ಮಹಿಳೆಗೆ ಕಿರುಕುಳ ನೀಡಿದ್ದ ಆರೋಪ
ಕಿರುಕುಳದಿಂದ ಬೇಸತ್ತು ವ್ಯಕ್ತಿ ಕೊಲೆ..!
ಸ್ನೇಹಿತರ ಜತೆ ಸೇರಿ ಕೊಂದ ಮಹಿಳೆ
ನವದೆಹಲಿ: ತನ್ನ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದ ಎಂದು ಆರೋಪಿಸಿ ಮಹಿಳೆಯೊಬ್ಬರು ವ್ಯಕ್ತಿಯೋರ್ವನಿಗೆ ಚಾಕುವಿನಿಂದ ಇರಿದು ಕೊಂದಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಈ ಕೇಸ್ ಸಂಬಂಧ ಮಹಿಳೆಯೊಂದಿಗೆ ಮತ್ತಿಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.
ಇಂದು ಬೆಳಿಗ್ಗೆ 8.34 ಗಂಟೆ ಸುಮಾರಿಗೆ ದೆಹಲಿಯ ಶಾಸ್ತ್ರಿ ಪಾರ್ಕ್ ಸಮೀಪದ ಬೇಲಾ ಎಂಬ ಫಾರ್ಮ್ನಲ್ಲಿ 20 ವರ್ಷದ ವ್ಯಕ್ತಿಯೋರ್ವನ ಮೃತದೇಹ ಪತ್ತೆಯಾಗಿತ್ತು. ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿದ ದೆಹಲಿ ಪೊಲೀಸ್ರು ಪರಿಶೀಲನೆ ನಡೆಸಿದ್ರು. ಬಳಿಕ ಸ್ಥಳದಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಚೆಕ್ ಮಾಡಿದ್ರು. ಸಿಸಿಟಿವಿ ದೃಶ್ಯಗಳ ಆಧಾರದ ಮೇರೆಗೆ ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಅರೆಸ್ಟ್ ಆದವಱರು..?
20 ವರ್ಷದ ಮಹಿಳೆ, ಉತ್ತರ ಪ್ರದೇಶದ ಮೂಲದ ಮತ್ತೋರ್ವ ವ್ಯಕ್ತಿ ಜತೆಗೆ ಶಾಸ್ತ್ರಿ ಪಾರ್ಕ್ ನಿವಾಸಿ ಇರ್ಫಾನ್ (36) ಎಂಬುವರು ಬಂಧಿತರು. ಪೊಲೀಸ್ ವಿಚಾರಣೆ ವೇಳೆ ಮಹಿಳೆ ತನ್ನನ್ನ ರೇಪ್ ಮಾಡಿದ್ದಕ್ಕಾಗಿ ವ್ಯಕ್ತಿಯನ್ನು ಕೊಂದಿದ್ದೇವೆ ಎಂದು ಬಾಯಿಬಿಟ್ಟಿದ್ದಾರೆ.
ಈ ಸಂಬಂಧ ಮಾತಾಡಿದ ಡೆಪ್ಯೂಟಿ ಕಮೀಷನರ್ ಆಫ್ ಪೊಲೀಸ್ ಜಾಯ್ ಟರ್ಕೀ, ಮೃತ ವ್ಯಕ್ತಿ ಮಹಿಳೆಗೆ ನಿತ್ಯ ಕಿರುಕುಳ ನೀಡುತ್ತಿದ್ದ. ಆಕೆ ಗಂಡ ಸತ್ತ ಮೇಲೆ ಲೈಂಗಿಕವಾಗಿ ಬಳಸಿಕೊಳ್ಳಲು ಪೀಡಿಸುತ್ತಿದ್ದ. ಇದರಿಂದ ಬೇಸತ್ತ ಮಹಿಳೆ ತನ್ನ ಇಬ್ಬರು ಪುರುಷ ಸ್ನೇಹಿತರೊಂದಿಗೆ ಸೇರಿ ಕಿರುಕಿಳ ನೀಡಿದ್ದ ವ್ಯಕ್ತಿಗೆ ಚಾಕುವಿನಿಂದ ಇರಿದು ಕೊಂದಿದ್ದಾರೆ ಎಂದು ಮಾಹಿತಿ ನೀಡಿದ್ರು.
ಪೋಸ್ಟ್ ಮಾರ್ಟಮ್ಗಾಗಿ ಆಸ್ಪತ್ರೆಯತ್ತ ಮೃತದೇಹ
ಮೃತ ವ್ಯಕ್ತಿ ದೇಹದಲ್ಲಿ ಚಾಕುವಿನಿಂದ ಇರಿದ ಹಲವು ಗುರುತುಗಳು ಪತ್ತೆಯಾಗಿವೆ. ಸದ್ಯ ಮೃತದೇಹವನ್ನು ಪೋಸ್ಟ್ ಮಾರ್ಟಮ್ ರಿಪೋರ್ಟ್ಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕಳಿಸಲಾಗಿದೆ ಎಂದು ತಿಳಿದು ಬಂದಿದೆ.
ಪ್ರತಿ ದಿನ ಇಡೀ ದೇಶದ್ಯಾಂತ ನೂರಾರು ಅತ್ಯಾಚಾರ ಕೇಸುಗಳು ವರದಿಯಾಗುತ್ತಲೇ ಇವೆ. ಅದರಲ್ಲೂ ಪೋಷಕರು ತಮ್ಮ ಮಕ್ಕಳನ್ನು ಮನೆಯಿಂದ ಹೊರಗೆ ಕಳಿಸಲು ಹೆದರುತ್ತಿದ್ದಾರೆ. ಹಾಡಹಗಲೇ ಎಷ್ಟೋ ಹೆಣ್ಣುಮಕ್ಕಳನ್ನು ಸಾರ್ವಜನಿ ಸ್ಥಳಗಳಲ್ಲೇ ಕಿಡ್ನಾಪ್ ಮಾಡಿ ರೇಪ್ ಮಾಡಿದ ಕೇಸುಗಳನ್ನು ನಾವು ಕಂಡಿದ್ದೇವೆ. ಇಂಥದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಮಹಿಳೆ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಯೋರ್ವ ಬೀದಿ ಹೆಣವಾಗಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ