ಪಂದ್ಯಕ್ಕೂ ಮುನ್ನ ಶುಭ್​ಮನ್​ ಗಿಲ್​ ಸಾಮರ್ಥ್ಯದ ಬಗ್ಗೆ ತೀವ್ರ ಚರ್ಚೆಯಾಗಿತ್ತು. ಅದರ ನಡುವೆ ಸ್ಥಾನ ಗಿಟ್ಟಿಸಿಕೊಂಡ ಶುಭ್​ಮನ್​, ಎಚ್ಚರಿಕೆಯ ಆರಂಭವನ್ನೇ ಮಾಡಿದ್ರು. ಆದ್ರೆ, ಬಿಗ್​​ಸ್ಕೋರ್​ ಕಲೆ ಹಾಕುವಲ್ಲಿ ಎಡವಿದ್ರು. ಈ ಫೇಲ್ಯೂರ್​ ವಿಶ್ವಕಪ್​ ಸ್ಥಾನಕ್ಕೆ ಕುತ್ತು ತಂದಿದೆ.

ಸಂಜು ಸ್ಯಾಮ್ಸನ್​ಗೆ ಇನ್ನೆಷ್ಟು ಚಾನ್ಸ್​ ಬೇಕು..?

ಸಂಜು ಸ್ಯಾಮ್ಸನ್​ಗೆ ಸ್ಥಾನ ನೀಡಲ್ಲ ಅಂತಾ ಸಿಕ್ಕಾಪಟ್ಟೆ ಚರ್ಚೆಯಾಗುತ್ತೆ.. ಆದ್ರೆ, ಸ್ಥಾನ ಸಿಕ್ಕಾಗ ಸ್ಯಾಮ್ಸನ್​​ ಪರ್ಫಾಮ್​ ಮಾಡ್ತಿಲ್ಲ.. ನಿನ್ನೆಯ ಪಂದ್ಯದಲ್ಲೂ ಚಾನ್ಸ್​ ಗಿಟ್ಟಿಸಿಕೊಂಡ ಸಂಜು, 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ್ರು. ಸಾಲಿಡ್​ ಇನ್ನಿಂಗ್ಸ್​ ಕಟ್ಟೋಕೆ ಟೈಮ್ ಇತ್ತು. ಓವರ್​ಗಳೂ​ ಕೂಡ ಇತ್ತು. ಆದ್ರೆ, ಕೇವಲ 9 ರನ್​ಗೆ ಸಂಜು ಆಟವೇ ಅಂತ್ಯವಾಯಿತು.

ಮ್ಯಾನೇಜ್​ಮೆಂಟ್​ಗೆ ತಲೆ ನೋವಾದ ಹಾರ್ದಿಕ್​.!

ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯ ಪರ್ಫಾಮೆನ್ಸ್​ ಕೂಡ ಮ್ಯಾನೇಜ್​ಮೆಂಟ್​ ತಲೆ ನೋವಾಗಿದೆ. ಮೊದಲ ಏಕದಿನದಲ್ಲಿ 5 ರನ್​ಗಳಿಗೆ ಆಟ ಮುಗಿಸಿದ್ದ ಪಾಂಡ್ಯ, 2ನೇ ಏಕದಿನದಲ್ಲಿ 7 ರನ್​ಗಳಿಗೆ ಆಟ ಮುಗಿಸಿದ್ರು. ಈ ಎರಡು ಇನ್ನಿಂಗ್ಸ್​ ಮಾತ್ರವಲ್ಲ.. ಈ ವರ್ಷದಲ್ಲಿ ಹಾರ್ದಿಕ್​​ ಆಡಿರೋ 9 ಇನ್ನಿಂಗ್ಸ್​ಗಳ ಸರಾಸರಿ ಕೇವಲ 23.33.

ಉಮ್ರಾನ್ ಮಲಿಕ್, ಶಾರ್ದುಲ್ ಠಾಕೂರ್, ಇಶನ್ ಕಿಶನ್

ಸೂರ್ಯನಿಗೆ ವಿಶ್ವಕಪ್​ ಚಾನ್ಸ್​.. ಕಷ್ಟ.. ಕಷ್ಟ..!

ಏಕದಿನ ಫಾರ್ಮೆಟ್​ನಲ್ಲಿ ಸೂರ್ಯ ಕುಮಾರ್​​ ವೈಫಲ್ಯ ಮುಂದುವರೆಯಿತು. ಮ್ಯಾನೇಜ್​ಮೆಂಟ್​ ಇಟ್ಟ ಭರವಸೆಯನ್ನ ಮತ್ತೆ ಹುಸಿಯಾಗಿಸಿದ ಸೂರ್ಯ, ಕೇವಲ 24 ರನ್​ಗಳಿಸಿ ಔಟಾದ್ರು. ಇದ್ರೊಂದಿಗೆ ಸೂರ್ಯನ ವಿಶ್ವಕಪ್​ ಆಡೋ ಕನಸು ಬಹುತೇಕ ಕಮರಿತು.

ಇವರಿಷ್ಟೇ ಅಲ್ಲ, ಸ್ಪಿನ್​ ಆಲ್​ರೌಂಡರ್​ ಕೋಟಾದಲ್ಲಿ ಚಾನ್ಸ್​ ಗಿಟ್ಟಿಸಿಕೊಂಡ ಅಕ್ಷರ್​ ಪಟೇಲ್​ ಕೂಡ ಪ್ಲಾಫ್​ ಶೋ ನೀಡಿದ್ರು. 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ 1 ರನ್​ಗೆ ಸುಸ್ತಾದ್ರು.

ವಿಂಡೀಸ್​ ವಿರುದ್ಧದ 2ನೇ ಪಂದ್ಯದ ವೈಫಲ್ಯದೊಂದಿಗೆ ಟೀಮ್​ ಮ್ಯಾನೇಜ್​ಮೆಂಟ್​ನ ಪ್ಲಾನ್​ ಸಂಪೂರ್ಣ ತಲೆಕೆಳಗಾಗಿದೆ. ಹೀಗಾಗಿ 3ನೇ ಏಕದಿನದಲ್ಲಿ ಮತ್ತೆ ಬದಲಾವಣೆಯಾಗೋದು ಖಚಿತ..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟೀಮ್​ನಲ್ಲಿ ಚಾನ್ಸ್​ ಕೊಟ್ಟರೂ ಆಡ್ತಿಲ್ಲ ಯಂಗ್​ಸ್ಟರ್ಸ್​.. ಸೂರ್ಯ​, ಹಾರ್ದಿಕ್​ ಪಾಂಡ್ಯ ಬ್ಯಾಟಿಂಗ್​ ವೈಫಲ್ಯ

https://newsfirstlive.com/wp-content/uploads/2023/07/SURYA_HARDHIK.jpg

Load More