ಕರೆನ್ಸಿ ನೋಟುಗಳ ಅಲಂಕಾರದಲ್ಲಿ ಕಂಗೊಳಿಸುತ್ತಿರುವ ಅಮ್ಮನವರು
ಪಶ್ಚಿಮ ಬಂಗಾಳದ ಕೋನಾಸೀಮಾ ಜಿಲ್ಲೆಯಲ್ಲೊಂದು ವಿಶೇಷ ದೇಗುಲ
3.33 ಕೋಟಿ ರೂಪಾಯಿಯ ಕರೆನ್ಸಿ ನೋಟುಗಳಿಂದ ದೇವಿಯ ಸಿಂಗಾರ
ಈಗ ಇಡೀ ದೇಶದಲ್ಲಿಯೇ ನವರಾತ್ರಿ ವೈಭವ ಕಳೆಗಟ್ಟಿದೆ. ಈ ದೇಶದಲ್ಲಿ ಒಂದೊಂದು ರಾಜ್ಯದಲ್ಲಿ ಒಂದೊಂದು ಬಗೆಯಲ್ಲಿ ನವರಾತ್ರಿಯನ್ನು ಆಚರಿಸುತ್ತಾರೆ. ನಮ್ಮ ನಾಡು ಕರುನಾಡಲ್ಲಿ ದಸರಾ ಬಂದರೆ ಸಾಕು ಎಲ್ಲರ ದೃಷ್ಟಿ ಮೈಸೂರಿನತ್ತ ಹೊರಳುತ್ತದೆ. ಗುಜರಾತ್ ಅಂತ ಬಂದ್ರೆ ಅಹ್ಮದಾಬಾದ್ನ ಗರ್ಭಾ ನೃತ್ಯ, ಮಹಾರಾಷ್ಟ್ರದಲ್ಲಿ ದಾಂಡಿಯಾ ಹೀಗೆ ಇಡೀ ದೇಶವೇ ಒಂದೊಂದು ರೀತಿಯಲ್ಲಿ ಈ ಹಬ್ಬವನ್ನು ವೈಭವದಿಂದ ಆಚರಿಸಿಕೊಂಡು ಶತಮಾನಗಳಿಂದ ಸಾಕ್ಷಿಯಾಗುತ್ತಾ ಬಂದಿದೆ. ಈ ಎಲ್ಲವೂ ಒಂದು ತೂಕವಾದ್ರೆ, ಪಶ್ಚಿಮ ಬಂಗಾಳದಲ್ಲಿ ನಡೆಯುವ ನವರಾತ್ರಿಯದೇ ಒಂದು ತೂಕ. ಅಲ್ಲಿ ದುರ್ಗಾರಾಧನೆ ಇಡೀ ದೇಶದ ಗಮನವನ್ನೇ ಸೆಳೆಯುತ್ತದೆ. ಅಲ್ಲಿಯ ದುರ್ಗಾಪೂಜೆ, ಬಾಂಗ್ಲಾದೇಶದ ಜೇಬು ತುಂಬಿಸುತ್ತದೆ. ಅಲ್ಲಿಯ ದುರ್ಗಾ ಪೂಜೆ ಇಡೀ ರಾಜ್ಯವನ್ನೇ ಹೊಸ ವೈಭವಕ್ಕೆ ತೆಗೆದುಕೊಂಡು ಹೋಗುತ್ತದೆ.
ಇದನ್ನೂ ಓದಿ: ಮಾರುತಿ ಮಹಿಮೆ.. ಪ್ರವಾಹದಲ್ಲಿ ಕೊಚ್ಚಿ ಬಂದ ಹನುಮನ ವಿಗ್ರಹದಿಂದ ಆಶ್ಚರ್ಯ, ಪವಾಡ; ಆಗಿದ್ದೇನು?
ಒಂದಿಲ್ಲೊಂದು ವಿಶೇಷತೆಯಿಂದ ಗಮನ ಸೆಳೆಯುವ ಪಶ್ಚಿಮ ಬಂಗಾಳದಲ್ಲಿ, ಕೋನಾಸೀಮಾ ಜಿಲ್ಲೆಯ ಒಂದು ದುರ್ಗಾ ಮಂದಿರ ಎಲ್ಲರ ಚಿತ್ತವನ್ನು ಕದ್ದಿದೆ. ಒಂದಲ್ಲಾ ಎರಡಲ್ಲಾ ಬರೋಬ್ಬರಿ 3.33 ಕೋಟಿ ರೂಪಾಯಿ ಕರೆನ್ಸಿ ನೋಟಿನಿಂದ ಇಡೀ ದುರ್ಗಾಮಂದಿರವನ್ನೇ ಸಿಂಗರಿಸಲಾಗಿದೆ. ಇಂತಹದೊಂದು ಅಪರೂಪದ ದೃಶ್ಯ ನಮಗೆ ನೋಡಲು ಸಿಗೋದು ಕೊನಾಸೀಮಾ ಜಿಲ್ಲೆಯಲ್ಲಿ. ಇಲ್ಲಿಯ ಆರ್ಯ ವೈಶ್ಯವೈಶ್ಯ ಸಮುದಾಯವು ಆಚರಿಸುತ್ತಿರುವ ನವರಾತ್ರಿ ಹಬ್ಬ ಭಾರೀ ವಿಶೇಷತೆಯಿಂದ ಕೂಡಿದೆ.
ದೇಶದ ಯಾವ ಭಾಗದಲ್ಲಿಯೂ ಕಾಣದ ಅಲಂಕಾರಗಳು ಈ ದೇವಾಲಯದಲ್ಲಿ ನಮಗೆ ಕಾಣಿಸುತ್ತದೆ. ವಾಸವಿ ಅಮ್ಮನವರಿಗೆ ಸುಮಾರು 3.33 ಕೋಟಿ ರೂಪಾಯಿಯ ಕರೆನ್ಸಿ ನೋಟಿನಿಂದ ಅಲಂಕಾರ ಮಾಡಲಾಗಿದೆ. ಅಮ್ಮನ ಸುತ್ತಲೂ ನೋಟಿನಿಂದಲೇ ಅಲಂಕಾರ ಮಾಡಿದ್ದು ಗೋಡೆ ಎಲ್ಲ ಗೋಡೆಗಳು ಕೂಡ ನೋಟಿನಿಂದಲೇ ತುಂಬಿದ ವಿವಿಧ ರೀತಿಯಲ್ಲಿ ನೋಟುಗಳನ್ನು ಹೆಣೆದು ವಿನ್ಯಾಸಗೋಳಿಸಿ ಜೋತು ಬಿಡಲಾಗಿದೆ.
ಇದನ್ನೂ ಓದಿ: Video: ನೃತ್ಯ ಮಾಡುತ್ತಿದ್ದ ವೇಳೆ ಹೃದಯಾಘಾತ.. ಕುಸಿದು ಬಿದ್ದು ಪುಣೆ ‘ಗರ್ಬಾ ಕಿಂಗ್’ ಸಾವು
ನವರಾತ್ರಿಯಂದು ಈ ವಾಸವಿ ಅಮ್ಮನವರ ದರ್ಶನಕ್ಕೆ ಲಕ್ಷಾಂತರ ಜನರು ಹರಿದು ಬರುತ್ತಾರೆ. ಹೀಗಾಗಿ ಅಮ್ಮನವರನ್ನು ವಿಶೇಷವಾಗಿ ಕರೆನ್ಸಿ ನೋಟುಗಳಿಂದ ಸೂಕ್ಷ್ಮವಾಗಿ ವಿವಿಧಾಕಾರದಲ್ಲಿ ವಿನ್ಯಾಸಗೊಳಿಸಿ ಅಲಂಕಾರ ಮಾಡಲಾಗಿದೆ. ಇದು ಸಮೃದ್ಧಿಯ ಪ್ರತೀಕ ಎಂದೇ ಹೇಳಲಾಗುತ್ತಿದೆ. ಸದ್ಯ ವಾಸವಿ ಅಮ್ಮನವರಿಗೆ ಮಾಡಿದ ಈ ಅಲಂಕಾರ ಸೋಷಿಯಲ್ ಮೀಡಿಯಾಗಳಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ಈ ರೀತಿಯಲ್ಲೂ ಅಲಂಕಾರ ಮಾಡಬಹುದಾ ಅಂತ ಜನರು ಹುಬ್ಬೇರಿಸುತ್ತಿದ್ದಾರೆ. 3.33 ಕೋಟಿ ರೂಪಾಯಿ ಅಲಂಕಾರದಲ್ಲಿ ಕಂಗೋಳಿಸುತ್ತಿರುವ ಅಮ್ಮನವರ ದರ್ಶನಕ್ಕೆ ಸದ್ಯ ಲಕ್ಷಾಂತರ ಭಕ್ತರು ಹರಿದು ಬರುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ